Monday, April 25, 2011

ಲೈಫು ಇಷ್ಟೇನಾ ಪುರಂದರ ವಿಠಲ


    ಚಿತ್ರ: ಇಂಟರ್ನೆಟ್ 



"ಕೃಪಯಾ ಬ್ಯಾಂಗಲೋರ್ ಕೋ 
ಜಾನೇವಾಲೇ ಪ್ಯಾಸೆಂಜರ್ಸ್.."
-
ಹೈತಾಪೂರವೆಂಬ 
ಕುಗ್ರಾಸ ಹಳ್ಳಿಗೂ 
ದೆಹಲಿಯ 
ನಿಜಾಮುದ್ದೀನ ಸ್ಟೇಶನ್ನಿಗೂ
ಭಾರತೀಯ ರೈಲ್ವೇದು 
ಒಂದೇ ರೀತಿಯ ಸೇವೆ:
ಒಂದೇ ಧ್ವನಿ
ಒಂದೇ ಏರಿಳಿತ.
ಮಿಕ್ಕಂತೆ 
ಎಲ್ಲಾ differs.
ಎಲ್ಲಾ matters.  
-
ಬರೀ ಕುಡುಗೋಲು 
ಮತ್ತು ಸಿಟ್ಟಿಗೆ
ರೂಪಕವಾಗಿದ್ದ 'ಕೆಂಪು' ಬಣ್ಣ 
ಕಿಂಗ್ ಫಿಷರ್ 
ವಿಮಾನದಲ್ಲಿ ಮಾತ್ರ  
ತಾನೇ ತಾನಾಗಿ 
ಅಮಲೇರಿಸಿಕೊಂಡು
ಕರಗಿದ್ದಂತೂ ಸತ್ಯ.
ಎಲ್ಲೂ ಸಿಟ್ಟಿಲ್ಲ
ಸಿಡುಕಿಲ್ಲ.  
-
ರೈಲಿನಲ್ಲಿ ಕುಳಿತ ಮದುಮಗಳಿಗೆ 
ಅಂಗೈಯಲ್ಲಿನ ಮೆಹಂದಿ 
ಯಾಕೆ ಕೆಂಪೇರಿಲ್ಲ 
ಅನ್ನುವ ಚಿಂತೆ.
ವಿಮಾನದಲ್ಲಿ ಹುರಿದ ಮೀನು 
ತಿನ್ನುತ್ತಿರುವ ಮದುಮಗನಿಗೆ 
ಎಂದೋ ನೋಡಿದ್ದ 
ಯಾರದೋ 
ಮೀನಖಂಡದ ಚಿಂತೆ.
ತೊಟ್ಟ ಬಾಣವ 
ಮತ್ತೇ ತೊಡಬಾರದಂತೆ!
-
ಮೇಲಿರುವವನು ಜಾಣ ಕಣ್ರೀ,
ತುಂಟ ಗಾಳಿ 
ಸೃಷ್ಟಿಸುವವನೂ ಅವನೇ
ತೊಟ್ಟ ಫ್ರಾಕು  
ಹಾರಿಸುವವನೂ ಅವನೇ
ಮತ್ತು
ಇದನ್ನೆಲ್ಲ ನೋಡಬಯಸಿದ 
ನೂರಾರು ಕಣ್ಣುಗಳಲ್ಲಿ 
ಧೂಳು ಚಿಮುಕಿಸುವವನೂ ಅವನೇ.
ಯಾರಿಗೆ 
ಯಾರು ಬೇಲಿ?
ಯಾರಿಗೆ ಯಾರೋ   
ಪುರಂದರ ವಿಠಲ!   

---



21 comments:

Timmanna M H said...

Hi,

Nice "KAVITE" very good.

Timmanna

chand said...

