Thursday, December 1, 2011

ಒಂದು ಟಾಯ್ಲೆಟ್ಟು!

ಸ್ನೇಹಿತರೆ,
'ಕನಸು-ಕನವರಿಕೆ'ಯಲ್ಲಿನ ಕೆಲವೊಂದು ಬರಹಗಳಿಗೆ ಓದುಗರು ಹ್ಯಾಗೆ ಸ್ಪಂದಿಸುತ್ತಾರೆ ಮತ್ತು ಅದು ಇನ್ಯಾವುದೋ ಮಜಲಿಗೆ,
ಮತ್ಯಾವುದೋ ಒಂದು ಅರಿವಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ ಎಂಬುದಕ್ಕೆ ಕೆಳಗಿನ ಒಂದು ಪ್ರತಿಕ್ರಿಯೆ ಗಮನಿಸಿ.
ನಿಮಗೂ ಖುಷಿಯಾದೀತು. 






ಸರ್,
'ಕನಸು- ಕನವರಿಕೆ'ಯಲ್ಲಿ ಬರಹ "ಕೊಟ್ಟ ಕುದುರೆ ಏರಲಾಗದವ" ಚೆನ್ನಾಗಿತ್ತು.
ಅದರಲ್ಲಿ ಬರುವ 'ಯಾವ ರಾಜನೂ ಪ್ರಜೆಗಳಿಗೆ ಸಂಡಾಸ್ ಮನೆ' ಕಟ್ಟಿಸಲಿಲ್ಲವೇ? ಎಂಬ ಪ್ರಶ್ನೆ ಕುತೂಹಕಲಕರ. ಈಚೆಗೆ ಕನ್ಯಾಕುಮಾರಿ ಪ್ರವಾಸಕ್ಕೆ ಹೋಗಿದ್ದಾಗ, ಮಾರ್ಗ ಮಧ್ಯೆ ಪದ್ಮನಾಭಪುರಂ ಅರಮನೆ ನೋಡಿದೆ. ಅದರಲ್ಲಿ ರಾಜಕುಟುಂಬದ ಸದಸ್ಯರಿಗೆಂದೇ ಶೌಚಾಲಯ ಕಟ್ಟಲಾಗಿದೆ; ಮತ್ತು ಅದು ಈಗಿನ ಶೈಲಿಯಲ್ಲೇ ಇದೆ!
ನಮ್ಮೂರಿನ (ಕೊಪ್ಪಳ) ಸಮೀಪ ಬಹದ್ದೂರ್ ಬಂಡಿ ಎಂಬ ಗ್ರಾಮದ ಹೊರಗೆ ಕೋಟೆಯಿದೆ. ಅಲ್ಲಿ ಸಹ ಕೋಟೆ ಗೋಡೆಯೊಳಗೆ ಶೌಚಾಲಯಗಳಿವೆ. ಪ್ರಾಯಶಃ ಈ ಬಗ್ಗೆ ಸಂಶೋಧಕರು ಇನ್ನಷ್ಟು ಗಮನ ಹರಿಸಬೇಕು ಎಂಬುದು ನನ್ನ ಅನಿಸಿಕೆ.
ಅಂದ ಹಾಗೆ, ನುಣುಪಾದ ಕಲ್ಲಿನಿಂದ ಕಟ್ಟಿದ ಶೌಚಾಲಯದ ಫೋಟೋ ಕಳಿಸುತ್ತಿದ್ದೇನೆ ನೋಡಿ; ಇದು 300 ವರ್ಷಗಳ ಹಿಂದೆಯೇ ಕಟ್ಟಿದ್ದಂತೆ (ಪದ್ಮನಾಭಪುರಂ ಅರಮನೆಯಲ್ಲಿರುವುದು)...!

