Saturday, January 16, 2016

ಡಿಯರ್ ಮಿಸ್ಟರ್ ಪ್ರೈಮ್ ಮಿನಿಸ್ಟರ್, ಹೇಗಿದ್ದೀರಿ?

ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 16.01.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

6 comments:

minchulli said...

ಸರ್,

ವಾಹ್ ವಾಹ್ ಅನ್ನದೇ ಇನ್ನೇನನ್ನಲಿ ? ಬಹಳಷ್ಟು ಸಲ ನನ್ನ ಪುಟ್ಟ ಮಗಳು ಈ ಪ್ರಶ್ನೆ ಕೆಳಿದ್ದಳು.

ಈ ಹಿನ್ನೆಲೆ ಇಟ್ಟುಕೊಂಡು ಸಣ್ಣದೊಂದು ಬರಹವನ್ನ ಬರೆಯಲು ಪ್ರಾರಂಭಿಸಿದ್ದೆನಾದರೂ ಪೂರ್ತಿಯಾಗಿರಲಿಲ್ಲ

ಈಗ ನಿಮ್ಮ ಬರಹಗಳು ಅದಕ್ಕೂ ಒಂದು ಹೊಸ ಹೊಳಹು ನೀಡಿತು.

ಧನ್ಯವಾದ. ಎದೆಗೆ ಬಿದ್ದ ಅಕ್ಷರ ಮೈತ್ರಿ ಹಾಗೇ ನೆಲೆಯಾಗಲಿ

sunaath said...

RJ,
Correct and comprehensive article. ಈ ಸಲಹೆಯನ್ನು ಸಂಬಂಧಿಸಿದ ಯಾವದೇ ಅಧಿಕಾರಿ ಅಥವಾ ರಾಜಕಾರಣಿ ಓದಿದರೆ, ಖಂಡಿತವಾಗಿಯೂ ಆತ, ಈ ದಿಸೆಯಲ್ಲಿ ಏನನ್ನಾದರೂ ಮಾಡಬಹುದು ಎಂದು ಅನಿಸುತ್ತದೆ.

Usha Kattemane said...

ಇದು ನಿಮ್ಮ ಲೇಖನಕ್ಕೆ ಸಂಬಂಧಿಸಿದ್ದು ಆಗಿಲಾರದು ಆದರೆ..
ಮೊನ್ನೆ ಮುಂಜಾನೆ ಬೆಂಗಳೂರಿನಿಂದ ಐರಾವತ ಬಸ್ಸಿನಲ್ಲಿ ಮಂಗಳೂರು ಕಡೆ ಹೋಗುತ್ತಿದ್ದೆ. ನನ್ನ ಎಡಗಡೆ ಕಿಟಕಿ ಪಕ್ಕ ಕುಳಿತ ಹುಡುಗಿ ನಿದ್ದೆಗೆ ಜಾರಿದ್ದಳು. ಬಲಗಡೆಯ ಸೀಟಿನಲ್ಲಿ ಒಂದು ದಂಪತಿ ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ಕುಳಿತಿದ್ದರು.ಉಪ್ಪಿನಂಗಡಿಗೆ ಟಿಕೇಟು ತಗೊಂಡಿದ್ದರು. ಅವರು ಎದುರುಗಡೆ ಸೀಟಿನ ಕಂಬಿಗೆ ಎರಡು ಪ್ಲಾಸ್ಟಿಕ್ ಕವರ್ ಗಳನ್ನು ನೇತು ಹಾಕಿದ್ದರು. ಒಂದರಲ್ಲಿ ಕಿತ್ತಳೆ ಹಣ್ಣುಗಳಿದ್ದವು. ಇನ್ನೊಂದರಲ್ಲಿ ಮಕ್ಕಳು ತಾವು ತಿಂದ ಕಿತ್ತಳೆ ಹಣ್ಣುಗಳು, ಚಾಕಲೇಟು ಕವರ್ ಗಳು ಇನ್ನೀತ್ರ ಕಸಗಳನ್ನು ಹಾಕುತ್ತಿದ್ದರು. ಇಷ್ಟೇ ಆಗಿದ್ದರೆ ಮರೆತುಬಿಡುತ್ತಿದ್ದೆನೆನೋ, ಆ ಅಪರಿಚಿತ ಯುವಕ ಕಿತ್ತಳೆ ಹಣ್ಣೊಂದನ್ನು ನನಗೆ ಒತ್ತಾಯಪೂರ್ವಕವಾಗಿ ನೀಡಿದ. ನಾನು ತಗೊಂಡೆ. ಅತನ ಸ್ನೇಹಪರತೆಗೆ ಅದನ್ನು ಅಲ್ಲಿಯೇ ಸುಲಿದು ತಿಂದೆ. ಸಿಪ್ಪೆಯನ್ನು ನನ್ನ ಪ್ಯಾಂಟಿನ ಜೇಬಲ್ಲಿ ಹಾಕಿಕೊಂಡೆ. ಇಳಿಯುವಾಗ ವಿದಾಯ ಹೇಳೋಣವೆಂದುಕೊಂಡೆ. ಆದರೆ ಆತ ನಿದ್ರೆಗೆ ಜಾರಿದ್ದ. ಪಕ್ಕದಲ್ಲಿ ಆತನ ಪತ್ನಿಯಿದ್ದಳು. ಮುಖ ಮಾತ್ರ ಬುರ್ಕಾದ ಹೊರಗಿತ್ತು. ನಾನು ಬರ್ತೀನಿ ಅಂದಾಗ ಬೆಳದಿಂಗಳಂತ ನಗು ಚೆಲ್ಲಿದಳು.
ಎಲ್ಲವನ್ನೂ ಸರಕಾರದಿಂದಲೇ ನಿರೀಕ್ಷಿಸಬಾರದು. ನಾಗರಿಕ ನಡವಳಿಕೆಗಳನ್ನು ನಾವು ಕಲಿಯಬೇಕು, ಪಾಲಿಸಬೇಕು, ಪಾಲಿಸುವವರನ್ನು ಗೌರವಿಸಬೇಕು.

