Wednesday, December 13, 2017

ಚೆಂದವಾಗಿ ನಕ್ಕಳು ರಾಜಕುಮಾರಿ, ನಾನೋ ಶಾಪಗ್ರಸ್ತ ಕಪ್ಪೆಯಾಗಿದ್ದೆ

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 06.12.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

2 comments:

sunaath said...

ರಾಜೋ, ಈ ಸಲ ನೀವು ಒಂದು ಸುಂದರವಾದ ಭಾವಗೀತೆಯನ್ನು ಬರೆದಿದ್ದೀರಿ. ಮೊದಲಿನ ಎರಡು ಹಾಯ್ಕುಗಳು ಎರಡು ವಿಭಿನ್ನ ಭಾವಗಳನ್ನು ಮುಚ್ಚಿಟ್ಟುಕೊಂಡಿವೆ. (ಹಾಯ್ಕುಗಳು ಏನನ್ನೂ ತೆರೆದು ತೋರಿಸುವದಿಲ್ಲ, ಅಲ್ಲವೆ? ಶ್ರೀಕೃಷ್ಣನು ಅರ್ಜುನನಿಗೆ ದಿವ್ಯದೃಷ್ಟಿಯನ್ನು ಕೊಟ್ಟು, ವಿಶ್ವರೂಪವನ್ನು ತೋರಿಸಿದಂತೆ, ನೀವು ಹಾಯ್ಕುಗಳ ಒಳರೂಪವನ್ನು ತೋರಿಸಿದಾಗಲೇ, ಅರ್ಜುನ- ಓದುಗನಿಗೆ ಅದು ಕಾಣುವುದು!)

ಇರಲಿ, ಇಲ್ಲಿಯವರೆಗೆ ಒಂದು ಸುಂದರ ಪಯಣವನ್ನು ಮಾಡುತ್ತಿರುವ ಓದುಗನು, ಮತ್ತೆ ನಿಮ್ಮೊಂದಿಗೆ ಪುಷ್ಪಕವಿಮಾನವನ್ನು ಏರುತ್ತಾನೆ. ಅಲ್ಲಿಯ ನಿಮ್ಮ ಅನುಭವವು ರೋಮಾಂಚಕವಾಗಿದೆ. ಮುಖದ ಮೇಲೊಂದು ಮುಗುಳ್ನಗೆಯನ್ನೂ ಮೂಡಿಸುತ್ತದೆ. ಆಬಳಿಕ ಸಾಲ್ಮನ್ ಖಾನನ ಮೋಹಕ ಚಲನಚಿತ್ರ….ಸರೋವರದಿಂದ ಸಾಗರದವರೆಗೆ!

ಈ ಸಲದ ಲೇಖನವನ್ನು ಓದುವಾಗ, ಸುಂದರವಾದ ಕವನವನ್ನು ಓದುತ್ತಿರುವ ಅನುಭವವಾಯಿತು. ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ಹಾಯ್ಕುಗಳು ಏನನ್ನೂ ತೋರಿಸುವದಿಲ್ಲ ಎನ್ನುವ ನಿಮ್ಮ ಮಾತನ್ನು ಒಪ್ಪಿಕೊಳ್ಳುವೆ. ಯಾಕೆಂದರೆ ಅವು ಯಾರೂ ನೋಡದಿರುವ ಜಲಪಾತದ ದಾರಿಯನ್ನಷ್ಟೇ ತೋರಿಸಬಲ್ಲವೇ ಹೊರತು ಜಲಪಾತವನ್ನು ನಾವಷ್ಟೇ ಹುಡುಕಿಕೊಳ್ಳಬೇಕು. ಅಷ್ಟೇ ಅಲ್ಲ, ಯಾವ ಜಾಗದಲ್ಲಿ ನಿಂತರೆ ಪೂರ್ತಿ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು ಅಂತನ್ನುವದನ್ನೂ ಸಹ ನಾವೇ ಕಂಡುಕೊಳ್ಳಬೇಕು. :-)
ಮಿಕ್ಕಂತೆ, ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು.