Friday, February 21, 2014

ಹಾಯ್ಕು ಅಂದರೆ ಒಂದು ಅಮೀಬಾ!Photo: Internetಹದಿನೇಳರ 
ಕಾಣ್ಕೆ,ರೂಪಕವಾಗಿ
ಹೊಳೆಯುತ್ತಿದೆ.
*

ಹಾಯ್ಕು ಅಂದರೇನು?
ಇದೊಂದು ಬಹುಮುಖ್ಯ ಹಾಗೂ ಬಹುಮುಖಿ ಪ್ರಶ್ನೆ. ಕಣ್ಣಿಗೆ ಕಂಡ ಕವಿತೆಗಳ ಮೇಲೆ ‘ಇದು ಹಾಯ್ಕು..’ ಅಂತೆಲ್ಲ ಆರೋಪ ಹೊರಿಸಬಹುದೇ? ಹಾಯ್ಕು ಅನ್ನುವದು ಗದ್ಯವಾ? ಪದ್ಯವಾ? ಅಥವಾ ಇನ್ನೇನಾದರೂ ಇದರೊಳಗೆ ಉಂಟಾ? ಯಾವುದನ್ನು ನಾವು ಹಾಯ್ಕು ಅಂತ ಗುರುತಿಸಬಹುದು- ಇವೇ ಮೊದಲಾದ ಪ್ರಶ್ನೆಗಳಿಗೆ ಸರಳರೀತಿಯಲ್ಲಿ ವಿವರಿಸಲು ಸಾಧ್ಯವಾದೀತೆ ಅಂತ ಯೋಚಿಸುತ್ತಿದ್ದಾಗ ಈ ಲೇಖನ ಸಿದ್ಧಪಡಿಸುವ ಯೋಚನೆ ಬಂತು.

ಹಾಗೆ ನೋಡಿದರೆಹಾಯ್ಕು ಅನ್ನುವದೇ ನಮಗೆ ಒಂದು ಅಪರಿಚಿತ pronunciation. ತೀರ ಆಳವಾಗಿ ಗಮನಿಸಿದಾಗ ನನ್ನ ಅರಿವಿಗೆ ಬಂದಿದ್ದೇನೆಂದರೆಯಾವುದೇ ಒಂದು ಅಪರಿಚಿತ ಘಟನೆಅಪರಿಚಿತ ಹೆಸರು ಅಥವಾ ಅಪರಿಚಿತ ಉಚ್ಚಾರಣೆ ನಮ್ಮಲ್ಲೊಂದು ಗುಪ್ತ ಆಕರ್ಷಣೆ ಅಥವಾ ಗುಪ್ತ ವ್ಯಾಮೋಹ ಅಥವಾ ಗುಪ್ತ ಸೆಳೆತವನ್ನು ಹುಟ್ಟುಹಾಕಬಲ್ಲದು! 
ಸರಳ ಉದಾಹರಣೆಯೆಂದರೆನಾನು ಇಬ್ಬರು ಅಪರಿಚಿತ ಹುಡುಗಿಯರನ್ನು ಭೇಟಿಯಾಗಬೇಕಿದೆ ಅಂತಿಟ್ಟುಕೊಳ್ಳಿ. ಅವರಲ್ಲಿ ಒಬ್ಬಳ ಹೆಸರು ಸಂಗೀತಇನ್ನೊಬ್ಬಳು ಸ್ಯಾನುರೀಟಾ. ಇಬ್ಬರೂ ನನಗೆ ಪರಿಚಯವಿಲ್ಲ. ಮತ್ತು ನಾನು ಅವರನ್ನು ಒಮ್ಮೆಯೂ ಭೇಟಿಯಾಗಿಲ್ಲ. ಇಂಥ ಸಂದರ್ಭದಲ್ಲಿ ನಾನು ಹೆಚ್ಚು ಕುತೂಹಲ ವ್ಯಕ್ತಪಡಿಸುವದು ಸ್ಯಾನುರೀಟಾಳ ಬಗ್ಗೆ. ಯಾಕೆ ಅನ್ನುವದನ್ನು ಜಾಸ್ತಿ ಇಲ್ಲಿ ವಿವರಿಸಬೇಕಿಲ್ಲ..
ಹಾಯ್ಕು ಕೂಡ ಅಷ್ಟೇ!

ಹಾಗಾದರೆ ಸಮಸ್ಯೆ ಶುರುವಾಗಿದ್ದಾದರೂ ಎಲ್ಲಿ? ನಮಗೆಲ್ಲ ಪ್ರೈಮರಿಯಲ್ಲೇ ದ್ವಿಪದಿತ್ರಿಪದಿ ಗೊತ್ತಾದವು. ದಿನಗಳೆದಂತೆಲ್ಲ ಸರ್ವಜ್ಞಅಕ್ಕ
ಅಲ್ಲಮ, ಪಂಪರನ್ನಸಾನೆಟ್ಟುಷಟ್ಪದಿಗಳನ್ನು ಭೇಟಿಯಾಗುತ್ತ ಬಂದೆವು. ಆದರೆ ಈ ಹಾಯ್ಕು ಮಾತ್ರ ನಮಗೆ ಅಪರಿಚಿತವಾಗಿಯೇ ಉಳಿಯಿತು; ತನ್ಮೂಲಕ ಅದರೊಂದಿಗೆ ಒಂದು ಗುಪ್ತವ್ಯಾಮೋಹ ಬೆಳೆಯುತ್ತ ಬಂತು. ಪರಿಣಾಮವಾಗಿ, ಸಿಕ್ಕಸಿಕ್ಕಿದ್ದಕ್ಕೆಲ್ಲ "ಇದು ನೀನಾಇದು ನೀನೇನಾ..?" ಅಂತ ಕೇಳಿಕೊಳ್ಳುವ ಅಪಾಯ ಕೂಡ ಹೆಚ್ಚುತ್ತ ಬಂತು.

ಬೇಸರದ ಸಂಗತಿ ಇಲ್ಲಿದೆ ನೋಡಿ: ಕುದುರೆ 'L' ಆಕಾರದಲ್ಲಿ ಚಲಿಸುತ್ತದೆಒಂಟೆ ಕ್ರಾಸ್ ಆಗಿ ನಡೆಯುತ್ತದೆಆದರೆ ಮಂತ್ರಿ ಮಾತ್ರ ದಾರಿಯಿದ್ದಲ್ಲಿ ಎಲ್ಲಿ ಬೇಕಾದರೂಹೇಗೆ ಬೇಕಾದರೂ ನುಗ್ಗಬಲ್ಲ- ಅನ್ನುವ ನಿಯಮ ಗೊತ್ತಾಗದೇ ಹೋದರೆ ಚದುರಂಗದ ಆಟ ಆಡುವದಾದರೂ ಹೇಗೆ? ಇಲ್ಲಿನ ನಿಯಮಹೋರಾಟದ ರಮ್ಯತೆ ಮತ್ತು ಸೋಲಿನ ಘನತೆ ನಮಗೆ ಅರಿವಾಗದೇ ಹೋದರೆ ಚೆಸ್ ಆಟದ ಸೌಂದರ್ಯವನ್ನು ನಾವು ಅನುಭವಿಸಲಾರೆವು.

ಹಾಯ್ಕು ಕೂಡ ಅಷ್ಟೇ. ಇಲ್ಲಿ ಕೆಲವೊಂದಿಷ್ಟು ನಿಯಮಗಳಿವೆ. ಹಲವಾರು ಮಜಲುಗಳಿವೆ. ಇಲ್ಲಿನನ್ನ ಅರಿವಿಗೆ ಬಂದಷ್ಟು ಮತ್ತು ನನ್ನ ಅನುಭವಕ್ಕೆ ಸಿಕ್ಕಂಥ ಸಂಗತಿಗಳ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿದ್ದೇನೆ. 

ಹಾಯ್ಕುಗಳ ಗುಣಲಕ್ಷಣ :

ಹಾಯ್ಕು ಅನ್ನುವದು ತುಂಬ ಸಂಕೀರ್ಣವಾದ ಕಾವ್ಯಪ್ರಕಾರವೇನಲ್ಲ. ಅದೊಂದು ಜಾಪಾನಿ ಕಾವ್ಯ ಕಲೆ. ಥೇಟ್ ನಮ್ಮಲ್ಲಿನ ಸರ್ವಜ್ಞನ ವಚನಗಳ ಥರ:ಇಲ್ಲಿನ ತ್ರಿಪದಿಗಳ ಥರ. ಒಂದೇ ಒಂದು ಬದಲಾವಣೆಯೆಂದರೆಇಡೀ ಹಾಯ್ಕುವಿನ format ಮತ್ತು Concept ಒಂದು ಲೌಕಿಕ ಗಣೀತದ ಲೆಕ್ಕಾಚಾರ ಮತ್ತು ದೈವಿಕ ಮೋಹವೆಂಬ ಒಂದು ವಿಚಿತ್ರ ಬಂಧದಲ್ಲಿ ಬಂಧಿತವಾಗಿದೆ.

ಮೊದಲಿಗೆಲೌಕಿಕ ಲೆಕ್ಕಾಚಾರದ ಬಗ್ಗೆ ಗಮನ ಹರಿಸುವ. ಹಾಯ್ಕು ಅಂದರೆ ಮೂರು ಸಾಲಿನ ಪದ್ಯ ಅಂತ ಹೇಳಿದೆನಷ್ಟೇ. ಇಲ್ಲಿ ಮೊದಲ ಸಾಲಿನಲ್ಲಿ ಐದು ಅಕ್ಷರಗಳುಎರಡನೇ ಸಾಲಿನಲ್ಲಿ ಏಳು ಅಕ್ಷರಗಳು ಹಾಗೂ ಮೂರನೇ ಸಾಲಿನಲ್ಲಿ ಮತ್ತೇ ಐದು ಅಕ್ಷರಗಳು ಕಾಣಿಸಿಕೊಳ್ಳುತ್ತವೆ. 
ಅಲ್ಲಿಗೆಅದೊಂದು ಒಟ್ಟು ಹದಿನೇಳು ಅಕ್ಷರಗಳ ಕಾವ್ಯಮಾಲೆ.

