Saturday, December 19, 2015

ಪ್ರೀತಿ ಪ್ರೇಮದೊಂದಿಗೆ ಕಾವ್ಯ, ಕಥನ, ಕಾಲಕ್ಷೇಪ!

ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 19.12.2015 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)


4 comments:

sunaath said...

ಈ ಸಲದ ನಿಮ್ಮ ಮಾಯಾಲಾಂದ್ರದಲ್ಲಿ ಪ್ರೀತಿಯ ಮಾಯೆಯೂ ಇದೆ; ಲಾಂದ್ರದ ಬೆಳಕೂ ಇದೆ. ಎಷ್ಟೆಲ್ಲ ವಿಷಯಗಳನ್ನು ಪ್ರೀತಿಯ ಸುತ್ತ ನವಿರಾಗಿ ಸುತ್ತಿದ್ದೀರಿ ಎಂದರೆ, ಓದುಗನಿಗೆ ಖುಶಿಯೂ ಸಿಗುತ್ತದೆ, ಹೊಸ ಮಿಂಚೂ ಹೊಳೆಯುತ್ತದೆ. ಅಭಿನಂದನೆಗಳು; ಹಾಗು ಮನದುಂಬುವ ಲೇಖನಕ್ಕಾಗಿ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಈ ಫೀಡಬ್ಯಾಕ್ ಖುಷಿಯನ್ನು ತಂದಿತು.
ಧನ್ಯವಾದಗಳು.

Chamaraj Savadi said...

ಪ್ರೀತಿಯ ಜೋಶಿ ಅವರೇ, ನಿಮ್ಮ ಅಂಕಣವನ್ನು ವಿಜಯ ಕರ್ನಾಟಕದಲ್ಲಿ ನಿಯಮಿತವಾಗಿ ಓದುತ್ತ ಬಂದಿದ್ದರೂ, ಪ್ರತಿಕ್ರಿಯೆ ಇಲ್ಲಿ ಹಾಕಲು ಸೋಮಾರಿತನ ಕಾಡುತ್ತಿತ್ತು. ನೀವು ಕಳಿಸುತ್ತಿದ್ದ ಕೊಂಡಿಯನ್ನು ಕ್ಲಿಕ್ ಮಾಡಿ ಎಷ್ಟೋ ಸಲ ಪ್ರತಿಕ್ರಿಯೆ ಹಾಕೋಣ ಅಂತ ಕೂತರೂ ಆಗಲಿಲ್ಲ. ಪ್ರೀತಿಯ ಪರಿಭಾಷೆಗೆ ಇನ್ನೊಂದು ಹೊಳಹು ನೀಡಿದ ಪರಿ ತುಂಬಾ ಇಷ್ಟವಾಯಿತು. ಸಿಗದ ಪ್ರೀತಿಯ ಸೊಗಸು, ಕನಸು ಮತ್ತು ಕನವರಿಕೆ ಸದಾ ಕಾಡುವಂಥದು. ನಿಮ್ಮ ಈ ಸಲದ ಅಂಕಣ ಓದುತ್ತಿದ್ದಂತೆ ಅಂಥ ಎಲ್ಲವೂ ಮತ್ತೆ ನೆನಪಾದವು. ಬರವಣಿಗೆ ಹೊಗಳಿದರೆ ಮುಖಸ್ತುತಿಯಾದೀತು. ಚೆನ್ನಾಗಿ ಬರುತ್ತಿದೆ.
ಪ್ರೀತಿಯ ಪರಿಭಾಷೆ ಬದಲಾಗುತ್ತಿದೆಯೇ ಎಂಬ ಕಳವಳ ಆಗಾಗ ಕಾಡಿದರೂ, ಅದೆಲ್ಲವನ್ನೂ ನಿವಾರಿಸುವಂಥ ಬೆಳವಣಿಗೆಗಳು ನಿತ್ಯ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ವಿವರಣೆಗೆ ಸಿಲುಕದ್ದು ಎಂಬ ಕಾರಣಕ್ಕೇ ಪ್ರೀತಿ ಎಂಬದು ಸದಾ ಸೆಳೆಯುವಂಥದು. ಮತ್ತೆ ಮತ್ತೆ ಕಾಡುವಂಥದು. ಅದರ ತುಣುಕೊಂದು ಈ ಸಲದ ಅಂಕಣದಲ್ಲಿ ಸೊಗಸಾಗಿ ಮೂಡಿಬಂದಿದೆ.
ಹುಡುಕಾಟವೊಂದು ನಿರಂತರವಾಗಿರದಿದ್ದರೆ, ಪ್ರೀತಿ ಸೆಳೆಯುತ್ತಿತ್ತಾದರೂ ಹೇಗೆ?
ಅಲ್ಲವೆ?

ರಾಘವೇಂದ್ರ ಜೋಶಿ said...

ಚಾಮರಾಜರೇ,
ಹೇಗಿದ್ದೀರಿ?
"ಪ್ರೀತಿಯ ಪರಿಭಾಷೆ ಬದಲಾಗುತ್ತಿದೆಯೇ ಎಂಬ ಕಳವಳ ಆಗಾಗ ಕಾಡಿದರೂ, ಅದೆಲ್ಲವನ್ನೂ ನಿವಾರಿಸುವಂಥ ಬೆಳವಣಿಗೆಗಳು ನಿತ್ಯ ಕಣ್ಣಿಗೆ ಬೀಳುತ್ತಲೇ ಇರುತ್ತವೆ.."
ನಿಮ್ಮ ಈ ಮಾತು ತುಂಬ ಹಿಡಿಸಿತು. ಜೊತೆಗೆ ನಿಮ್ಮ ಪ್ರತಿಕ್ರಿಯೆ ಕೂಡ.
ಥ್ಯಾಂಕ್ಸ್.