Saturday, July 16, 2016

ಸೃಷ್ಟಿಯನ್ನು ಭಂಜಿಸುವ ಮುನ್ನ ಸ್ಥಿತಿಗೊಂದು ಲಯ ಕೊಡು!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 16.07.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

8 comments:

ಜಲನಯನ said...

ಛೇ ಹೋಟೆಲ್ ಮಾಲೀಕನ ವಿಮರ್ಶೆಗೆ ನೀವು ಉತ್ತರ ಕೊದಬೇಕಿತ್ತು... ಮಗ ಅಂದಾಗ...!! ಪಾಪ ನಿಮ್ಮ ಗೆಳತಿ ಬರೆಯದೇ ವಿಮರ್ಶೆ ಮಾಡಿಕೊಂಡಳೇನೋ..!!
ಅಂಕಣ ನವಿರಾಗಿ ಕಿಡಿ ಹೊತ್ತಿಸಿ ಧಗಧಗನೆ ಉರಿಯುತ್ತಾ ಸಾಗುತ್ತೆ ಎನ್ನುವುದು ಎಷ್ಟು ನಿಜವೋ..ಕಾಳ್ಗಿಚ್ಚೂ ಮಳೆಯ ಮುಂದೆ ತಣ್ಣಗೆ ಎನ್ನುವ ಹಾಗೆ ಹಾಸ್ಯ ಲೇಪನದ ಅಂತ್ಯ ಬಹಳ ಇಷ್ಟವಾಯಿತು. ನಾನು ಲೇಖಕನೂ ಅಲ್ಲ, ಕವಿಯೂ ಅಲ್ಲ. ಆದರೆ ವೈಜ್ಞಾನಿಕ ಬರಹ ಸಂಶೋಧನಾ ಪತ್ರಗಳ ವಿಮರ್ಶಾತ್ಮಕ ಮೌಲ್ಯಾಂಕನಕ್ಕೆ ವಿವಿಧೆಡೆಗಳಿಂದ ಬರಹಗಳು ಬರುತ್ತವೆ. ಅಲ್ಲಿ ನನಗೆ ಕಾಡುವ ಸಮಸ್ಯೆ ಬಹುಶಃ ಸೃಜನಶೀಲ ಬರವಣಿಗೆಯನ್ನು ವಿಮರ್ಶಿಸುವವರಿಗೂ ಕಾಡಬಹುಧು. ವಿಮರ್ಶಕ ಲೇಖಕನ ಒಟ್ಟಿಗೆ ಪಯಣಿಸುತ್ತಾನೆ ಎನ್ನುವುದನ್ನು ನಾನು ಸ್ವಲ್ಪ ಭಿನ್ನವಾಗಿ ನೋಡುತ್ತೇನೆ. ಒಟ್ಟಾರೆ ಆಶಯವನ್ನು ಗ್ರಹಿಸಬೇಕು ನಿಜ, ಆದರೆ ಲೇಖಕ ಒಂದೇ ಉಸುರಿನಲ್ಲಿ ಎಲ್ಲಾ ಬರೆದಿರುವುದಿಲ್ಲ. ಅದೇ ಭಾವ ವಿರಾಮಗಳಲ್ಲಿ ವಿಮರ್ಶೆಯೂ ಸಾಗಿರುವುದಿಲ್ಲ ಅಲ್ಲವೇ ರಾಘು? ಇಲ್ಲಿ ಒಟ್ಟಾರೆ ಲೇಖನದ ಮೌಲ್ಯಾಂಕನ ಮಾತ್ರ ವಿಮರ್ಶಕ ಮಾಡಬಲ್ಲ ಅನ್ನುವುದು ನನ್ನ ಅಭಿಪ್ರಾಯ, ಬಹುಶಃ ಯಾವ ವಿಮರ್ಶಕನೂ..ಲೇಖನದೊಳಗಿನ ನವಿರು ಕೆತ್ತನೆ, ಭಾವ ಸೂಕ್ಷ್ಮಗಳನ್ನು ಅಳೆಯಲಾರ ಎನಿಸುತ್ತೆ. ಅಂತೂ..ನಿಮ್ಮ ಅಂಕಣ ನನ್ನಲ್ಲಿ ಆಸಕ್ತಿ ಮೂಡಿಸಿದ್ದಂತೂ ನಿಜ ನನ್ನೊಳಗಿನ ಮಂಥನ ಸಾರಾಂಶವಿದು.. "No one is perfect when viewed from the other side" ಎನ್ನುವುದು ನನ್ನ ಫೈನಲ್ ವರ್ಡಿಕ್ಟ್...ಹಹಹ ಶುಭವಾಗಲಿ..ಅಂಕಣ ಇನ್ನೂ ಹೆಚ್ಚು ಹೆಚ್ಚು ಹೋಟೆಲ್ಗಳಲ್ಲಿ ಆಡ್ ಆಗಿಯಾದರೂ ಸರಿ ಓದುವಂತಾಗಲಿ...