ಎಲ್ಲ ಸರಳವಾಗಿದೆಯಲ್ಲ? ಇದರಲ್ಲೇನು ವಿಶೇಷ ಲೆಕ್ಕಾಚಾರ ಬಂತು ಅನ್ನುವಿರಾ? ಹೌದುಅದು ಕೇವಲ ಹದಿನೇಳು ಅಕ್ಷರಗಳ ಲೆಕ್ಕಾಚಾರವಲ್ಲ. ಅದು ಹದಿನೇಳು syllableಗಳ ಲೆಕ್ಕಾಚಾರ. ಹಾಯ್ಕುಗಳಲ್ಲಿ ಸಿಲೇಬಲ್ (ಅಂದರೆಪದಗಳ ಉಚ್ಚಾರಣೆ) ತುಂಬ ಮುಖ್ಯ. ಜಾಪಾನಿಗಳು ಹಾಯ್ಕುಗಳಲ್ಲಿ ಈ ಹದಿನೇಳು ಉಚ್ಚಾರಣೆಗಳು ಮಾತ್ರ ಬರುವ ಹಾಗೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬಹುಶಃ ಜಾಪಾನಿ ಭಾಷೆ ತುಂಬ phonetic ಸೌಲಭ್ಯ ಹೊಂದಿರುವ ಭಾಷೆ. ಅವರ ಅಕ್ಷರಗಳು ಹದಿನೇಳಕ್ಕಿಂತ ಜಾಸ್ತಿಯಾದರೂ ಕೂಡ ಉಚ್ಚಾರ ಮಾತ್ರ ಹದಿನೇಳಕ್ಕೇ ಸೀಮಿತಗೊಳಿಸುವಂಥ ಸೌಲಭ್ಯ ಅಲ್ಲಿನ ಲಿಪಿ ಗಳಿಸಿಕೊಂಡಿರಬಹುದು. ಆದರೆ ನಮ್ಮ ಕನ್ನಡ ಭಾಷೆಯ ಸೊಗಸು ಬೇರೆ. ಇಲ್ಲಿ ಯಾವುದೇ ಸೈಲೆಂಟ್ ಅಕ್ಷರಗಳಿಲ್ಲ. ಏನು ಬರೆಯಬಲ್ಲೆವೊಅದನ್ನು ಸ್ಪಷ್ಟವಾಗಿ ಉಚ್ಚರಿಸಬಲ್ಲೆವು. ಹೀಗಾಗಿ ಕನ್ನಡದಲ್ಲಿ ಸರಿಯಾಗಿ ಹದಿನೇಳು ಅಕ್ಷರಗಳನ್ನು ತುಂಬಿ ಹಾಯ್ಕುವೊಂದನ್ನು ಹೆಣೆಯುವದು ತುಂಬ ಸವಾಲಿನ ಕೆಲಸ. ಇದೇ ಕಾರಣಕ್ಕಾಗಿಯೇ ಬಹಳಷ್ಟು ಸಲಓದುಗರಿಗೆ ಕನ್ನಡದ ಹಾಯ್ಕು ಕಬ್ಬಿಣದ ಕಡಲೆಯಾಗುವದೂ ಉಂಟು. ಹಾಗಾಗಿಯೇ ಸದ್ಯದ ತುರ್ತಿಗೆ ಅಂತ ಈ ಹದಿನೇಳರ ಜಂಜಾಟ ಬಿಟ್ಟುಕೊಟ್ಟು ಹಾಯ್ಕುಗಳ ಇನ್ನಿತರ ಒಳನೋಟಗಳನ್ನು ಬಳಸಿಕೊಂಡು ಈ ಬರಹದ ಮುಂದಿನ ಭಾಗಗಳಲ್ಲಿ ಹಾಯ್ಕುಗಳನ್ನು ಉದಾಹರಣೆಗಳಂತೆ ಬಳಸಿಕೊಂಡಿದ್ದೇನೆ.

ಇರಲಿಇಲ್ಲಿ ಈ ಸಿಲೇಬಲ್ ಗಳ ಲೆಕ್ಕಾಚಾರ ಹ್ಯಾಗೆ ಮಾಡುತ್ತಾರೆ ಅನ್ನುವದನ್ನು ಗಮನಿಸುವ.
ಇಂಗ್ಲೀಷಿನಲ್ಲಿ love ಅನ್ನುವದು ನಾಲ್ಕು ಅಕ್ಷರಗಳನ್ನು ಹೊಂದಿದೆ.ಕನ್ನಡದಲ್ಲಿ ಎರಡು (ಲವ್) ಅಕ್ಷರಗಳನ್ನು ಹೊಂದಿದೆ. ಆದರೆ ಇದನ್ನು ಉಚ್ಚರಿಸುವಾಗ ನಾವು "ಲೌ" ಅನ್ನುತ್ತೇವೆ. ಹೀಗಾಗಿ ಲೆಕ್ಕಾಚಾರದಲ್ಲಿ ಇದು ಒಂದು ಸಿಲೇಬಲ್ ಅಥವಾ ಒಂದೇ ಅಕ್ಷರ ಅಂತಲೇ ಗಣನೆಗೆ ತೆಗೆದುಕೊಳ್ಳಬೇಕು. ಅದೇ ರೀತಿ "ಕಣ್" ಅನ್ನುವದನ್ನೂ ಒಂದೇ ಸಿಲೇಬಲ್ ಅಂತ ಲೆಕ್ಕ ಮಾಡಬೇಕು. ಹಾಗೊಂದು ವೇಳೆ "ಕಣ್ಣು" ಅಂತ ಬಳಸಿದ್ದರೆಅದು ಎರಡು ಸಿಲೇಬಲ್ ಅಂತ ಲೆಕ್ಕಕ್ಕೆ ಬರುತ್ತದೆ. ಹಾಗೆಯೇ "ಬಂಪರ್" ಕೂಡ ಎರಡು ಸಿಲೇಬಲ್. ಬಂಪರು ಅಂತ ನೀವು ಬಳಸಿದರೆ ಅದು ಮೂರು ಸಿಲೇಬಲ್. ಇನ್ನು ದೀರ್ಘಚಿನ್ನೆಗಳು ಮತ್ತು ಅನುಸ್ವಾರ ಅಥವಾ ಒತ್ತಕ್ಷರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ.

ಹೀಗೆ ಲೆಕ್ಕ ಮಾಡಿದ ಮೇಲೆ ನಮ್ಮ ಹಾಯ್ಕು ಒಂದು ಅಂದಾಜಿನಂತೆ ಕೆಳಗಿನ ಫಾರ್ಮ್ಯಾಟ್ ಹೊಂದಿರುತ್ತದೆ.

ಸರಿಗಮಪ (5)
ಸಾರೇಗಾ ಮಪದ ನೀ (7)
ಸರಿಗ ಮಪ  (5) 
         
ಇದೇ ರೀತಿಯಲ್ಲಿ ಒಂದು ಸರಳ ಪದ್ಯ ಬರೆಯುವದಾದರೆ,

ಹಾಯ್ಕು ಗೊತ್ತಿಲ್ಲ, (5)
ಆದರೂ ಬರೀತೇನೆ- (7)
ಉಳೀಬೇಕಲ್ಲ?   (5)

ಹೀಗಂತ ಬರೆದರೆ ಅದನ್ನು ಹಾಯ್ಕು ಅನ್ನಬಹುದೇ?
ಇಲ್ಲ,ಮೇಲಿರುವದನ್ನು ಹಾಯ್ಕು ಅನ್ನಲಾಗದು. ಬೇಕಾದರೆ ಅದನ್ನು ಹಾಯ್ಕುವಿನ ಫಾರ್ಮ್ಯಾಟ್ ಹೊಂದಿರುವ ಹನಿಗವನಮಿನಿಗವನ ಅಥವಾ ಚುಟುಕು ಅಂತೇನಾದರೂ ಹೆಸರಿಸಬಹುದು. ಹಾಗಾದರೆಎಂಥವುಗಳನ್ನು ಹಾಯ್ಕು ಅನ್ನಬಹುದು..

Rule No 1:

ಚಿಟ್ಟೆಸೂರ್ಯಚಂದ್ರಮಂಜುಬೆಟ್ಟಹೊಲಹೊಂಡಬೆಳದಿಂಗಳುರಾತ್ರಿಮಿಂಚುಮಳೆ ಯಾಕೆ ಪದೇ ಪದೇ ಹಾಯ್ಕುಗಳಲ್ಲಿ
ಕಾಣಿಸಿಕೊಳ್ಳುತ್ತವೆ ಅಂತ ನಿಮಗೆ ಅನಿಸಿರಬಹುದು. ಹೌದುಹಾಯ್ಕುವಿನ ಮೊದಲ ನಿಯಮವೆಂದರೆನಿಸರ್ಗದಲ್ಲಿ ನಡೆಯುವ ಘಟನೆ ಅಥವಾ ಬೆಳವಣಿಗೆಗಳನ್ನು ಒಂದು ಮೋಹಕ ಬೆರಗಿನಿಂದ ದಾಖಲಿಸುವದು. ಇನ್ನೂ ಸ್ಪಷ್ಟವಾಗಿ ಹೇಳಬಹುದಾದರೆಸೃಷ್ಟಿಯ ಈ ಬೆಳವಣಿಗೆ ಅಥವಾ ಘಟನೆಗಳಲ್ಲಿ ನಿಮ್ಮ ಪಾತ್ರ ಇರಕೂಡದು. ಅದು ಹೊರಗಿನ ಯಾವುದೇ external force ಇಲ್ಲದೇ ಸ್ವಯಂಪ್ರೇರಿತವಾಗಿ ನಡೆಯುವ ಬೆಳವಣಿಗೆ ಆಗಿರಬೇಕು. ಒಬ್ಬ ಹಾಯ್ಕು ಕವಿ ಇಂಥ ಘಟನೆಗಳನ್ನು ದೂರ ನಿಂತು ಅದನ್ನೆಲ್ಲ ದಾಖಲಿಸುವ ಪ್ರಯತ್ನ ಮಾಡುತ್ತಾನೆಯೇ ಹೊರತುತಾನೇ ಸದರಿ ಘಟನೆಯ ವರ್ತುಲದೊಳಗೆ ನಿಂತುಕೊಳ್ಳಬಯಸುವದಿಲ್ಲ ಅಥವಾ ಇಡೀ ಘಟನೆಯ ಭಾಗವಾಗಲು ಇಷ್ಟಪಡುವದಿಲ್ಲ.
ಜಾಪಾನಿನ ಹಾಯ್ಕುಮಾಸ್ಟರ್ ಮಾತ್ಸೋ ಬಾಶೋ ಬಿಡಿಸಿದ ಹಾಯ್ಕು ಇಲ್ಲಿದೆ:

ಹತ್ತಿಯ ಹೊಲದಲ್ಲಿ
ನಿಂತಾಗ
ಮನಸು ಹೇಳಿತು:
ಬಿತ್ತಿದರೆ
ಚಂದಿರನನ್ನೇ ಬಿತ್ತಬೇಕು!