ವಂದನೆಗಳು

--
 regards
 AnandaTeertha Pyati
 - - - - - - - - - - - - - -
 Sr. Reporter,  'Prajavani'

ಶೀಯುತ ಆನಂದತೀರ್ಥರೇ,
ನಿಮ್ಮ ಪ್ರತಿಕ್ರಿಯೆ ನೋಡಿ ತುಂಬ ಖುಷಿಯೆನಿಸಿತು.ನನಗನಿಸಿದಂತೆ ಒಂದು ಪ್ರಬಂಧಕ್ಕೆ ಸಂಬಂಧಿಸಿದಂತೆ
ನೀವು ಕೊಟ್ಟಿರುವ ಉತ್ತರ ಮತ್ತು ಅಭಿಪ್ರಾಯ ನೋಡಿ ಮನಸ್ಸು ತುಂಬಿದೆ.ಮತ್ತೇ,ನಿಮ್ಮ ಈ ಪತ್ರ ಕುತೂಹಲಕರ 
ಎನಿಸಿದ್ದರಿಂದ ಮತ್ತು ಇಂಥದೊಂದು ವಿಷಯ ಎಲ್ಲರಿಗೂ ಗೊತ್ತಾಗಬೇಕೆಂಬ ಆಸೆಯಿಂದ ನಿಮ್ಮ ಇಡೀ ಪತ್ರದ 
ಸಾರಾಂಶವನ್ನು ಬ್ಲಾಗಿನ ಅನಿಸಿಕೆಗಳಲ್ಲಿ ನಿಮ್ಮ ಪರವಾಗಿ ಹಾಕಬೇಕೆಂದಿದ್ದೇನೆ.ನಿಮ್ಮ ಅನುಮತಿಯಿಲ್ಲದೇ 
ತೆಗೆದುಕೊಂಡಿರುವ ನನ್ನ ಉತ್ಸಾಹಕ್ಕೆ ನಿಮ್ಮ ಕ್ಷಮೆ ಇರಲಿ.. :-)  
ಅನಂತ ಪ್ರೀತಿಯೊಂದಿಗೆ,

-RJ

7 comments:

Manjunatha Kollegala said...

ರಾಜ ಶೌಚಾಲಯ ;) ;)

Badarinath Palavalli said...

ಬುದ್ಧಿಜೀವಿಗಳ ಬ್ಲಾಗ್ ಓದುವುದೇ ಖುಷಿ. ತೀರ್ಥರ ಲೇಖನವೂ ಚೆನ್ನಾಗಿದೆ.

sunaath said...

ಆನಂದತೀರ್ಥರ ಸ್ಪಂದನೆಯನ್ನು blog postನಲ್ಲಿ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು. ಇತಿಹಾಸದ ಮೇಲೆ, ಸಮಾಜದ ಮೇಲೆ ಬೆಳಕು ಚೆಲ್ಲುವ ಈ ಪ್ರತಿಕ್ರಿಯೆಗಾಗಿ ಆನಂದತೀರ್ಥರಿಗೆ ಅಭಿನಂದನೆಗಳು.

Anonymous said...

ನಿಮ್ಮ ಬರಹ ಅನಾಯಾಸವಾಗಿ ಒಮ್ಮೆ ನಗು, ಒಮ್ಮೆ ಬಾಲ್ಯ, ಒಮ್ಮೆ ನೆನಪುಗಳ ಕಚಗುಳಿಯಿಟ್ಟು ಓದಿಸಿಕೊಂಡು ಹೋಗಿ, ಮುಗಿದು ತನ್ನ ಕೈ ತಾನು ಸ್ವಚ್ಛವಾಗಿ ತೊಳೆದುಕೊಂಡು ಆ ಜಾಗ ಬಿಟ್ಟೆದ್ದು ಬಿಡತ್ತೆ. ಬಾಲ್ಯವನ್ನು ಮರುಕಳಿಸಿಕೊಂಡು ಅದರ ಮೆಲುಕಿನಲ್ಲಿ ಒಂದಷ್ಟು ಹೊತ್ತು ಜೀವಿಸಲು ಆಳವಾದ ಅಧ್ಯಯನ ಬೇಕಿಲ್ಲ ನಿಮಗಿರುವ ಸೂಕ್ಷ್ಮ ಮನಸ್ಸು ಸಾಕು, ಇದು ಗೊತ್ತಿರೋ ವಿಷಯಾನೆ. ಇಂತಹ ಬರಹಗಳು ಆಪ್ತತೆಯ ಸಾಮ್ಯತೆಯಿಂದಾಗಿ ಎಲ್ಲರಿಗೂ ಇಷ್ಟವಾಗೋದು ಸಹಜಾತಿಸಹಜ. ಆದರೆ ಆನಂದ ತೀರ್ಥರಿಗೆ ಅಧ್ಯಯನಶೀಲವಾಗಿ ಕಂಡಿದ್ದು ಅವರ ಸಾವಯವ ಕಳಕಳಿ ಮತ್ತು ಸಮಾಜಮುಖಿ ಮನಸ್ಸಿಗೆ ಸಾಕ್ಷಿ.

