Saturday, July 30, 2016

ಜೀವಪರ ಸಾಹಿತ್ಯ ಮತ್ತು ಅವರೇಕಾಳಿನ ಸಾರು!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 30.07.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

6 comments:

ಜಲನಯನ said...

ಲೇಖಕನ ಬರವಣಿಗೆಯ ಕೇಂದ್ರ ಹಿಡಿದು ಏಕಕೇಂದ್ರೀಯ ಪರಿಧಿ ಚಕ್ಕರ್ ಗಳ ವಿಷಯಗಳನ್ನು ಹೆಣೆಯುತ್ತಾ ಹಣೆ ಮುಟ್ಟಿನೋಡಿಕೊಂಡೆ..ನಿಜಕ್ಕೂ ನನ್ನ ಈ ಮಸ್ತಿಷ್ಕದಲ್ಲಿ ಈ ಪರಿಧಿಗಳು ಏಕೆ ಮೂಡುವುದಿಲ್ಲ...? ಬಹುಶಃ ಒಬ್ಬ ಲೇಖಕನಿಗೂ ಒಬ್ಬ ವಿಜ್ಞಾನಿಗೂ ಅದೇ ವ್ಯತ್ಯಾಸವೇನೋ..? ಒಂದು ಗುಂಗಲ್ಲೇ ಆಳಕ್ಕೆ ಹೋಗಿಬಿಡುವ ನಮಗೆ ವಿಸ್ತಾರಗಳು ಆಳದಲ್ಲಿವೆ ಎನಿಸಿದರೆ ಲೇಖಕನಿಗೆ ವಿಸ್ತಾರಗಳು ಕಾಣುವುದು ಸಮಕಾಲದ ಅಗಲಗಳಲ್ಲಿ. ಬಾಲಕನು ಮೊಸಳೆಗೆ ಬಲಿಯಾಗುವ ಅಸಹಾಯಕ ಸ್ಥಿತಿಯ ಮೂರು ಆಯಾಮಗಳ ಬಣ್ಣನೆಯಹಿಂದಿನ ಕಾಳಜಿಗೆ ಬಣ್ಣ ಬಳಿದರೆ ನಿಮ್ಮ ಲೇಖನ ಚಿತ್ರಕಾರನ ಕೃತಿಯಾಯಿತು. ಅಜ್ಜಿಯ ತನ್ನದೇ ತರ್ಕದಲ್ಲಿ ವೈಶಿಷ್ಟ್ಯಕಂಡಿತು... ಅದಕೇ ಏನೋ ಪ್ರತಿಬಾರಿ ನಾನು ನಿಮ್ಮ ಲೇಖನ ಕಂಡಾಗ ಆಗಲೇ ಓದಿದರೆ ಚನ್ನ ಅನಿಸಿ ಓದಿಬಿಡುತ್ತೇನೆ...ನನಗೆ ಪರಿಧಿಗಳನ್ನು ವಿಸ್ತರಿಸುವ ಶಕ್ತಿಯಿಲ್ಲ...ಆಳಕ್ಕೆ ಹೋಗುವ ತವಕವೆಂದೇನೋ...!!! ರಾಘು ಇಷ್ಟವಾಯ್ತು ಬರೆಹ.

sunaath said...

ಅತ್ಯಂತ ಸೊಗಸಾದ ಲೇಖನ. ‘ನಾನೇಕೆ ಬರೆಯುತ್ತೇನೆ’ ಎನ್ನುವ ಪ್ರಶ್ನೆಗೆ ನೀವು ಎತ್ತಿತೋರಿಸಿದ ಉತ್ತರಗಳೂ ಸಹ ಸ್ವಾರಸ್ಯಕರವಾಗಿವೆ. ಅಂತಿಮವಾಗಿ ಗ್ಲೋರಿಯಾ ಹೇಳಿದಂತೆ, ‘ನನಗೆ ಬರೆಯಬೇಕು ಎನಿಸುತ್ತದೆ’ ಎನ್ನುವುದೇ ನಿಜವೇನೊ? ಉದಾಹರಣೆಗೆ ಬೇಂದ್ರೆಯವರನ್ನೇ ತೆಗೆದುಕೊಳ್ಳಿರಿ. ಅವರು ಅನವರತವಾಗಿ ಮಾತನಾಡುವವರು ಅಥವಾ ಕವನಿಸುವವರು. ತಮ್ಮ ಕವನಗಳಲ್ಲಿ ಅವರು ತಮ್ಮ ಓದುಗನಿಗೆ ಸಂದೇಶ, ಭಾಷಣ, ವಾಗ್ವಾದಗಳನ್ನು ಹರಿಸುವುದೂ ಉಂಟು. ಉದಾಹರಣೆಗೆ, ‘ಅಂಬಿಕಾತನಯದತ್ತನ ಕಗ್ಗಾ, ಜಗ್ಗಬ್ಯಾಡಾ ಹಿಗ್ಗಾಮುಗ್ಗಾ, ಒಳಗೈತಿ ಹುರಿ...’ ಎನ್ನುವುದು ಅವರು skeptic ಓದುಗನಿಗೆ ಕೊಡುವ ಎಚ್ಚರಿಕೆ!ಆದರೆ ವಾಸ್ತವವೇನೆಂದರೆ ಅವರ ಅಂತಃಕರಣದಿಂದ ಕವನದ ನದಿಯೊಂದು ಸಹೃದಯನ ಕಡೆಗೆ ಯಾವಾಗಲೂ ಹರಿಯುತ್ತಿರುತ್ತದೆ.ಆದುದರಿಂದಲೇ ಅವರು ಹಾಡಿದರು:
‘ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ.’
ಇನ್ನು ಅವರೆಕಾಳು ಅಜ್ಜಿಯ ನಿದರ್ಶನವಂತೂ ಹೃದಯಸ್ಪರ್ಶಿಯಾಗಿದೆ. ಬದುಕಿನಲ್ಲಿ ಸಿನಿಕರಾಗುತ್ತ ಹೋಗುತ್ತಿರುವ ನಮಗೆ ಇಂತಹ ಉದಾಹರಣೆಗಳು ಬೆಳಕನ್ನು ಕೊಡುತ್ತವೆ.