ಆವತ್ತೊಂದು ದಿನ,ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ನಾನೂ ಪ್ರಯತ್ನಿಸಿದಾಗ ನನಗೆ ಹೊಳೆದಿದ್ದು:  
  
ನೀರಿಗೆಂದು ಬಂದ 
ನಾರಿಯರು
ಚಂದಿರನಿಗೆ ಮೋಹಿತರು;
ಇಲ್ಲೀಗ
ನೂರು ಕೊಡಗಳಲ್ಲೂ 
ನೂರು ಚಂದಿರ. 

ಇಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ: ಒಬ್ಬ ಹಾಯ್ಕು ಕವಿ ಇಂಥ ನಿಸರ್ಗದ ಬೆಳವಣಿಗೆಗಳಿಗೆ ಪ್ರೇರಕ(catalyst)ಶಕ್ತಿ  ಅಥವಾ ತಡೆಗೋಡೆ(preventer)ಯಾಗದೇ ತಟಸ್ಥ ಅಂತರದಲ್ಲಿ ನಿಂತು ದಾಖಲಿಸುವ ಪ್ರಯತ್ನ ಮಾಡುತ್ತಾನೆಯೇ ಹೊರತುತಾನೇ ಸದರಿ ಘಟನೆಯ ವರ್ತುಲದೊಳಗೆ ನಿಂತುಕೊಳ್ಳಬಯಸುವದಿಲ್ಲ ಅಥವಾ ಇಡೀ ಘಟನೆಯ ಭಾಗವಾಗಲು ಇಷ್ಟಪಡುವದಿಲ್ಲ.

Rule No 2 :

ಹಾಯ್ಕುಗಳ ಬಹುಮುಖ್ಯ ಗುಣವೆಂದರೆಅದೊಂದು ಬರೀ ಕವಿತೆಯಾಗದೇ ಒಂದು ಸ್ತಬ್ದಚಿತ್ರವಾಗಿರುವದು.
ಅಂದರೆನೈಸರ್ಗಿಕ ಘಟನೆಗಳನ್ನು ಗಮನಿಸುತ್ತಿರುವಾಗ ಯಾವುದೋ ಒಂದು ಹಂತದಲ್ಲಿ ಘಟಿಸಿಬಿಡುವ ಕ್ಷಣಭಂಗುರದ ಬೆಳವಣಿಗೆಯನ್ನು ಚಿತ್ರಪಟದಲ್ಲಿ ಬಂಧಿಸುವ ಕಲೆ. ಸರಳವಾಗಿ ಹೇಳಬಹುದಾದರೆತಂದೆಯೊಬ್ಬ ತನ್ನ ಪುಟ್ಟ ಕಂದನನ್ನು ಮೇಲಕ್ಕೆ ಎತ್ತಿ ಎತ್ತಿ ಆಡಿಸುತ್ತಿದ್ದಾನೆ. ಮೊದಲಸಲ ತನ್ನ ಅಪ್ಪನ ಕೈಗಳಿಂದ ಗಾಳಿಗೆ ಹಾರುವ ಮಗು ತಾನು ಸುರಕ್ಷಿತ ವಲಯದಿಂದ ಬೇರ್ಪಟ್ಟಿದ್ದಕ್ಕಾಗಿ ಗೊಂದಲಕ್ಕೀಡಾಗುತ್ತದೆ. ಎರಡನೇ ಸಲ ಹಾರಿದಾಗ ಗಾಬರಿಯಾಗಲೂಬಹುದು. ಆದರೆ ಮೂರನೇ ಸಲಕ್ಕೆ ಹಾರಿದಾಗತನ್ನಪ್ಪ ತನ್ನನ್ನು ಕೆಳಕ್ಕೆ ಬೀಳಿಸಲಾರ ಅನ್ನುವ ನಂಬಿಕೆಯೊಂದಿಗೆ ಗಾಳಿಯಲ್ಲೇ ಅದು ನಗು ಬೀರುತ್ತದೆ. ಹಾಗೆ ಗಾಳಿಯಲ್ಲಿ ಹಿತಾನುಭವ ಅನುಭವಿಸುತ್ತಲೇ ಒಂದು ನಂಬಿಕೆಯ ನಗು ಹೊರಡಿಸುವ ಕ್ಷಣ- ಆ ಒಂದು ಕ್ಲಿಕ್- ಹಾಯ್ಕುವಿಗೆ ಜನ್ಮ ನೀಡುತ್ತದೆ!
ಇಲ್ಲಿತಂದೆಯೊಬ್ಬ ಅಳುತ್ತಿರುವ ತನ್ನ ಮಗುವನ್ನು ಎತ್ತಿ ಆಡಿಸಿದ್ದುಅದು ಗಾಬರಿಯಾಗಿದ್ದುಅಳು ನಿಂತಿದ್ದು- ಇವೆಲ್ಲವನ್ನೂ ಒಟ್ಟಾಗಿ ಸೆರೆ ಹಿಡಿದರೆ ಅದು ಕವಿತೆ. ಆದರೆ ಮಗುವಿನ ನಗುವ ಕ್ಷಣವನ್ನು ಚಿತ್ರಿಸಿದರೆ ಅದು ಹಾಯ್ಕು. 

ಹೀಗೆ ಒಂದು ಕ್ಷಣದ ಘಟನೆಯನ್ನು ಹೇಗೆ ಹಾಯ್ಕುಗಳಲ್ಲಿ ಸೆರೆ ಹಿಡಿಯುವದು? ಇದನ್ನು ಒಂದು pictorial example ಮೂಲಕ ತೋರಿಸಬಹುದೆ?
ಅಂತ ಯೋಚಿಸಿದಾಗ ಕೆಳಗಿನ ಚಿತ್ರ ಕಣ್ಣೆದುರಿಗೆ ಬಂತು.   
   
Photo: Internetಇಲ್ಲಿ ನೋಡಿ: ಈ ಪಕ್ಷಿಗಳು ಎಲ್ಲಿಂದಲೋ ಬಂದವುಗಳು. ಮತ್ತು ಎಲ್ಲಿಗೋ ಹೊರಟಿವೆ. ಅವೆಲ್ಲ ಎಲ್ಲಿಂದ ಬಂದವು,ಯಾಕೆ ಬಂದವು ಮತ್ತು ಎಲ್ಲಿಗೆ ಹೊರಟಿವೆ ಅಂತ ಕಲ್ಪನೆ ಮಾಡಿಕೊಂಡರೆ ಅದು ಕವನವಾದೀತು. ಪಟ್ಟಾಗಿ ಕುಳಿತು ಅಭ್ಯಸಿಸಿದರೆ ಹಕ್ಕಿಗಳ ಬಗ್ಗೆ ಅದೊಂದು ಸ್ಟಡಿ ಮೆಟೀರಿಯಲ್ ಆದೀತು. ಆದರೆ ಇಲ್ಲಿ ಅವು ಆಕಾಶದಲ್ಲಿ ಹಾರಾಡುತ್ತಿರುವಾಗ ಯಾವುದೋ ಒಂದು ಕ್ಷಣದಲ್ಲಿ,ಯಾವುದೋ ಒಂದು ಕೋನದಲ್ಲಿ ತಮಗರಿವಿಲ್ಲದೇ ಒಂದು ಭಾವವನ್ನು ಮೂಡಿಸಿಬಿಟ್ಟಿವೆ. ಹಾಗೆ ಮೂಡಿಸಿದ ಭಾವ ಯಾವುದೆಂದು ಕೂಡ ಅವುಗಳಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅದೊಂದು ನಗುವಿನ ಭಾವ ಅಂತ ಹಾಯ್ಕು ಕವಿಗೆ ಗೊತ್ತಾಗಿದೆ. ಮತ್ತು ಆತ ಸರಿಯಾಗಿ ಅದೊಂದೇ ಕ್ಷಣವನ್ನು ತನ್ನ ಹಾಯ್ಕುಗಳಲ್ಲಿ ಒಂದು ಬೆರಗಿನ ಮೂಲಕ ಚಿತ್ರಿಸುತ್ತಾನೆ.

ಹಾಗೆ ಮೂಡಿದ ಕ್ಷಣಗಳು ಯಾವುದ್ಯಾವುದು ಅಂತ ಯೋಚಿಸಿದಾಗ ಬಾಶೋ ಮತ್ತೇ ನೆನಪಿಗೆ ಬಂದ:

ಇಲ್ಲಿ ನೋಡಿರಿ: ಇಲ್ಲಿ ಬಾಶೋ ಹೊಂಡವೊಂದರಲ್ಲಿ ನಡೆಯುವ ಘಟನೆಗಳನ್ನು ಗಮನಿಸುತ್ತಿದ್ದಾನೆ. ಇದೊಂದು ಶಾಂತ ಹೊಂಡ. ತಿಳಿನೀರಿನಲ್ಲಿ ಆಗಸದ ಚಂದ್ರ ಸ್ಪಷ್ಟವಾಗಿ ಬಿಂಬಿತಗೊಂಡಿದ್ದಾನೆ. ಅಂಥ ಸಮಯದಲ್ಲಿ ಅಚಾನಕ್ಕಾಗಿ ಕಪ್ಪೆಯೊಂದು ನೀರಿಗೆ ನೆಗೆದಿದೆ. ಸರಿಯಾಗಿ ಚಂದ್ರನ ಪ್ರತಿಬಿಂಬದ ಮೇಲೆಯೇ ಜಿಗಿದಿದೆ ಮತ್ತು ನೀರಿನಾಳಕ್ಕೆ ಹೋಗಿದೆ. ಇದೊಂದು ನಿಸರ್ಗದಲ್ಲಿ ನಡೆಯಬಹುದಾದ ಸಹಜಾತಿಸಹಜ ಕ್ರಿಯೆ. ನಮ್ಮಂಥವರು ಗಮನಕೊಡದಿರುವಂಥ ಚಟುವಟಿಕೆ. ಆದರೆ ಈ ಇಡೀ ಘಟನೆಯನ್ನು ಹಾಯ್ಕು ಮಾಸ್ಟರ್ ಬಾಶೋ ಚಿತ್ರಿಸುವ ಪರಿ ನೋಡಿ:

ಚಂದಿರನನ್ನೇ 
ಛೇದಿಸುವ
ಕಲೆ
ಈ ಕಪ್ಪೆಗೆ
ಯಾರು ಕಲಿಸಿದರಪ್ಪ?