ರೈಲಿನಲ್ಲಿ ಕುಳಿತ ಮದುಮಗಳಿಗೆ
ಅಂಗೈಯಲ್ಲಿನ ಮೆಹಂದಿ ಯಾಕೆ ಕೆಂಪೇರಿಲ್ಲ ಅನ್ನುವ ಚಿಂತೆ.
ವಿಮಾನದಲ್ಲಿ ಹುರಿದ ಮೀನು ತಿನ್ನುತ್ತಿರುವ ಮದುಮಗನಿಗೆ ಎಂದೋ ನೋಡಿದ್ದ ಯಾರದೋ ಮೀನಖಂಡದ ಚಿಂತೆ..!!
.... ಚೆನ್ನಾಗಿದೆ ಸಾಲುಗಳು

Unknown said...

hosa talemarina yuva kavi,hats up,
kick koda kavithe.

Dr.Murali

Unknown said...

sir
nivu nimma kavitheyalli jiva thumbidhiri, nimmantha kavigallige nanna abhinandhanegallu.

Kotresh said...

Joshi Nimma Bhashe Shabda-Bhandra Vishya Jodane excellent mattu Avugal sayojane namma General Knowledge test madisuttade, Ennu Ninnma Gadya Padyagala Nirikeshyalli Eagerly waiting....

Kotresh K said...

Joshi Nimma Bhashe Shabda-Bhandra Vishya Jodane excellent mattu Avugal sayojane namma General Knowledge test madisuttade, Ennu Ninnma Gadya Padyagala Nirikeshyalli Eagerly waiting....

siddu said...

Joshi....ಮೀನಖಂಡದ ಚಿಂತೆ tumba olle rupaka :)

Unknown said...

Nice poem, Thanks for you for using my village name

keep writing

bye

Unknown said...

sorry for late comment....tumba deep aagi understand madkond mele hakbekalwa sir comments...adke swalpa late.....life istena ansibidtu nimmma kavite odida mele...mareyada salugalu......train ..flight ella bandbittive..nimma kathe kavanagalu innu prasiddavagali..salusalagi nim kathe kavangalu barali....ellarannu mechchisali....

sunaath said...

ಅರಪೂರ್ಣ ಕವನ. ಶುಭಾಶಯಗಳು.

Girish Rao H said...

ha ha ha.......parvagilla aparoopakkomme artha aago thara chennagi bareetheeri neevu.....sakaththaagide.....keep writing.....



jyothi...

ರಾಘವೇಂದ್ರ ಜೋಶಿ said...

@ ತಿಮ್ಮಣ್ಣ,ಚಂದ್ರಮುಖಿ,
ಧನ್ಯವಾದಗಳು.ಕವಿತೆ ಇಷ್ಟಪಟ್ಟಿದ್ದಕ್ಕೆ.

@ಮುರಳಿ,ಅರುಣ್
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ.

@ಕೊಟ್ರೇಶ್,
ಆಯಿತು ಸಾರ್,ಇನ್ನಷ್ಟು ಬರೆಯಲು ಪ್ರಯತ್ನಿಸುವೆ.

@ಸಿದ್ದುಜಿ,
ರೂಪರೇಖೆಗಳೇ ಬದಲಾಗುವಾಗ ರೂಪಕವೊಂದೇ ಶಾಶ್ವತವೇನೋ.. :-)

ರಾಘವೇಂದ್ರ ಜೋಶಿ said...

@ಮಲ್ಲಿಕಾರ್ಜುನ,
ಹೈತಾಪೂರದಲ್ಲಿ ಮಾಡಿದ ಊಟ ಮರೆಯಲಾದೀತೇ?
ಹೀಗಾಗಿ ಆ ಊರು ಕವಿತೆಯಲ್ಲಿ ಬಂತು.

@ಹೇಮಾ ಮ್ಯಾಡಂ,
ತಡೆದ ಮಳೆ ಜಡಿದು ಬಂತು ಅನ್ನೋ ಹಾಗೆ
ನಿಮ್ಮ ಕಾಮೆಂಟ್ ಕೂಡ ಜೋರಾಗಿಯೇ ಬಂದಂಗಿದೆ! ಥ್ಯಾಂಕ್ಸ್.

