Wednesday, October 25, 2017

ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 25.10.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

7 comments:

Life Journey said...
This comment has been removed by the author.
Life Journey said...

ಹೈಕು ಮತ್ತು ಬದುಕು - ಎರಡೂ ಅದರದರ ಸನಿಹಕ್ಕೆ ಬಂದಷ್ಟೂ ಹೊಸ, ಹೊಸ ಅರ್ಥಗಳನ್ನು ತೆರೆದಿಡುವ ಲೋಕಗಳು. ಪದ - ಪ್ರತಿಮೆಗಳು - ಓದುವವರ/ಬದುಕುವವರ ಮನೋಭಾವ .... ಎಂಬ ಮೂರು ಅಡಿಗಲ್ಲುಗಳ ಮೇಲೆ ನಿಂತ ಆ ಲೋಕಗಳಿಗೆ ಕಾಲ ಎನ್ನುವದು ನಿರಂತರವಾಗಿ ಹೊಸ ಆಯಾಮಗಳನ್ನು ನೀಡುವ ನಾಲ್ಕನೆಯ ಅಡಿಗಲ್ಲು. ಪುಟ್ಟ ಹೈಕುವಿನ ಕೆಲವೇ ಪದಗಳ ಪರಿಣಾಮ ಸದಾ ಮನಸ್ಸಿನಲ್ಲಿ ಉಳಿದು ಕಾಲ ಕಳೆದಷ್ಟೂ, ಕಾಲ ಕಳೆದಂತೆ, ಪದೇ ಪದೇ ಮರುಕಳಿಸುವ ಭಾವಗಳು, ಸ್ಪುರಿಸುವ ಅರ್ಥಗಳು ಮತ್ತಷ್ಟು ಭಾವಾರ್ಥಗಳ ಲೋಕವನ್ನು ತೆರೆದಿಡುತ್ತದೆ.

ಸನಿಹಕ್ಕೆ ಬಂದಷ್ಟೂ ಅರ್ಥಗಳ ಅಗಾಧ ಲೋಕ ತೆರೆದಿಡುವುದೇ ಹೈಕುವಿನ ಜೀವಾಳ! ಹೈಕುವೆಂಬ ಸೋಜಿಗದ ಪ್ರಪಂಚ ಹೇಗೆ ಬದುಕಿಗೆ ಹೋಲುತ್ತದೆ ಎನ್ನುವುದಕ್ಕೆ, ಮೊದಲ ಓದಿಗೆ ಅಸಂಬದ್ಧವೆನಿಸುವ ಬಾಲ್ಯದ ಘಟನೆಯೊಂದನ್ನು ಜೋಡಿಸಿ ಓದುಗರ ಅರ್ಥೈಸಿಕೊಳ್ಳುವ ವಿಸ್ತಾರಕ್ಕೆ ಬಿಟ್ಟುಬಿಡುವ ಅಮೂರ್ತ ಬರಹ!

ದೀಪಾ ಜೋಶಿ said...

ನಿಮ್ಮ ಹಾಯ್ಕುಗಳ ಸೊಬಗು ನಿಜಕ್ಕೂ ಅದ್ಭುತ. ಮರಕುಟಿಕವನ್ನು ಕಂಡು ಹೆದರಿದ ಬೆಕ್ಕಿನಮರಿ ತನ್ನತನವನ್ನು ಮರೆತು ಭುಜಬಲಕ್ಕೆ ಎರವಾದ ಪ್ರಸಂಗವನ್ನು, ತಾನು ಸೀಮೆಗಿಲ್ಲದ ರಣಧೀರನೆಂಬ ಭ್ರಮೆ ಹೊಂದಿದ್ದ ರಾಯನವರೆಗೆ, ಎಳೆಯ ಮನಸ್ಸುಗಳ ಎಳೆಗಳೊಂದಿಗೆ ನೀವು ಹೆಣೆದ ಪರಿ ಅತ್ಯಂತ ಸಹಜ, ಸರಳ ಮತ್ತು ಸುಂದರ.

ರಾಘವೇಂದ್ರ ಜೋಶಿ said...

Life Journey ಅವರೇ,
ನನ್ನ ಇಡೀ ಬರಹದ ಸತ್ವವನ್ನು ನೀವು ಎರಡು ಪುಟ್ಟ ಪ್ಯಾರಗಳಲ್ಲಿ ಕಟ್ಟಿಕೊಟ್ಟಿದ್ದೀರಿ. ನೀವು ಸದರಿ ಬರಹದೊಳಗಿನ ನಗು, ತಮಾಷೆಗಳನ್ನು ಆಸ್ವಾದಿಸಿದ್ದಲ್ಲದೇ ಅದಕ್ಕೂ ಮೀರಿದ ಅನುಭಾವವನ್ನು ನಿಮ್ಮದೇ ಆದ ಅದ್ಭುತ ಅರ್ಥೈಸುವಿಕೆಯ ಮೂಲಕ ನನಗೆ ಸಹಾಯ ಮಾಡಿದ್ದು ಸಂತಸ ನೀಡಿತು.
ಅದಕ್ಕಾಗಿ ಮನಃಪೂರ್ವಕ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ದೀಪಾ ಜೋಶಿಯವರೇ,
ಹಹಹ.. ಬರಹ ನಿಮಗೆ ಖುಷಿ ಕೊಟ್ಟಿದ್ದನ್ನು ನೋಡಿ ನನಗೂ ಖುಷಿ ಕೊಟ್ಟಿತು.
ಧನ್ಯವಾದಗಳು.

sunaath said...

(೧)ಹೈಕುಗಳು ವಿವರಣೆಗೆ ಮೀರಿದ್ದೇ ಆದರೂ ಸಹ, ಕೆಲವೊಮ್ಮೆ ವಿವರಣೆಯಿಂದ ತಿಳಿವು ಹಾಗು ರಂಜನೆ ಹೆಚ್ಚುತ್ತವೆ!
(೨)ಹುಡುಗರಲ್ಲಿ ಭುಜಬಲಕ್ಕಿಂತ ಬಾಯಿಬಲವೇ ಹೆಚ್ಚಾಗಿರುತ್ತದೆ. ಅದು ಸಹ್ಯ. ಅವರು ‘ಅ-ಪ್ರಬುದ್ಧ’ರಲ್ಲವೆ?
(೩)ನಿಮ್ಮ ನೆನಪುಗಳು light & delight ನೀಡುತ್ತಿವೆ.

ರಾಘವೇಂದ್ರ ಜೋಶಿ said...

ಸುನಾಥ ಸರ್,
ಹೌದು, ನೀವು ಹೇಳಿದಂತೆ ಒಮ್ಮೊಮ್ಮೆ ಹಾಯ್ಕುಗಳನ್ನು ಈ ಥರ ಪುಟ್ಟದಾಗಿ ಎಲಾಬರೇಟ್ ಮಾಡುವದು ನನಗೂ ಅತ್ಯಂತ ಖುಷಿ ಕೊಡುವ ಕೆಲಸ ಅಂತನಿಸುತ್ತದೆ. ಹಹಹ, ಹಾಗೆಯೇ ನಿಮ್ಮ ಈ 'ಲೈಟ್ ಅಂಡ್ ಡಿಲೈಟ್' ಅಂತನ್ನುವ ಮಾತು ಕೇಳಿ ನನ್ನಲ್ಲಿ ಮುಗುಳ್ನಗೆ ಮೂಡಿತು. ನಿಜಕ್ಕೂ ಆಹ್ಲಾದಕರ ದಿನಗಳು ಅವು. ಧನ್ಯವಾದಗಳು