ಹಾಗೆಯೇಇನ್ನೊಬ್ಬ ಹಾಯ್ಕು ಮಾಸ್ಟರ್ ಮಸಯೋಕಾ ಶಿಕಿ ಬರೆದ ಹಾಯ್ಕು ಗಮನಿಸುವದಾದರೆ,

ಸುರಂಗದಲ್ಲಿ 
ಹರಿದು ಹೋದ 
ರೈಲಿನ ರಭಸಕ್ಕೆ 
ಎಳೆಯ ಗರಿಕೆಯೊಂದು 
ಚಿತ್ತಭ್ರಮೆಗೊಳಗಾಗಿದೆ!

ಅದೇ ರೀತಿ ನಾನೂ ಪ್ರಯತ್ನಿಸಿದೆ: ಇಲ್ಲೊಂದು ಖಗ್ರಾಸ ಸೂರ್ಯಗ್ರಹಣ ನಡೆಯುತ್ತಲಿದೆ. ನಾನು ನಿಂತಿರುವ ಹೊಲದಲ್ಲಿ ಸೂರ್ಯಕಾಂತಿಯ ಬೆಳೆಯಿದೆ.  ಸೂರ್ಯಕಾಂತಿ ಹೂವು ಯಾವಾಗಲೂ ಸೂರ್ಯನತ್ತ ಮುಖ ಮಾಡುತ್ತದೆ ಅಂತ ನಮಗೆಲ್ಲರಿಗೂ ಗೊತ್ತು. ಯಾಕೆಂದರೆ ಸೂರ್ಯನ ಬೆಳಕೇ ಅದರ ಆಹಾರ. ಅದು ಸೃಷ್ಟಿ ನಿಯಮವಿರಲಿಕ್ಕೂ ಸಾಕು. ಆದರೆ ಸೂರ್ಯಗ್ರಹಣದ ಯಾವುದೋ ಒಂದು ಹಂತದಲ್ಲಿ ಸುತ್ತಲೂ ಕತ್ತಲು ಕವಿದಿರುವಾಗ ಒಂದು ಸೂರ್ಯಕಾಂತಿಯ ಹೂವನ್ನು ಅದ್ಯಾರೋ ಯಾವುದೋ ದಿಕ್ಕಿಗೆ ಬಾಗಿಸಿಬಿಟ್ಟಿದ್ದಾರೆ. ಇಂಥ ನೋಟವನ್ನು ನೋಡಿದಾಗ ನನಗೆ ಕಂಡ ನೋಟ ಕೆಳಗಿದೆ:

ಖಗ್ರಾಸ ಸೂರ್ಯಗ್ರಹಣ.
ನೂರಾರು
ಸಖಿಯರ ಮಧ್ಯೆ
ಸೂರ್ಯಕಾಂತಿಯೊಂದು 
ದಿಕ್ಕುತಪ್ಪಿ 
ಕಳವಳಗೊಂಡಿದೆ.. 

ಹೀಗೆ ಘಟನೆಯೊಂದರ ತಾತ್ಕಾಲಿಕ ಕ್ಷಣವೊಂದನ್ನು ಮಾನವೀಯ ಗುಣದೊಂದಿಗೆ ಒಂದು ಚೌಕಟ್ಟಿನಲ್ಲಿ ಚಿತ್ರಿಸುವದರ ಮೂಲಕ ಹಾಯ್ಕುಗಳನ್ನು ಕಟ್ಟಬಹುದು. ಈ ನಿಯಮದ ಬಗ್ಗೆ ಒಟ್ಟಾರೆಯಾಗಿ ಹೇಳುವದಾದರೆ: Experience the moment, Freeze it, Get mesmerised yourself, Extend it and show it to them; but NOT to explain..! 

 Rule No 3 :

ನಾನು ಆಗಲೇ ವಿವರಿಸಿದಂತೆಹಾಯ್ಕು ಕವಿಯೊಬ್ಬ ಪ್ರಕೃತಿಯಲ್ಲಿನ ಅಸಂಖ್ಯಾತ ಬೆಳವಣಿಗೆಗಳಲ್ಲಿ ಒಂದು 'ನೋಟ'ವನ್ನು ಗಮನಿಸುತ್ತಲೇ ಇರುತ್ತಾನೆ. ಅದು ಮಾನವೀಯ ನೋಟ ಇರಬಹುದುಪ್ರೀತಿಯ ನೋಟ ಇರಬಹುದುಬೆರಗಿನ ನೋಟ ಇರಬಹುದುಅಥವಾ ಕುತೂಹಲದ ನೋಟ ಇರಲಿಕ್ಕೂ ಸಾಕು. ಆದರೆ ಎಲ್ಲದರಲ್ಲೂ ಒಂದು ಅಗೋಚರವಾದ divine ಸ್ಪರ್ಶವಿದ್ದೇ ಇರುತ್ತದೆ. ಹಾಗಾಗಿ ಅದು ಬರೀ ನೋಟವಲ್ಲಅದೊಂದು ಕಾಣ್ಕೆ!
ಬೇಂದ್ರೆಯವರಿಗೆ ಕಂಡಿದ್ದೂ ಇದೇ ಕಾಣ್ಕೆ. ಬಹುಶಃ 'ಬೆಳಗು' ಎಂಬುದನ್ನು ಅವರು ಬರೀ ನೋಟದಲ್ಲಿ ಸೆರೆ ಹಿಡಿದಿದ್ದರೆ ಅವರು ಇನ್ನೇನೋ ಚಿತ್ರಿಸುತ್ತಿದ್ದರು. ಆದರೆ ಬೆಳಗಿನಲ್ಲಿ ಅವರು ಕಂಡಿದ್ದು ಕಾಣ್ಕೆ. ಹೀಗಾಗಿ,ಅದಕ್ಕವರು "ಇದು ಬರೀ ಬೆಳಗಲ್ಲೋ ಅಣ್ಣಾ.." ಅಂದರು ಅಂತ ನನ್ನ ಅನಿಸಿಕೆ.
ಇರಲಿಮೂರನೇ ನಿಯಮಕ್ಕೆ ಬರುವದಾದರೆಯಾವುದೇ ಹಾಯ್ಕುಕವಿ ತನ್ನ ಹಾಯ್ಕುಗಳಲ್ಲಿ ಬರೀ ತಾನು ಕಂಡ ಕಾಣ್ಕೆಯನ್ನಷ್ಟೇ ಚಿತ್ರಿಸುವದಿಲ್ಲ. ಬದಲಿಗೆ ಸದರಿ ಕಾಣ್ಕೆಯನ್ನು ಒಂದು ರೂಪಕ ಅಥವಾ ಇನ್ನೊಂದು elementನೊಂದಿಗೆ ಜೋಡಿಸುವದರ ಮೂಲಕವೋ ಅಥವಾ ಹೋಲಿಸುವದರ ಮೂಲಕವೋ- ಆ ಇಡೀ ಘಟನೆಯನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯುತ್ತಾನೆ.
ಮತ್ತು ಆ ಮೂಲಕ ಇಡೀ ಹಾಯ್ಕುವನ್ನು ಹೊಸ ಎತ್ತರಕ್ಕೆ ಏರಿಸುತ್ತಾನೆ..

ಜಾಪಾನಿನ ಮತ್ತೊಬ್ಬ ಹಾಯ್ಕು ಮಾಸ್ಟರ್ ಯೋಸಾ ಬೂಸಾನ್  ತನ್ನ ಹಾಯ್ಕುಗಳಲ್ಲಿ ಕಂಡಿದ್ದು ಇಲ್ಲಿದೆ ನೋಡಿ:

ಪ್ರಾರ್ಥನೆಗೆಂದು ಬಂದ 
ಸಂತನ ಕೈ
ಹಿಂಜರಿದಿದೆ;
ಮಂದಿರದ 
ಗಂಟೆಯ ಮೇಲೆ
ಚಿಟ್ಟೆಯೊಂದು ನಿದ್ದೆಹೋಗಿದೆ!

ಬಾಶೋ ಇನ್ನೊಂದು ಉದಾಹರಣೆ:

ಆಹ್ ಎಂಥ ಸಂಜೆಯಿದು!
ಮಂದಿರದ ಗಂಟೆಗಳು 
ನಿಶ್ಚಲವಾದಂತೆಲ್ಲ 
ತೋಟದ ಹೂಗಳ
ಪರಿಮಳಕ್ಕೆ 
ನವಚೇತನ ಬಂದಂತಿದೆ.. 

ಇಲ್ಲೊಬ್ಬ ಪೋರ ಕಾಡಿನ ಹಾದಿಯಲ್ಲಿ ಮನೆಗೆ ಹಿಂತಿರುಗಬೇಕಿದೆ. ಅಮಾವಾಸ್ಯೆಯ ರಾತ್ರಿ ಬೇರೆ.ದಾರಿ ಸವೆಯುತ್ತಿರುವಾಗ ಒಬ್ಬಂಟಿ ಹುಡುಗನ ಭಯದ ಮನದಲ್ಲಿ ಹೆಜ್ಜೆಹೆಜ್ಜೆಗೂ ವಿಘ್ನಗಳು ಎದುರಾಗುತ್ತಿವೆ. ಅಸಲಿಗೆ ಅಲ್ಲಿ ಏನೂ ಅಪಾಯ ಇಲ್ಲದಿರಬಹುದು. ಅಪಾಯ ಆತನ ಮನದಲ್ಲೇ ಮನೆಮಾಡಿರಬಹುದು. ಇಂಥ ಸಮಯದಲ್ಲಿ ಈ ಪೋರ ಆ ಕಾಡಿನ ದಾರಿಯನ್ನು ಹೇಗೆ ಕ್ರಮಿಸಿರಬಹುದು ಅಂತ ಯೋಚಿಸಿಹಾಯ್ಕುವಿನ 
5-7-5 ಫಾರ್ಮ್ಯಾಟ್ ನಲ್ಲೇ ಹಾಯ್ಕು ಬರೆಯುವ ಪ್ರಯತ್ನ ಮಾಡಿದೆ:

ಕತ್ತಲ ಹಾದಿ.
ಪೋರನಿಗೆ ಹಾಡೊಂದೇ
ಆಪತ್ಬಾಂಧವ!