ಈ ದೇಶದಲ್ಲಿ ಇನ್ನೂ ಕೂಡ ಗಂಡಸಿಗೆ ರಸ್ತೆ ರಸ್ತೆಯಲ್ಲೂ ಲಂಡನ್ ಪ್ರವಾಸ ಮಾಡೋ ಹುಚ್ಚಿದೆ. ಆದರೆ ಪ್ರಕೃತಿಯ ಸೂಕ್ಷ್ಮ ಸೃಷ್ಟಿಯಾದ ಅವಳ ಗತಿಯೇನು ಅನ್ನೋದೂ ಯೋಚಿಸಬೆಕಲ್ಲ್ವಾ? ಒಬ್ಬ ಹೆಣ್ಣು ಮಗಳು ಬಾಲ್ಯದಲ್ಲಿ ವಂಚಿತವಾದ ಲಂಡನ್ ಪ್ರವಾಸದಿಂದ ಅನುಭವಿಸಿರಬಹುದಾದ ಖೇದಗಳನ್ನು ನಿಮ್ಮಷ್ಟು ನವಿರಾಗಿ ಹೇಳಿಕೊಳ್ಳಲು, ಬರೆಯಲು ಸಾಧ್ಯವೇ? ನಿಮ್ಮ ಬರವಣಿಗೆಯನ್ನು ಒಂದೇ ಓಟದಲ್ಲಿ ಓದಿ ಹಿತಾನುಭವ ಪಟ್ಟ ನನ್ನ ಮನಸ್ಸಿನ ಹೊಸ್ತಿಲಿನಲ್ಲಿ ನಂತರ ನಡೆದ ಇಂತಹ ಕಳವಳಗಳ ಕೋಲಾಹಲವನ್ನು ಹಂಚಿಕೊಳ್ಳದಿದ್ದರೆ ನಿಮ್ಮ ಒಳ್ಳೆಯ ಬರಹಕ್ಕೆ ಮಾಡುವ ಮೋಸವಾಗುತ್ತದೆ.

ಹೌದು ಹೌದು ರಾಯರ (ರಾಘವೇಂದ್ರ) ಬಾಲ್ಯ....ಒಮ್ಮೆ ನಕ್ಕರೂ ಅಧ್ಯಯನಶೀಲ ಮನಸ್ಸುಗಳನ್ನು ಕಾಡುವುದು ನಿಜ....ಅದು ಬರಹಗಾರನಿಗೆ ಸಿಗಬಹುದಾದ ಜ್ಞಾನಪೀಠದಂತೆ ಅನ್ನಿಸುತ್ತೆ.

Anjali Ramanna

satish said...

ಜೋಶಿಯವರೇ ,
" ರವಿ ಕಾಣದನ್ನು ಕವಿ ಕಂಡ " ಅನ್ನೋ ಹಾಗೆ ನಾವೆಲ್ಲರೂ ಇಂತ ಅನುಭವಗಳನ್ನು ಜೀವನದಲ್ಲಿ ಒಮ್ಮೆಯಾದರು ಅನುಭವಿಸೇ ಇರುತ್ಹೇವೆ ,ಆದರೂ ನಮ್ಮ ಮನಸಿಗೆ ಹೊಳೆಯೋದೆ ಇಲ್ವಲ್ಲ ಇಂತ ವಿಚಾರಗಳು ,ಹೊಟ್ಟೆಕಿಚ್ ಸಕ್ಕತಾಗಿ ಆಗುತ್ತ ಹಂಗೆ ಖುಷಿನು ಪಡ್ತಾ ಇಷ್ಟು ಸೊಗಸಾಗಿ ಓದಿಸಿಕೊಂಡು ಹೋಗುವ ನಿಮ್ಮ ಬರಹಗಳಿಗೆ ನಾನು ಫಿದ ಆಗೀನ್ ನೋಡ್ರಿಪ .ನಿಮ್ಮ ಬತ್ತಳಿಕೆ ಇಂದ ಇನ್ನು ಇಂತ ನೂರಾರು ವಿಚಾರಗಳು ಹೊರ ಹೊಮ್ಮಲೆಂದು ಆಶಿಸುತ