Suresh said...

ಲೇಖನ ತುಂಬಾ ಚೆನ್ನಾಗಿದೆ. ಎಂದಿನಂತೆ ಕಡೆಯವರೆಗೂ ಒಂದೇ ಉಸಿರಿನಲ್ಲಿ ಓದಿಸಿಕೊಂಡು ಹೋಗುವ ಶೈಲಿ ನಿಮಗೆ ಸಿದ್ಧಿಸಿದೆ.
ನಾ ಬರೆಯುವುದೇಕೆ? ಎಂಬ ಪ್ರಶ್ನೆಯ ಉತ್ತರಕ್ಕೆ ಹಲವಾರು ಮಗ್ಗುಲುಗಳಿವೆ. ಮೊದಲನೆಯದಾಗಿ ಒಳ್ಳೆಯ ಬರಹ ಎಲ್ಲರಿಗೂ ಒಲಿದು ಬರುವುದಿಲ್ಲ. ನೀವು ಹೇಳಿದಂತೆ ಲೇಖನಗಳಲ್ಲಿ ಪಂಗಡಗಳನ್ನು ಸೃಷ್ಟಿಸಿದರೆ, ಲೇಖಕರು ಬರೆಯುವುದಕ್ಕೆ ಪ್ರೇರಣೆ/ ಪ್ರಚೋದನೆಗಳ ಹಲವಾರು ಪಂಗಡಗಳು ಇವೆ. ಕೆಲವರು ಮನಸೋಇಚ್ಛೆ ಬರೆದರೆ, ಕೆಲವರು ಮನಸಾರೆ ಬರೆಯುತ್ತಾರೆ, ಸಮಾಜಮುಖಿ ಕಾರ್ಯಕ್ಕಾಗಿ ಬರೆಯುತ್ತಾರೆ, ಕೆಲವರು ತಮ್ಮ ನಿಲುವನ್ನು ಬಿಟ್ಟು ಆತ್ಮಗೌರವವನ್ನು ಮರೆತು ಬೇರೆಯರ ನಿಲುವುಗಳಿಗೆ ತಕ್ಕಂತೆ ಬರೆಯ ಬೇಕಾಗುತ್ತದೆ, ಸ್ವಪ್ರತಿಷ್ಠೆಗಾಗಿ ಬರೆಯುವರು ಕೂಡ ಇರುತ್ತಾರೆ,ಇನ್ನು ಕೆಲವರು ಒಂದು ವ್ಯಕ್ತಿ/ಬಣವನ್ನು ಹಾಳುಗೆಡವುವ ಉದ್ದೇಶಕ್ಕೆ ಬರೆದರೆ ಅವರಲ್ಲೇ ಕೆಲವರಿಗೆ ಈ ವ್ಯಕ್ತಿ/ಬಣಗಳನ್ನು ಉದ್ಧಾರ ಮಾಡುವ ಹವಣಿಕೆ ಇರುತ್ತದೆ. ಹೊಟ್ಟೆಪಾಡಿಗಾಗಿ ಬರೆಯುತ್ತಾರೆ, ಸಂಪಾದಕರ ಮಾತಿಗೆ ಕಟ್ಟುಬಿದ್ದು ಬರೆಯುವ ಮಂದಿ ಕೂಡ ಇದ್ದಾರೆ. ಇಷ್ಟೆಲ್ಲಾ ಆದಮೇಲೆ ಸಮಾಜವು ಬುದ್ಧಿಜೀವಿಗಳ ಮುಖಾಂತರ ಇವಕ್ಕೆಲ್ಲಾ ಒಂದೊಂದು ಹಣೆಪಟ್ಟಿಯನ್ನು ಕಟ್ಟುತ್ತದೆ. ಒಂದಷ್ಟು ರಾಜಕೀಯದೊಂದಿಗೆ ವಿಮರ್ಶೆಗಳು, ಪ್ರಶಸ್ತಿಗಳು ಲಭಿಸುತ್ತವೆ.