ಹೀಗೆ ಹಾಯ್ಕುಗಳ ಕುರಿತಂತೆ ಸಾಂಪ್ರದಾಯಿಕ ನಿಯಮಗಳ ಜೊತೆಜೊತೆಗೇ ಯಾವುದನ್ನೂ ವರ್ಣಿಸದಿರುಆದಷ್ಟು ಗುಣವಾಚಕಗಳನ್ನು ಬಳಸದಿರುಸಹಜವಾಗಿರುಸರಳವಾಗಿರು ಅನ್ನುವ ನಿಯಮಗಳೂ ಇವೆ. ಹಾಗೆಯೇ ಹಾಯ್ಕುಗಳನ್ನು ಬದಲಾಗುವ ಋತುಮಾನಗಳ ಆಧಾರದ ಮೇಲೆಯೂ ಕಟ್ಟಲಾಗುತ್ತದೆ. ಅಂದರೆ ಬೇಸಿಗೆ, ಮಳೆ, ಚಳಿಗಾಲದ ಆಯಾ ಸಮಯದಲ್ಲಿ ಉಂಟಾಗುವ ನಿಸರ್ಗದ ಬೆಳವಣಿಗೆಗಳನ್ನು ಹಾಯ್ಕುಗಳಲ್ಲಿ ಸೆರೆಹಿಡಿಯುವದು..  

ಉಪಸಂಹಾರ:

ದಯವಿಟ್ಟು ಗಮನಿಸಿ. 
ಮೇಲೆ ಹೇಳಿದ ಅಷ್ಟೂ ನಿಯಮಗಳು ವಿಶ್ವವ್ಯಾಪಿ ಆಗಿರುವಂಥವು. ಮತ್ತು ವಿಶ್ವವ್ಯಾಪಿ ಒಪ್ಪಿಕೊಂಡಿರುವಂಥವು. ಈಗ ನಾನು ಹೇಳುತ್ತಿರುವದು ನನ್ನ ಅನುಭವಕ್ಕೆನನ್ನ ಅರಿವಿಗೆ ಬಂದಿರುವಂಥದ್ದು. ಇದನ್ನು ಎಲ್ಲರೂ ಒಪ್ಪಬೇಕೆಂಬಪಾಲಿಸಬೇಕೆಂಬ ಹಠ ನನಗಿಲ್ಲ. ಆದರೆ ಜಗತ್ತಿನಲ್ಲಿ ಎಲ್ಲರೂ ಹಾಯ್ಕುಗಳನ್ನು ಓದುವಕಟ್ಟುವ ಜನಾಂಗದವರಾದರೆ ಎಷ್ಟು ಚೆಂದ ಅನ್ನುವ 'ರೇ..' ಆಸೆ ಖಂಡಿತ ಇದೆ.  
ಹಾಯ್ಕುಗಳ ಬಗ್ಗೆ ನನಗೆ ಒಂಚೂರೂ ಗೊತ್ತಿಲ್ಲದಂಥ ಸಮಯದಲ್ಲಿನಾನು ಸಿಕ್ಕಸಿಕ್ಕ ಕವಿತೆಗಳಿಗೆಲ್ಲ ಹಾಯ್ಕು ಅಂತೆಲ್ಲ ಆರೋಪಿಸಿದ್ದಿದೆ. ಚೂರು ಗೊತ್ತಾದ ಮೇಲೆಇದೆಲ್ಲ ಎಷ್ಟು ಸರಳ ಅಂತ ಅಂದುಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ "ಇದು ಹಾಯ್ಕು ಅಲ್ಲ.." ಅಂತಲೂ ಅನಿಸಿದೆ. ಹಾಗಾಗಿ ಹಾಯ್ಕು ಬರೆಯುವದು ಎಷ್ಟು ಸುಲಭವೋಅಷ್ಟೇ ಕ್ಲಿಷ್ಟಕರವೂ ಹೌದು ಅಂತ ಮಾತ್ರ ಹೇಳಬಲ್ಲೆ.

ಆದರೆಒಂದಂತೂ ನಿಜ. ಜಗತ್ತಿನ ಎಲ್ಲ ಕತೆಗಳುಕವಿತೆಗಳು invented ಆಗಿದ್ದರೆಹಾಯ್ಕು ಅನ್ನುವದು discovered! 
ಯಾಕೆಂದರೆಹಾಯ್ಕುಗಳನ್ನು ಹೊಸದಾಗಿ ಅನ್ವೇಷಿಸಲಾಗದು. ಅದು ನಮ್ಮ ಸುತ್ತಮುತ್ತಲಲ್ಲೇ ಇರುವಂಥದ್ದುಕಾಣುವಂಥದ್ದು. ಹಾಗಾಗಿ ಅದು ಬಹಳ ಸರಳವಾಗಿ access ಆಗುವಂಥದ್ದು. ಆದರೆ ಹಾಗೆ ಅದು ತನ್ನನ್ನು ತಾನು ಗೋಚರಿಸಿಕೊಳ್ಳಲು ಎದುರಿಗಿರುವ ವ್ಯಕ್ತಿಯಲ್ಲಿ ವಿವರಿಸಲಾಗದ ಒಂದು ಮನೋಸ್ಥಿತಿಯನ್ನು ಬೇಡುತ್ತದೆ. ನನ್ನನ್ನು ಕಾಣಬೇಕೆಂದರೆ ಮೊದಲು ಪ್ರೀತಿಸುವದನ್ನು ಕಲಿ ಅಂತ ಹೇಳುತ್ತದೆ. 
ನಾನೇನಾದರೂ ಋಣಾತ್ಮಕ ಮನೋಭಾವದ ವ್ಯಕ್ತಿಯಾಗಿದ್ದರೆ ಹಾಯ್ಕು ಖಂಡಿತವಾಗಿಯೂ ನನಗೆ ಕಾಣಿಸದು. ಯಾಕೆಂದರೆಈ ಲೋಕದ ಯಾವುದೇ ಹಾಯ್ಕು ನೋವುಗಾಯ, ರಕ್ತ ಮತ್ತು ಅಂಧಕಾರಗಳನ್ನು ಬಿಂಬಿಸುವದಿಲ್ಲ. ಹಾಗೇನಾದರೂ ಅದು ಇವೆಲ್ಲವನ್ನೂ ಪ್ರತಿನಿಧಿಸಿದ್ದೇ ಆದಲ್ಲಿ ಅದು ಹಾಯ್ಕು ಅಲ್ಲವೇ ಅಲ್ಲ. ನನ್ನ ಅನಿಸಿಕೆಯಂತೆ, ಹಾಯ್ಕುವೊಂದು ತ್ರಿಕೋಣಾಕಾರದ ಬಿಂದುಗಳ ಮೇಲೆ ನಿಂತಿದೆ. ಮನುಷ್ಯನ ಅರಿವು, ಮನಸ್ಸು ಮತ್ತು ಸಮಯ-ಇವುಗಳೇ ಈ ತ್ರಿಕೋಣದ ಆಧಾರ ಬಿಂದುಗಳು. ಈ ಬಿಂದುಗಳನ್ನು ಒಂದು ಸರಳರೇಖೆಯಲ್ಲಿ synchronise ಮಾಡಬಲ್ಲೆ ಅನ್ನುವದಾದರೆ ಬಹುಶಃ ಹಾಯ್ಕುಗಳಲ್ಲಿರುವ ಒಳನೋಟ ನಮಗೆ ದಕ್ಕುವ ದಿನಗಳು ದೂರವಿಲ್ಲ.         

ಖಂಡಿತ ನಾನು ಉತ್ಪ್ರೇಕ್ಷೆ ಮಾಡುತ್ತಿಲ್ಲ: ನಾವು ಉಳಿದ ಸಮಯದಲ್ಲಿ ಇನ್ನೇನೋ ಆಗಿರಬಹುದುಆದರೆ at least, ಹಾಯ್ಕು ನೋಡುವ/ಕಟ್ಟುವ ಸಮಯದಲ್ಲಿ ಅದು ಬಯಸುವ ಮನೋಸ್ಥಿತಿಯನ್ನು ತಂದುಕೊಳ್ಳದಿದ್ದರೆ ಹಾಯ್ಕು ನಮಗೆ ಸಿಗದು. ಹಾಗೆಯೇ ಉತ್ಪ್ರೇಕ್ಷೆ ಅನಿಸದಿದ್ದರೆ ಇನ್ನೊಂದು ಮಾತು: "ಕಲ್ಲು ಕರಗುವ ಸಮಯ"ದಲ್ಲಿ ಬೆಳೆಸಿಕೊಳ್ಳುವ ನಿಮ್ಮ ಮನಸ್ಥಿತಿಯನ್ನು ನೀವು ಜೀವನವಿಡೀ ಕಾಯ್ದುಕೊಳ್ಳಬಲ್ಲಿರಾದರೆ ನೀವು ಸಂತನಾಗಿಬಿಡುವ ಅಪಾಯವಿದೆ! ಹೀಗಾಗಿಈ ಲೋಕದ ಎಲ್ಲ ಸಂತಅವಧೂತಡಿವೈನ್ ಫಿಲಾಸಫಿಗಳು ಏನೆಲ್ಲ ಹೇಳಬಯಸಿದವೋ-ಅದನ್ನೆಲ್ಲ ಹಾಯ್ಕು ತನ್ನದೇ ಟ್ಯೂನ್ ನಲ್ಲಿ ಸರಳವಾಗಿ ಹೇಳಿತು ಅಂತ ನನ್ನ ಭಾವನೆ. ಯಾಕೆಂದರೆ, ಹಾಯ್ಕುಗಳ ಪರಂಪರೆಯಲ್ಲಿ ಒಂದೇ ಒಂದು ಹಾಯ್ಕು 'ನೋಡು'ವದಕ್ಕಾಗಿ ವರ್ಷಗಳ ಕಾಲ ಕಾಯ್ದವರೂ ಇದ್ದಾರೆ ಮತ್ತು ಒಂದೇ ಒಂದು ಹಾಯ್ಕು ನೋಡಿ ಸಾಕ್ಷಾತ್ಕಾರ ಪಡೆದುಕೊಂಡಿರುವ ಉದಾಹರಣೆಗಳೂ ಉಂಟು. ಅಂತೆಯೇ ಹಾಯ್ಕು ಅನ್ನುವದು purest form of poetry which deals with mankind ಅಂತ ಹೇಳಬಲ್ಲೆ.

