Wednesday, November 8, 2017

ಚಿಟ್ಟೆಯ ರೆಕ್ಕೆ ಪಿಡಿದಾಗ ಕೈಗಂಟಿದ ಬಣ್ಣವಿದು!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 08.11.2017 ಬುಧವಾರ
ದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

4 comments:

Anonymous said...

ಹೌದು. ಕವಿತೆಗಿಂತ ಕವಿಮನ ಶ್ರೇಷ್ಠ. ಸುಂದರವಾದ ಲೇಖನ

sunaath said...

ರಾಜೋ, ನಿಮ್ಮ ಈ ಸಲದ ಮಾಯಾಲಾಂದ್ರ ಸ್ವಾರಸ್ಯಕರವಾಗಿದೆ. ಒಂದು ಕೃತಿಯ ಪರಿಚಯವನ್ನು ಮಾಡಿಕೊಡುವ ವಿಶಿಷ್ಟ ಧಾಟಿ ಈ ಸಲದ ನಿಮ್ಮ ಲೇಖನದಲ್ಲಿದೆ. ಕೃತಿಯಲ್ಲಿರುವ ಕವನಗಳ ಬಾಹ್ಯರೂಪವನ್ನು ವರ್ಣಿಸಿರುವದಲ್ಲದೆ, ಆ ಕವನಗಳ ಅಂತರಂಗದ ಮೇಲೂ ತಂಬೆಳಕನ್ನು ಚೆಲ್ಲಿದ್ದೀರಿ. ಕೃತಿಯನ್ನು ಅರಿತುಕೊಳ್ಳಲು ಇದು ಓದುಗರಿಗೂ ಸಹ ಒಂದು ತೋರುದೀಪವಾಗಿದೆ. ಹೊಸ ಕೃತಿಕಾರರಿಗೆ ನೀವು ತೋರಿದ ಮಮತೆ ಪ್ರಶಂಸನೀಯ. ಈ ಪರಿಚಯಲೇಖನವು ಕೃತಿಯ ಮುನ್ನುಡಿಯಾಗಿಯೂ ಸಹ ಉಪಯುಕ್ತವಾಗಬಹುದಿತ್ತು. ಮತ್ತೊಮ್ಮೆ ಹೇಳುತ್ತೇನೆ ರಾಜೋ: ಪತ್ರಿಕೆಯು ವಿಧಿಸಿದ ಪದಮಿತಿಗಳಲ್ಲಿ, ನೀವು ನೀಡಿದ ಹಾಗು ನೀಡುತ್ತಿರುವ ಲೇಖನಗಳು ಅಭಿನಂದನೀಯವಾಗಿವೆ.

ರಾಘವೇಂದ್ರ ಜೋಶಿ said...

ಪ್ರಿಯ Anonymous,
ಹೌದು, ನಿಮ್ಮ ಮಾತಿಗೆ ನನ್ನ ಅನುಮೋದನೆಯೂ ಇದೆ.
ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಜ ಸರ್, ಅಂಕಣದ ಈ ಪದಮಿತಿ ಬಗ್ಗೆ ನನಗೂ ಒಮ್ಮೊಮ್ಮೆ ಬೇಸರವಾಗುವದುಂಟು.
ಅಂದುಕೊಂಡ ಎಷ್ಟೋ ಸಂಗತಿಗಳ ಬಗ್ಗೆ ವಿಸ್ತಾರವಾಗಿ ಹೇಳಲಾಗುವದಿಲ್ಲ. ಹೀಗಾಗಿ ಆಗೀಗ ಇಡೀ ಆಲದಮರವನ್ನು 'ಬೋನ್ಸಾಯ್' ಮಾಡಿಕೊಂಡು ಪ್ರದರ್ಶಿಸಬೇಕಾಗುತ್ತದೆ. ನೀವಿದನ್ನು ಸೂಕ್ಷ್ಮವಾಗಿ ಗಮನಿಸಿದ್ದು ನನಗೆ ಖುಷಿ ಮತ್ತು ಸಮಾಧಾನ ಕೊಟ್ಟಿತು.
ಧನ್ಯವಾದಗಳು.