ಇಂತಿ ನಿಮ್ಮವ ,

ಸತೀಶ್

Anonymous said...

ತುಂಬಾ ಆಶ್ಚರ್ಯವಾಗಿದೆ ಕಥೆ, ನಿಮ್ಮ ಪ್ರಯಾಣ
ಸಂಡಾಸ್ ಚಿತ್ರ :)
ಉತ್ತಮ ಸಂಶೋಧನೆ

Anonymous said...

ನಮಸ್ತೆ ಜೋಶಿ'ಜಿ,
ನನ್ನ ಪುಟ್ಟ ಮಾಹಿತಿ ಇಷ್ಟು ಜನರಿಂದ ಪಡೆದ ಪ್ರತಿಕ್ರಿಯೆ ಖುಷಿ ಮೂಡಿಸಿದೆ. ಹಾಗೆ ನೋಡಿದರೆ, ಈ ಶೌಚಾಲಯ ಕುರಿತ ವಿಚಾರ ನನಗೂ ಮೊದಲಿಗೆ ಗೊತ್ತಿರಲಿಲ್ಲ. ಬಹದ್ದೂರ್ ಬಂಡಿ ಬೆಟ್ಟದ ಮೇಲೆ ಕಟ್ಟಿದ ಬಲಿಷ್ಠ ಕೋಟೆ ಬಗ್ಗೆ ಹತ್ತೆಂಟು ವರ್ಷಗಳ ಹಿಂದೆ ಲೇಖನ ಬರೆಯಲು ವಿಷಯ ಸಂಗ್ರಹಿಸುತ್ತಿದ್ದಾಗ ಕಂಡಿದ್ದು ಕೋಟೆ ಗೋಡೆಯಲ್ಲಿನ ಇಕ್ಕಟ್ಟಾದ ಕೊಠಡಿಗಳು. ತಳದಲ್ಲಿ ಒಂದರ್ಧ ಅಡಿ ಉದ್ದಗಲದ ರಂಧ್ರ. ಸಹಜವಾಗಿ ಕುತೂಹಲದಿಂದ ಅದರ ಮೂಲಕ ನೋಡಿದಾಗ ನೂರಾರು ಅಡಿ ಆಳದಲ್ಲಿ ನೆಲ ಕಾಣಿಸಿ, `ಮೈ ಜುಮ್..' ಎನಿಸಿತು. ಅದರ ಬಗ್ಗೆ ಏನೇನೂ ಮಾಹಿತಿ ಇರಲಿಲ್ಲ.
ನಮ್ಮೂರಿನವರೇ (ಕೊಪ್ಪಳ) ಆದ ಇತಿಹಾಸತಜ್ಞ ಬಿ.ಸಿ.ಪಾಟೀಲ ಅವರನ್ನು ಪ್ರಶ್ನಿಸಿದೆ. ಅದಕ್ಕೆ ಅವರ ಉತ್ತರ: "ಬೆಟ್ಟದ ಮೇಲೆ ಗಲೀಜು ಆಗಬಾರದು ಎಂದು ಕಟ್ಟಿಸಿದ ಶೌಚಾಲಯಗಳು ಅವು. ಅವಿಲ್ಲದೇ ಹೋದರೆ ಅಲ್ಲಿನ ಪರಿಸ್ಥಿತಿ, ವಾತಾವರಣ ಹೇಗಿರುತ್ತದೆ..? ಊಹಿಸು..?"

- ಆನಂದತೀರ್ಥ ಪ್ಯಾಟಿ
ಗುಲ್ಬರ್ಗ