ಕೊನೆಯದಾಗಿ, ಹಾಯ್ಕು ಒಂದು treasure hunt ಥರ; ಅದೊಂದು ಅಸಂಖ್ಯಾತ ಮನೆಗಳುಳ್ಳ ಒಂದು ಪದಬಂಧ. ಬಹುಶಃ ನಾನು ಬಿಡಿಸಿರುವದು ಒಂದೆರಡು ಮನೆಗಳನ್ನು ಮಾತ್ರ. ಹಾಗಾಗಿಯೇ ಇಷ್ಟೆಲ್ಲ ಬರೆದಮೇಲೆ ನನಗೆ ತೀವ್ರವಾಗಿ ಅನಿಸಿದ್ದು: ಹಾಯ್ಕುಗಳ ಬಗ್ಗೆ ಇಷ್ಟೆಲ್ಲ ವಿವರಣೆಯ ಅಗತ್ಯವಿದೆಯಾ? ಅಷ್ಟಕ್ಕೂ ಇಷ್ಟೊಂದು ಬರೆದಾದ ಮೇಲೆ ಹಾಯ್ಕುಗಳ ಬಗ್ಗೆ ಎಲ್ಲ ವಿವರಿಸಿದಂತಾಯಿತೇ? 
ವಿನೀತನಾಗಿ ಹೇಳುವದಾದರೆ-

ನಾನೊಂದು ದಿನ 
ಹಾಯ್ಕು ಮುಟ್ಟಿದೆ.
ಸಾಗರದ ಬೃಹತ್
ಜೀವಿಯಂತಿತ್ತು;
ವಿವರಿಸಿಯಾದ ಮೇಲೆ
ಅಮೀಬವಾಯಿತು..
            
-
(ಟಿಪ್ಪಣಿ: ಈ ಲೇಖನ ಸಿದ್ಧಪಡಿಸುವ ನಿಟ್ಟಿನಲ್ಲಿ ಹಾಯ್ಕುಗಳ ತಾಂತ್ರಿಕ ಕುಶಲತೆಯ ಬಗ್ಗೆ ಬರೆಯುವಾಗ, ಶ್ರೀಯುತ ಮಂಜುನಾಥ ಕೊಳ್ಳೇಗಾಲ ಅವರ ಹಾಯ್ಕು ಲೇಖನದ ವಿವರಗಳನ್ನು ತಕ್ಕಮಟ್ಟಿಗೆ ಬಳಸಿಕೊಂಡಿದ್ದೇನೆ. ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.)

26 comments:

narayan babanagar said...

ತುಂಬಾ ಚನ್ನಾಗಿ ಬರೆದಿದ್ದೀರಿ...ಬರಹದಲ್ಲಿ ಚಿನ್ಹೆ ಅಂತ ಶಬ್ದ ಬಳಸಿದ್ದೀರಿ ಅದು ಚಿಹ್ನೆ ಎಂತಾಗಬೇಕಿತ್ತಲ್ಲವೇ?...ಕನ್ನಡದ ಕವಿಗಳು ತಮಗರಿವಿಲ್ಲದೇ ಹಾಯ್ಕುಗಳನ್ನು ಬರೆದಿರಬಹುದೇ?...ಹಾಗೊಂದು ಪ್ರಶ್ನೆ ಮಿಂಚಿ ಮಾಯವಾಯಿತು

ಸಂಧ್ಯಾರಾಣಿ said...

ಹಾಯ್ಕುವಿನ ರೂಪ ಮತ್ತು ಆತ್ಮ ಎರಡನ್ನೂ ಕಟ್ಟಿಕೊಟ್ಟಿದ್ದೀರಿ. ಎದುರಿಗಿದ್ದರೆ ಕೈ ಕುಲುಕಿ ಮೌನವಾಗಿ ಅದು ನನಗೆ ಕೊಟ್ಟ ’ಕಾಣ್ಕೆ’ಯನ್ನು ವ್ಯಕ್ತಪಡಿಸುತ್ತಿದ್ದೆ, ಆದರೆ ಇಲ್ಲಿ ಪದಗಳ ಸಹಾಯ ತೆಗೆದುಕೊಳ್ಳುತ್ತಿದ್ದೇನೆ.

ಇಡೀ ಬರವಣಿಗೆ ಒಂದು ಕವಿತೆಯ ಹಾಗಿತ್ತು, ಓದುತ್ತಿದ್ದಷ್ಟು ಕಾಲವೂ ನಾನು ಹಾಯ್ಕುವಿನೊಳಗಿದ್ದೆ.

ಅಪ್ಪ ಹಿಡಿದುಕೊಳ್ಳುತ್ತಾನೆ ಎಂಬ ನಂಬಿಕೆಯಲ್ಲಿ ನಗುವ ಕಂದನ ಕಣ್ಣ ಬೆಳಕಲ್ಲಿ, ತುಟಿಯ ನಗುವಲ್ಲಿ, ಗಾಳಿಗೆ ಹಿಂದೆ ಹಾರಿದ ಕೂದಲಲ್ಲಿ ಹಾಯ್ಕು ಇದೆ.. ನಿಜ ನೀವಂದದ್ದು ನೆಗಟಿವ್ ಭಾವನೆಗಳ ಜೊತೆ ಹೈಕು ಸಾಧ್ಯವಿಲ್ಲ, ಅದು ಘಟಿಸುವುದೂ ಇಲ್ಲ.

ಒಂದು ಒಳ್ಳೆಯ ಬರಹಕ್ಕಾಗಿ ಥ್ಯಾಂಕ್ಸ್... ಇಷ್ತು ಹೇಳಿಯೂ ನನಗನ್ನಿಸಿದ್ದೆಲ್ಲಾ ಹೆಳಿರುವೆನೇ ಎಂದು ನೋಡಿಕೊಂಡರೆ ಮತ್ತೆ ಉತ್ತರ ’ಇಲ್ಲ’ ಎಂದೇ .. ಹೈಕು ಅಷ್ಟೇ ಅಲ್ಲ ಯಾವುದೇ ಭಾವನೆಯ ಶಿಖರಾಗ್ರ ಥೇಟ್ ಅಮೀಬಾ..

Raghunandan K Hegde said...

ಮೇಷ್ಟ್ರೇ...

ಹಾಯ್ಕು ಪಾಠ ಇಷ್ಟವಾಯಿತು...

ಗೊತ್ತಿಲ್ಲದ ಓದು ಪದಗಳ ವಿನ್ಯಾಸಕ್ಕೆ, ಅರ್ಥ ಚಿಮ್ಮುವ ಸ್ವಾರಸ್ಯಕ್ಕೆ ಬೆರಗಾಗುತ್ತದೆ, ಈಗ ಸೂತ್ರದ ಪಾಠವಾಗಿದೆ, ಓದಿಗೆ ಮತ್ತಷ್ಟು ಬೆರಗು...

ಜಲನಯನ said...

ರಾಘು ಹಾಯ್ಕು ಹುಟ್ಟಿನ ಲಾಗಾಯ್ತು ಅದು ಬೆಳೆದು ಬಂದ ಹಿನ್ನೆಲೆಯನ್ನೂ ವಿವರಿಸಿ ನಿಯಮಗಳಿಗಿಂತಾ ಸಂಕ್ಷೇಪಿತ ಭಾವ ಪದಕಟ್ಟುವಿಕೆ "ಹಾಯ್ಕು" ಎನ್ನುವುದನ್ನು ಚನ್ನಾಗಿ ತಿಳಿಸಿದ್ದೀರಿ. ಹಾಯ್ಕು ಹುಟ್ಟಿಗೆ ಕಾರಣವಾದ ಭಾಷೆಯ ಹಿನ್ನೆಲೆ ಬೇರೆ ಕನ್ನಡದಲ್ಲಿ ಅದೇ ನಿಯಮ ಪಾಲಿಸಿ ಹಾಯ್ಕು ಕಟ್ಟುವುದು ಸುಲಭವಲ್ಲ ಎನ್ನುವ ನಿಮ್ಮ ಮಾತು ಒಪ್ಪುತ್ತೇನೆ. ನನ್ನ ಪ್ರಕಾರ "ಅಪೂರ್ವ ಮತ್ತು ಅಪರೂಪದ ಭಾವ ಸಾರ ಪದ ಬಿಂದುಗಳು" ಹಾಯ್ಕು. ಧನ್ಯವಾದ ನಿಮ್ಮ ಈ ಬ್ಲಾಗ್ ಲೇಖನ ಹಲವರಿಗೆ ಸಹಕಾರಿಯಾಗಬಹುದು ನನಗಾದಂತೆ.

bharathi said...

ಈ ಹಾಯ್ಕು ಅನ್ನುವ ನಿಗೂಢ ಪ್ರಿಯಕರನ ಬಗ್ಗೆ ಯಾವಾಗಲೂ ಅತೀವ ಕುತೂಹಲ! ತುಂಬ ದಿನಗಳಿಂದ ಅರಿಯುವ ಪ್ರಯತ್ನ ನಡೆದಿತ್ತು.ಈಗ ನಿಮ್ಮ ದೆಸೆಯಿಂದ ಆವ ಒಂದು ಚೂರು ನಿಲುಕಿದ. ಹಾಗಂತ ಹಾಯ್ಕು ಬರೆದೇ ಬಿಡುವಷ್ಟು ಅರಿತುಬಿಟ್ಟೆ ಅಂತಲ್ಲ ..,. ಒಂದಿಷ್ಟು ಹಾಯ್ಕು ಲೋಕಕ್ಕೆ ಹೆಜ್ಜೆ ಇಡುವಷ್ಟು ಅರಿತೆ. ಥ್ಯಾಂಕ್ಸ್ ಜೋಷಿ ... Bharathi b v

Prashant Joshi said...