@ಸುನಾಥ್ ಸರ್,
ಅರಪೂರ್ಣ ಕವನ ಅಂತ ಬರೆಯುವಾಗಲೇ ಅನಿಸಿತ್ತು.
Infact, ಪರಿಪೂರ್ಣ ending ಮಾಡಿದ್ದೆ.ಆದರೆ ಕೊನೆ ಘಳಿಗೆಯಲ್ಲಿ edit ಮಾಡಿ 'ಈ ಥರ'
ending ಮಾಡಿದೆ. ಸ್ವಲ್ಪ ವಿಷಾದವಿರಲಿ ಅಂತ...

@ಜ್ಯೋತಿ ಮ್ಯಾಡಂ,
ಅಪರೂಪಕ್ಕೊಮ್ಮೆ? ಹಹಹ...
ಹೀಗಾದರೂ ದರುಶನ ಕೊಟ್ಟಿದ್ದಕ್ಕೆ ನಮಸ್ಕಾರ.

Yatheesha G S said...

Joshi Avare,

Kavithe thumba chennagide...Swalpa thunta tanavannu ee kavitheyalli thumbideeri......Arthapoorna roopakagalu.....Baravanige heege saaguttirali...

Abhinandanegalu.....

Yatish.

ರಾಘವೇಂದ್ರ ಜೋಶಿ said...

@ ಯತೀಶ್ ಅವರೇ,
ತುಂಟತನ ನಮ್ಮನ್ನು ಆರೋಗ್ಯವಂತರನ್ನಾಗಿ ಇಡಬಲ್ಲದು.
ಧನ್ಯವಾದ.

Anonymous said...

nice one

ರಾಘವೇಂದ್ರ ಜೋಶಿ said...

@Vijay Raj,

Thanks for your appreciation. :-)

Manjunatha Kollegala said...

Very nice poem, meaningful expressions.


ತೊಟ್ಟ ಬಾಣವ
ಮತ್ತೇ ತೊಡಬಾರದಂತೆ!
-
ತುಂಟ ಗಾಳಿ
ಸೃಷ್ಟಿಸುವವನೂ ಅವನೇ
ತೊಟ್ಟ ಫ್ರಾಕು
ಹಾರಿಸುವವನೂ ಅವನೇ
ಇದನ್ನೆಲ್ಲ ನೋಡಬಯಸಿದ
ನೂರಾರು ಕಣ್ಣುಗಳಲ್ಲಿ
ಧೂಳು ಚಿಮುಕಿಸುವವನೂ ಅವನೇ.


ತುಂಬ ಮೆಚ್ಚಿದ ಸಾಲುಗಳು

ರಾಘವೇಂದ್ರ ಜೋಶಿ said...

@ಮಂಜುನಾಥ್ ಅವರೇ,
ಕವಿತೆಯ ಸಾಲುಗಳನ್ನು ಮೆಚ್ಚಿಕೊಂಡಿದ್ದಕ್ಕೆ Thanks.
:-)

ಬಾಲು said...

ತುಂಬಾ ಒಳ್ಳೆಯ ಸಾಲುಗಳು ಕಣ್ರೀ. ಕೆಲವು ಪದಗಲಂತೂ ಕಾಡುತ್ತವೆ. :) ಮತ್ತೆ ಮತ್ತೆ ಓದಿ ಕುಶಿ ಪಟ್ಟೆ

ರಾಘವೇಂದ್ರ ಜೋಶಿ said...

@ಬಾಲು ಅವರೇ,
ನನಗೂ ಖುಷಿಯಾಯಿತು ನಿಮ್ಮ ಮೆಚ್ಚುಗೆ ನೋಡಿ.
ಕವಿತೆಯ ಸಾಲುಗಳನ್ನು ಮೆಚ್ಚಿಕೊಂಡಿದ್ದಕ್ಕೆ Thanks.
:-)