ಇನ್ನು ಮೊಸಳೆಯ ದೃಷ್ಟಾಂತದಲ್ಲಿ ಎಲ್ಲರಿಗೂ ತಮ್ಮದೇ ಆದ ಎಲ್ಲೆಕಟ್ಟುಗಳು ಕೈಕಟ್ಟುವಂತೆ ಮಾಡುತ್ತವೆ ಎಂಬುದೇನೋ ನಿಜ. ತಮ್ಮ ಕೈಯಲ್ಲಾದಷ್ಟು ಕೆಲಸ ಆ ಕ್ಷಣದಲ್ಲಿ ಮಾಡುವುದು ಒಳ್ಳೆಯದು. ಮೂರು ಜನ ಹುಯಿಲೆಬ್ಬಿಸುವುದು, ಕಲ್ಲುಗಳ ಎಸೆಯುವುದು, ಏನೋ ಒಂದು ಮಾಡಲು ಪ್ರಯತ್ನಿಸುವುದು ಮನುಷ್ಯನ ಲಕ್ಷಣ. ಇದರಿಂದ ಹುಡುಗನನ್ನು ರಕ್ಷಿಸಲಾಗುತ್ತದೆಯೇ ಎಂಬುದು ಬೇರೆಯೇ ಪ್ರಶ್ನೆ ಆದರೆ ನಮ್ಮ ಮೇಲೆ ನಾವೇ ಅಭಿಮಾನ ಕಳೆದುಕೊಳ್ಳುವಂತೆ ಮೂಕಪ್ರೇಕ್ಷಕರಾಗಬಾರದು.
ನಿಮ್ಮ ಕಡೆಯ ಸಾಲು "ಅಜ್ಜಿಗೆ ಅವರೇ ಚಿಂತೆ... ರಾ.ಜೋ.ಗೆ ಸ್ವಚ್ಛತಾ ಅಭಿಯಾನದ ಚಿಂತೆ" ಗಾದೆಯನ್ನು ನೆನಪಿಸಿತು. ನಿಜಕ್ಕೂ ನಿಮ್ಮ ಸಾಮಾಜಿಕ ಕಳಕಳಿಗೆ ನಮ್ಮೆಲ್ಲರ ವಂದನೆಗಳು. ಲೇಖನದಲ್ಲಂತೂ ಬರಹಗಾರರು ತಮ್ಮ ಬುಡವನ್ನು ಮತ್ತೊಮ್ಮೆ ಅವಲೋಕಿಸುವಂತೆ ಎಚ್ಚರಿಸಿದ್ದೀರಿ! :)

ರಾಘವೇಂದ್ರ ಜೋಶಿ said...

'ಜಲನಯನ'ದ ಆಜಾದ್ ಭಾಯ್,
ನಿಮ್ಮ ಎಂದಿನ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ಕವನದ ನದಿಯೊಂದು ಸಹೃದಯನ ಕಡೆಗೆ ಯಾವಾಗಲೂ ಹರಿಯುತ್ತಿರುತ್ತದೆ ಅಂತನ್ನುವ ನಿಮ್ಮ ಮಾತು ನನ್ನ ಮನಸ್ಸಿನೊಳಗೆ ಕೂತುಬಿಟ್ಟಿದೆ. ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುರೇಶ್ ಶೆಟ್ಟಿಯವರೇ,
ಬರೆಯುವ ಒಂದು ಮನಸ್ಥಿತಿ ಹಿಂದೆ ಏನೆಲ್ಲ ಮುಖಗಳಿರಬಹುದು ಅಂತನ್ನುವ ಬಹುತೇಕ ಎಲ್ಲಾ ಸಾಧ್ಯತೆಗಳನ್ನು ನೀವು ಅನಾವರಣ ಮಾಡಿರುವಿರಿ ಅಂತ ಕಾಣುತ್ತಿದೆ. :-)
ನಿಮ್ಮ ಪ್ರೋತ್ಸಾಹ ಪ್ರೀತಿಗೆ ಧನ್ಯವಾದಗಳು.