Very informative rajo sir.. Thanks for sharing

Manjunatha Kollegala said...

ಹಾಯ್ಕುಗಳ ಕಾವ್ಯಾಂಶದ ಬಗ್ಗೆ ಒಳ್ಳೆಯ ಲೇಖನ. ಸುಮ್ಮನೇ ಬರೆದು ಮರೆಯುವ ಮಿನಿ ಕವಿತೆ ಹಾಯ್ಕಲ್ಲ ಎಂಬುದನ್ನು ಸೊಗಸಾಗಿ ವಿವರಿಸಿದ್ದೀರಿ.

Prajna Aurangabad said...

ಹಾಯ್ಕು ಒಂದು ಬಗೆಯ ಮನಸ್ಥಿತಿಯನ್ನು ಬಯಸುತ್ತದೆ ಅಂದಿರಲ್ಲ...ನೀವು ಪೋಸ್ಟ ಮಾಡುತ್ತ ಬಂದ ಹಾಯ್ಕುಗಳನ್ನು ನೋಡಿ ಅದು ಅಂದಾಜಾಗಿತ್ತು. ತನ್ನ ಸುತ್ತಲಿನ ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವುದು, ಗೋಚರಿಸಿದ್ದನ್ನು ಘಟಿಸಿದ ಸತ್ಯಕ್ಕೆ ಚ್ಯುತಿ ಬರದಂತೆ ಗ್ರಹಿಸಿಕೊಳ್ಳುವುದು, ತಾನು ತಟಸ್ಥವಾಗಿದ್ದುಕೊಂಡು ಅದನ್ನು ಮರುಸೃಷ್ಟಿಸುವುದು, ಆ ಮರುಸೃಷ್ಟಿಯ ಕಾಲಕ್ಕೆ ಸ್ವತ: ತಾನೂ ಆನಂದಗೊಂಡು...ಇವೆಲ್ಲ ನೀವಂದಂತೆ ಸಂತನ ಲಕ್ಷಣಗಳು! ಹಾಯ್ಕು ರಚನೆ ಏನಿಲ್ಲವೆಂದರೂ ಮನಸ್ಸನ್ನು ನಿಗ್ರಹಿಸಲು ಒಳ್ಳೆಯ ತಾಲೀಮಾಗಬಲ್ಲುದು. ಅಲ್ಲದೇ ಗೋಚರಿಸಿದ್ದನ್ನು ಶಬ್ದಗಳಲ್ಲಿ ಹರಳುಗಟ್ಟಿಸುವ ಕುಶಲತೆಯಲ್ಲಿ ಪ್ರವೀಣರಾಗಲೂ ಒಳ್ಳೆಯ ತಾಲೀಮು ಸಿಗುತ್ತದೆ ಎನ್ನಿಸುತ್ತದೆ. ಇದು ಇದುವರೆಗೂ ಒಂದೂ ಹಾಯ್ಕುವನ್ನು ರಚಿಸದವಳ ಅನಿಸಿಕೆ. ಹಾಯ್ಕು ರಚಿಸುವುದೆಂದರೆ ಏನು ಎಂಬುದನ್ನ ಹೀಗೆ ಅರ್ಥ ಮಾಡಿಕೊಂಡೆ. ಹಾಯ್ಕುವನ್ನ ತುಂಬ ಪ್ರೀತಿಯಿಂದ ಪರಿಚಯಿಸಿದ್ದೀರಿ. ಅದಷ್ಟಂತೂ ನಿಖರವಾಗಿ ಗೊತ್ತಾಯ್ತು!ಹಾಯ್ಕು ನಮ್ಮಲ್ಲೂ ಮೊಳೆಯಲಿ ಅಂತ ಆಶೀರ್ವದಿಸಿ.

ಮನಸು said...

ತುಂಬಾ ಧನ್ಯವಾದಗಳು ಸರ್. ಹಾಯ್ಕು ಬಗೆಗಿನ ಲೇಖನ ನೀಡಿದ್ದಕ್ಕೆ19856ersocdi

Suresh said...

ನಾನು ಹಯ್ಕು ಬರೆಯಲು ಪ್ರಯತ್ನಿಸಿದ್ದು...
ಈ ಹಿಂದೆ ಮೋಡಿಯ ರಾ.ಜೋ ಕೈಬರಹದ ಪೀತವರ್ಣದ ಪರ್ಣಗಳು ಆಗಾಗ್ಗೆ ನನ್ನ ಮೊಗ ಹೊತ್ತಿಗೆಯ ಗೋಡೆಯಲ್ಲಿ ಹೊತ್ತು ಗೊತ್ತಿಲ್ಲದೇ ಸೊಗಸಿನ ಸಾಲುಗಳನ್ನು ಪ್ರಸ್ತುತಗೊಳಿಸಿ ಮನವನ್ನು ಮುದಗೊಳಿಸುತ್ತಿತ್ತು. ನಂತರ ಇದ್ದಕ್ಕಿದ್ದಂತೆ ಆ ಬೆರಗಿನ ಸಾಲುಗಳು ಯಾವ ಅರಗಿನಮನೆಯಲಿ ಸಿಲುಕಿ ಅಜ್ಞಾತವಾಸಕ್ಕೆ ತೆರಳಿದ್ದವೋ ತಿಳಿಯಲಿಲ್ಲ...
ಈ ನಡುವೆ ಡಾ.@Azad ರವರು ಅವರದೇ ಹಾಯ್ಕು ಕಾಯ್ಕು ಗಳನ್ನೂ ಹಾಕುತ್ತಲಿದ್ದರು... ಅವರೊಡನೆ ಒಂದು ಮುಖಾಮುಖಿ ಸಂವಾದದಲ್ಲಿ ಹಯ್ಕು ಎಂದರೇನೆಂದು ಜೊತೆಗೆ ಗುಣ ಲಕ್ಷಣಗಳೇನು ಎಂದು ವಿಚಾರಿಸಿದಾಗ ಸರಳವಾಗಿ ಹೇಳಿದ್ದಿಷ್ಟು... ಮೂರು ಸಾಲುಗಳಲ್ಲಿ ಬರೆಯಿರಿ... ಮೊದಲ ಸಾಲಿಗೆ ಹಾಗು ಎರಡನೇ ಸಾಲಿಗೆ ಸಂಬಂಧವನ್ನು ಮೂರನೇ ಸಾಲಿನಲ್ಲಿ ಕಲ್ಪಿಸಿ ಧುತ್ತೆಂದು ಒಂದು ಹೊಸ ಭಾವನೆಯನ್ನು ಮೂಡಿಸಿರಿ... ಎಂದು.
ನಂತರ ನಾನು ಹಯ್ಕು ಬರೆಯಲು ಮೊದಲು ಮಾಡುವ ಮುನ್ನ ನನ್ನದೇ ಹಯ್ಕಿನ ಗಣಿಗಾರಿಕೆಯನ್ನು ಅಂತರ್ಜಾಲದಲ್ಲಿ ಮಾಡಿ ನೀತಿ ನಿಯಮಗಳಡಿಯಲ್ಲೇ ಜಪಾನಿನ ಬಷೋ, ಇಸ್ಸಾ ರವರ ಹಯ್ಕುಗಳಿಂದ ಪ್ರೇರಿತನಾಗಿ (ಆಗ @Manjunath Kollegala ರವರು ಬರೆದ ಸೊಗಸಿನ ಲೇಖನ ಹಾಗು ಈಗ @Raghavendra Joshi ವರು ಬರೆದ ಸವಿವರ ಲೇಖನಗಳು ದಕ್ಕಿರಲಿಲ್ಲ) ಒಂದೆರಡು ಹಯ್ಕು ಬರೆದು ಒಮ್ಮೆ ಜಯಂತ್ ಕಾಯ್ಕಿಣಿಯವರು ಕುವೈತ್ಗೆ ಬಂದಿದ್ದಾಗ ವಾಚಿಸಿಯೂ ಬಿಟ್ಟೆ. ಅವರೂ ಕೂಡ ಹುರಿದುಂಬಿಸಿ ಒಂದೆರಡು ತಿಳಿ ಕಿವಿಮಾತುಗಳನ್ನೂ ಹೇಳಿದರು.
ಈ ನನ್ನ ಮೊದಲ ಅಂಬೆಗಾಲಿನ ಹಯ್ಕುಗಳು, ಇದರ ಬಗ್ಗೆ ಕುತೂಹಲ ಮೂಡಿಸಿದ ಡಾ. ಆಜಾದ್ ಹಾಗೂ ರಾ. ಜೋ ರವರಿಗೇ ಸಲ್ಲುತ್ತವೆ.

ಹಯ್ಕು - ೧
---------
ಸಾವಿನ ಮನೆ
ಕಾರ್ಮುಗಿಲ ಕೋಲ್ಮಿಂಚು
ಕೂಸಳುತಿತ್ತು

ಹಯ್ಕು - ೨
--------
ಅಲೆ ಅಲೆದು
ತೀರಕ್ಕಪ್ಪಳಿಸಿದ್ದು
ತೀರದ ದಾಹ

sunaath said...

RJ,
ಹಾಯ್ಕು ಬಗೆಗೆ ಎಷ್ಟೊಂದು ಸರಳವಾಗಿ, ರಸವತ್ತಾಗಿ, ವಿವರವಾಗಿ ತಿಳಿಸಿದ್ದೀರಲ್ಲ. ನಿಮಗೆ ಅನೇಕಾನೇಕ ಧನ್ಯವಾದಗಳು. ಈವರೆಗೆ ಹಾಯ್ಕು ಎಂದರೆ ಜಪಾನದ ಚುಟುಕು ಎನ್ನುವ ಭಾವನೆ ನನಗಿತ್ತು. ಈಗ ಹಾಯ್ಕುವಿನ ಒಳಮರ್ಮ ಹೊಳೆಯಿತು. ಹಾಯ್ಕು ಬದುಕಿನ ಸೊಬಗನ್ನು ನೀರವವಾಗಿ ಅನುಭವಿಸುವುದು.

ರಾಜ್ ರಾಮೇಗೌಡ said...

ಪ್ರೀತಿಯ ರಾ. ಜೋಶಿ ಸರ್.