Manjunatha K.S said...

ಹಹ್ಹ, ನೀವೇನೇ ಹೇಳಿ, ವಿಮರ್ಶಕ ಆ ಹೋಟೆಲು ಮಾಲೀಕರ ಥರಾ ಕೂಡ ಇರಬಾರದು ಸ್ವಾಮಿ :) ಅಬ್ಬಾ, ಆತ ನಿಜವಾದ ಲಯಕರ್ತೃವೇ ಸರಿ. ಆಕೆ ಗೆಳತಿಯಾದದ್ದಕ್ಕೆ ಸರಿಹೋಯ್ತಲ್ಲ, ನವವಿವಾಹಿತ ಪತ್ನಿಯಾಗಿದ್ದಲ್ಲಿ ಏನು ಗತಿ? ಅಭಿಮಾನಿಗಳತ್ಯುಗ್ರರ್ ಎನ್ನುವುದು ಈ ರೀತಿಯ ಅಭಿಮಾನಿಗಳಿಗೇ ಏನೋ :)

ಯಾವುದೇ ವಿಷಯದ ಮೇಲೆ ಬರೆದರೂ ಅದರಲ್ಲಿ ತಪ್ಪದೇ ಕಾಣುವ ನಿಮ್ಮ ಸೂಕ್ಷ್ಮಗ್ರಾಹಿತ್ವ ನನಗೆ ಬಲು ಇಷ್ಟ. ನಾನು ಕವಿಯೂ ಅಲ್ಲ, ವಿಮರ್ಶಕನೂ ಅಲ್ಲ, ಆದರೂ ಅದೇಕೋ ಕವಿಯ ಬಗ್ಗೆ ಸಹೃದಯ. ಆ ಕಾರಣಕ್ಕೇನೋ ಏನೋ ವಿಮರ್ಶಕರ ಬಗ್ಗೆ ಅದೊಂದು ರೀತಿಯ ಕಂಡೂ ಕಾಣದ ಅಸಹನೆದ್ದದ್ದು ಸುಳ್ಳಲ್ಲ. ಇವತ್ತು ನಿಮ್ಮ ಲೇಖನ ಓದಿದಮೇಲೆ, ವಿಮರ್ಶಕನೆಡೆಗೂ ಒಂದು ಸಹಾನುಭೂತಿಯ, ಅಭಿಮಾನದ, ಆಪ್ತತೆಯ ಎಳೆ ಹರಿದದ್ದೂ ಸುಳ್ಳಲ್ಲ.

ಸೊಗಸಾದ ಲೇಖನ

ಶಾನಿ said...

ತಲ್ಲಣಿಸದಿರಿ, ನಿಮ್ಮ ಗೆಳತಿ ಈ ನಿಮ್ಮ ಸೃಷ್ಟಿಯನ್ನು ಭಂಜಿಸುವ ಸ್ಥಿತಿಯ - ಲಯದ 'ಆ್ಯಡ್' ನೋಡಿರುತ್ತಾರೆ ಬಿಡಿ. ಮತ್ತೆ ಮೆಸೇಜುಗಳು ಹರಿದು ಬಂದಾವು. :-)

sunaath said...