ರಾಘವೇಂದ್ರ ಜೋಶಿ said...

ಮಿಂಚುಳ್ಳಿಯವರೇ,
ನಿಮ್ಮ ಮಗಳು ಕಸ ಹಾಕಲೆಂದು ಡಸ್ಟಬಿನ್ ಕೇಳುತ್ತಿದ್ದಾಳೆ ಅಂದರೆ, ಅಷ್ಟರಮಟ್ಟಿಗೆ ಬುದ್ಧಿಮತ್ತೆಯಲ್ಲಿ ಅವಳು ನಮಗಿಂತ ಮಂದುವರೆದ ಜನಾಂಗದವಳೇ ಆಗಿದ್ದಾಳೆಂದು ಅರ್ಥ. ಅವಳಿಗೆ ನನ್ನದೊಂದು ಪ್ರೀತಿಯ ಸೆಲ್ಯೂಟ್!

ರಾಘವೇಂದ್ರ ಜೋಶಿ said...

ಸುನಾಥ್ ಸರ್,
ನಿಮ್ಮ ಅಭಿಪ್ರಾಯದ ಬಗ್ಗೆ ನನಗೂ ಒಂದಿಷ್ಟು ಆಶಾಭಾವನೆಯಿದೆ. ಯಾರಾದರೂ ಒಂದು ಚಿಕ್ಕ ಪೈಲೆಟ್ ಯೋಜನೆಯನ್ನು ಜಾರಿಗೆ ತಂದಾರು ಅನ್ನುವ ಆಶಾಭಾವ.
ಪ್ರತಿಕ್ರಿಯೆಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಉಷಾ ಕಟ್ಟೇಮನೆಯವರೇ,
ಮೊದಲಿಗೆ ನಿಮಗೆ ಅಭಿನಂದನೆಗಳು. ನಿಮ್ಮ ಕರ್ತವ್ಯವನ್ನು ಸ್ವಪ್ರೇರಣೆಯಿಂದ ನಿಭಾಯಿಸಿದ್ದಕ್ಕಾಗಿ. ಹೌದು, ನೀವು ಹೇಳಿದಂತೆ, ಇವನ್ನೆಲ್ಲ ಯಾವುದೇ ಹೊರಗಿನ ಪ್ರಚೋದನೆಯಿಲ್ಲದೇ ಮಾಡುವಂಥದ್ದು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ನೀಟಾಗಿ ವಿಲೇವಾರಿ ಮಾಡುವಂಥ ವ್ಯವಸ್ಥೆಯನ್ನು ನಮ್ಮ DNA ಇನ್ನೂ ಅಳವಡಿಸಿಕೊಂಡಿಲ್ಲವೆಂದೇ ನನ್ನ ಅನಿಸಿಕೆ. ಇದಕ್ಕೆ ಕಾರಣ ಹಲವಾರು ಇರಬಹುದು. ಮೂಲಭೂತ ಸೌಲಭ್ಯಗಳ ಕೊರತೆ, ಬಹುತೇಕರಲ್ಲಿ ಇರಬಹುದಾದ ಅರಿವಿನ ಕೊರತೆ, ಕಾನೂನಿನಡಿಯಲ್ಲಿ ವಿಧಿಸಬಹುದಾದ ಶಿಕ್ಷೆ/ದಂಡದ ಬಗ್ಗೆ ಆಡಳಿತವೇ ತಾತ್ಸಾರ ಮಾಡಿರುವಂಥದ್ದು- ಹೀಗೆ ಕಾರಣಗಳು ಹಲವಾರಿವೆ ಅಂತನಿಸುತ್ತದೆ..