ಜಲನಯನ, ಮಂಜುನಾಥ ಕೊಳ್ಳೇಗಾಲ ಹಾಗು ಶಾನಿಯವರ ಪ್ರತಿಕ್ರಿಯೆಗಳು ಒಳ್ಳೆಯ ವಿಮರ್ಶೆಗೆ ಉತ್ತಮ ಉದಾಹರಣೆಗಳಾಗಿವೆ. ನೀವಂತೂ ವಿಮರ್ಶಕನ ವಿಮರ್ಶೆಯನ್ನು ಸೊಗಸಾಗಿ ಮಾಡಿದ್ದೀರಿ. ಇನ್ನು ವಿಮರ್ಶಕನ ಬಗೆಗೆ ನನ್ನದೂ ಎರಡು ಅಕ್ಕೀಕಾಳು ಒಗೆಯಬೇಕೆಂದರೆ: ವಿಮರ್ಶೆಯು ಕವನದಲ್ಲಿಯ (ಅಥವಾ ಸಾಹಿತ್ಯದಲ್ಲಿಯ) ಸೊಗಸಿಗೆ ಮಾರ್ಗದರ್ಶಿಯಾಗಿರಬೇಕು. ಬೇಂದ್ರೆಯವರ ‘ನಾದಲೀಲೆ’ ಕವನಸಂಕಲನಕ್ಕೆ ಮಾಸ್ತಿಯವರು ಬರೆದ ಮುನ್ನುಡಿಯು ಶ್ರೇಷ್ಠ ವಿಮರ್ಶೆ ಎಂದು ಪ್ರಸಿದ್ಧವೇ ಆಗಿದೆ. ಇಂತಹ ಇನ್ನೆರಡು ವಿಮರ್ಶಾ ಸಾಲುಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ:
(೧) ಮುದ್ದಣನ ರಾಮಾಶ್ವಮೇಧದ ಬಗೆಗೆ ತೀನಂಶ್ರೀ (?)ಬರೆದದ್ದು:
‘ಸಾಮಾನ್ಯದ ಚಿತ್ರಕ್ಕೆ ಸುವರ್ಣದ ಚೌಕಟ್ಟು.
(೨) ರಾ.ಕು. ಅವರು ಬರೆದ ‘ಗಾಳಿಪಟ’ ಹರಟೆಗಳ ಸಂಕಲನಕ್ಕೆ ಬೇಂದ್ರೆಯವರು ಬರೆದ ಮುನ್ನುಡಿಯ ಒಂದು ಸಾಲು:
‘ಇವರ ಹರಟೆಗಳಲ್ಲಿ ಲಾಘವವಿದೆ, ಲಘುತ್ವವಿಲ್ಲ’.

ವಿಚಾರಪ್ರಚೋದಕ, ತಿಳಿಶೈಲಿಯ ಲೇಖನಗಳಿಗಾಗಿ ನಿಮಗೆ ಅಭಿನಂದನೆಗಳು.

ರಾಘವೇಂದ್ರ ಜೋಶಿ said...

'ಜಲನಯನ'ದ ಆಜಾದ್ ಭಾಯ್,
ನಿಮ್ಮ ಪ್ರೀತಿಯ ಮಾತುಗಳಿಗೆ ಆಭಾರಿಯಾಗಿದ್ದೇನೆ.
ಧನ್ಯವಾದಗಳು

ರಾಘವೇಂದ್ರ ಜೋಶಿ said...

ಮಂಜುನಾಥ ಕೊಳ್ಳೇಗಾಲರೇ,
ವಿಮರ್ಶೆಯ ಬಗ್ಗೆ ನಿಮ್ಮ ಮಾತುಗಳನ್ನೋದಿ ಬಿದ್ದು ಬಿದ್ದು ನಕ್ಕಿದ್ದೇನೆ.
ಹಹಹ... "ಅಭಿಮಾನಿಗಳತ್ಯುಗ್ರರ್.." :-D :-D
ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಶಾನಿಯವರೇ,
ನಿಮ್ಮ ಸ್ನೇಹದ ಮಾತಿಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನನ್ನ ಈ ಬರಹಕ್ಕೆ ಸಂಬಂಧಿಸಿದಂತೆ ನೀವು ಹೇಳಿರುವ ತೀನಂಶ್ರೀ ಮತ್ತು ಬೇಂದ್ರೆಯವರ ಮಾತುಗಳು ವಿಶೇಷ ಕಳೆ ತಂದುಕೊಟ್ಟಿವೆ ಅಂತನಿಸುತ್ತದೆ. ನಿಮಗೂ ಧನ್ಯವಾದಗಳು.