ನಿಮ್ಮ ಈ ಹಾಯ್ಕುಗಳ ಬಗೆಗಿನ ಅತ್ಯುಪಯುಕ್ತ ಲೇಖನವನ್ನು ಓದುತ್ತಿದ್ದಾಗ, ದಿ// ಪಿ.ಲ೦ಕೇಶರು ತಮ್ಮದೊ೦ದು ಲೇಖನದಲ್ಲಿ ಇದೇ ಹಾಯಕುಗಳನ್ನು ಕುರಿತಿಷ್ಟು ಬರೆದಿದ್ದುದು ನೆನಪಾಯ್ತು. ಅದನ್ನು ಸ೦ಕ್ಷಿಪ್ತಗೊಳಿಸಿ ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ.

ನಶ್ವರ ಜೀವನದ ಬಗ್ಗೆ ಚಿ೦ತಿಸುತ್ತಲೇ ಬೃಹತ್ ರಾಷ್ಟ್ರವನ್ನು ಕಟ್ಟಿರುವ ಜಪಾನೀಯರು, ಚೈನಾದಿ೦ದ * ಭಾಷೆ, ಲಿಪಿ, * ಬೌದ್ಧ ಧರ್ಮ, ಝೆನ್ ಸಿದ್ಧಾ೦ತ - ಎಲ್ಲವನ್ನೂ ತ೦ದು ತಮ್ಮವನ್ನಾಗಿಸಿ ಬೆಳೆಸಿದರು. ಗುಡ್ಡದ ಬೃಹತ್ ಮರವನ್ನು ತ೦ದು ಪುಟ್ಟ ಮರವಾಗಿ ಪರಿವರ್ತಿಸುವ ಕಲೆ ಕ೦ಡುಹಿಡಿದು ಸಲಹಿದರು. ವೇಶ್ಯೆಯನ್ನು ಸುಸ೦ಸ್ಕೃತ ಮಹಿಳೆಯಾಗಿ ಬೆಳೆಸಿ "ಗೀಶಾ" ಮಾಡಿದರು. ಅ೦ತರ೦ಗ ಮತ್ತು ಬಹಿರ೦ಗವನ್ನು ಕ೦ಡುಕೊ೦ಡು ಕಾವ್ಯ ರಚಿಸಿದರು. ಜೀವನ ಸುಖದ ಸ೦ಕ್ಷಿಪ್ತತೆ, ಆಕಸ್ಮಿಕ, ಕ್ಷಣಿಕತೆಗಳೆಲ್ಲವನ್ನೂ ಹೇಳಬಲ್ಲ, ಕೇವಲ ಮೂರು ಸಾಲಿನ ಪುಟ್ಟ 'ಹಯಕು' ಕವನದಲ್ಲಿ ಕವಿಗಳು ಸೌ೦ದರ್ಯವನ್ನು ಸೃಷ್ಠಿಸುತ್ತಾರೆ. ಒಟ್ಟಾರೆ ಹೆಚ್ಚು ಮಾತನಾಡಬಲ್ಲ ಜಪಾನಿನ ಮನುಷ್ಯ ಕಡಿಮೆ ಮಾತು ಮತ್ತು ಮೌನದ ಪ್ರಾಮುಖ್ಯ ಕ೦ಡುಕೊ೦ಡ. ಜಪಾನಿನ ಹುಡುಗಿಯರು 'ತಾವು
ಮದುವೆಯಾಗುವ ಹುಡುಗನಿಗೆ ಕವನ ಬರೆಯಲು ಬರಬೇಕು' ಎ೦ದು ಬಯಸುತ್ತಾರೆ. ಹಾಗ೦ತ ಆತ ಮಹಾಕವಿಯಾಗಬೇಕಿಲ್ಲ. ಕನಿಷ್ಠಪಕ್ಷ ಮೂರು ಸಾಲಿನ, ಹದಿನೇಳು ಮಾತ್ರೆಗಳ ಪುಟ್ಟ 'ಹಯಕು'ಗಳಲ್ಲಿ ಪ್ರೇಮಪತ್ರವನ್ನಾದರೂ ಬರೆಯಬೇಕೆ೦ದು ಇಚ್ಛಿಸುತ್ತಾರೆ. ಇಲ್ಲದಿದ್ದರೆ, ಅ೦ತಹ ಹುಡುಗರನ್ನು ಮದುವೆಯಾಗರು.
ಈ ಹಯಕು ಪದ್ಯಗಳಲ್ಲಿ ನಮಗೆ ಅಚ್ಚರಿ ಹುಟ್ಟಿಸುವ ಅ೦ಶ..... ಕವಿ 'ಹೇಳಿರುವ ಮಾತುಗಳಿಗಿರುವಷ್ಟೇ ಪ್ರಾಮುಖ್ಯ ಹೇಳದೇ ಉಳಿಸಿರುವ ಮಾತುಗಳಿಗಿರುವುದು'.*(ಸಾವಿರ ವರ್ಷದ ಹಿ೦ದೆ ಜಪಾನ್ ಚೈನಾದ 'ಕೆ೦ಜಿ' ಲಿಪಿ ಮತ್ತು ಭಾಷೆಯನ್ನು ತೆಗೆದುಕೊ೦ಡಿತು. ಚೈನಾದ 'ಕೆ೦ಜಿ' ಮತ್ತು ಅದರಿ೦ದ ಪ್ರಭಾವಿತವಾದ 'ಕಾನಾ' ಹಾಗೂ'ಜಪಾನೀ' ಎ೦ಬ ಮೂರು ತರಹದ ಭಾಷೆಗಳು ಬೆಳೆದವು. ಕೆ೦ಜಿ ಭಾಷೆಯನ್ನು ಅರಸರು, ಅಧಿಕಾರಿಗಳು ಮತ್ತು ವಿದ್ವಾ೦ಸರು ಬಳಸಿದರು. ಮನೆಯಲ್ಲಿ, ಜಪಾನೀ ಭಾಷೆ ಬಳಕೆಯಲ್ಲಿತ್ತು. ಕೆ೦ಜಿ ಭಾಷೆಯಿ೦ದ ಗ೦ಡಸರು ಆಡಳಿತ ನಡೆಸುವಾಗ, ಹೆ೦ಗಸರು ಆಡುಮಾತಿನ ಜಪಾನೀ
ಭಾಷೆಯಲ್ಲಿ ಸಾಹಿತ್ಯ ರಚಿಸುತ್ತಾ ಹೋದರು. ಆ ಕಾಲವಧಿಯ ಸುಮಾರು ನೂರು ವರ್ಷ ಸ್ತ್ರೀ ಸಾಹಿತಿಗಳೇ ಜಪಾನಿನ ಸಾ೦ಸ್ಕೃತಿಕ ಲೋಕದ ರಾಯಭಾರಿಗಳಾಗಿದ್ದುದು ಹೀಗೆ)*

Partha sarathy n said...

ಆದರೆ ನೀವು ಹೇಳಿರುವ ಯಾವ ಉದಾಹರಣೆಯಲ್ಲೂ ೫-೭-೫ ರ ಫಾರ್ಮೆಟ್ ಇಲ್ವಲ್ಲ ಅನ್ನುವ ಗೊಂದಲ ನನ್ನನ್ನು ಕಾಡುತ್ತಿದೆ.

Rj said...

ಹೀಗಾಗಿ ಕನ್ನಡದಲ್ಲಿ ಸರಿಯಾಗಿ ಹದಿನೇಳು ಅಕ್ಷರಗಳನ್ನು ತುಂಬಿ ಹಾಯ್ಕುವೊಂದನ್ನು ಹೆಣೆಯುವದು ತುಂಬ ಸವಾಲಿನ ಕೆಲಸ. ಇದೇ ಕಾರಣಕ್ಕಾಗಿಯೇ ಬಹಳಷ್ಟು ಸಲ,ಓದುಗರಿಗೆ ಕನ್ನಡದ ಹಾಯ್ಕು ಕಬ್ಬಿಣದ ಕಡಲೆಯಾಗುವದೂ ಉಂಟು. ಹಾಗಾಗಿಯೇ ಸದ್ಯದ ತುರ್ತಿಗೆ ಅಂತ ಈ ಹದಿನೇಳರ ಜಂಜಾಟ ಬಿಟ್ಟುಕೊಟ್ಟು ಹಾಯ್ಕುಗಳ ಇನ್ನಿತರ ಒಳನೋಟಗಳನ್ನು ಬಳಸಿಕೊಂಡು ಈ ಬರಹದ ಮುಂದಿನ ಭಾಗಗಳಲ್ಲಿ ಹಾಯ್ಕುಗಳನ್ನು ಉದಾಹರಣೆಗಳಂತೆ ಬಳಸಿಕೊಂಡಿದ್ದೇನೆ.
-Rj

gulmoharveena said...

Woow.. That was so informative.. Thanku sir..:)

manju said...

ಹಾಯ್ಕು ಬಗೆಗೆ ಎಷ್ಟೊಂದು ಸರಳವಾಗಿ, ರಸವತ್ತಾಗಿ, ವಿವರವಾಗಿ ತಿಳಿಸಿದ್ದೀರ. ನಿಮಗೆ ಅನೇಕಾನೇಕ ಧನ್ಯವಾದಗಳು.

Badarinath Palavalli said...

ಮೊದಲು ಇಷ್ಟು ತಡವಾಗಿ ಇಂತಹ ಮಾಹಿತಿಪೂರ್ಣ ಬ್ಲಾಗ್ ಪೋಸ್ಟ್ ಓದಿದ್ದಕ್ಕಾಗಿ ಕ್ಷಮೆ ಇರಲಿ. ಅದು ಹೇಗೆ ನನ್ನ ಓದಿಗೆ ಸಿಗದೆ ಈ ಉತ್ತಮ ಬರಹ ಮರೆಯಲಿ ನಿಂತು ಕಾಡಿಸಿತ್ತೋ!

ಕೆಲ ಹಾಯ್ಕುಗಳು ಓದಿ ನನಗೂ ಬರೆಯಲೇಬೇಕು ಎನಿಸಿತ್ತು. ಆದರೆ basics ಆಗಲಿ construction ಆಗಲಿ ತಿಳಿದಿರಲಿಲ್ಲ.

ನನಗಂತು ಬಹು ಉಪಕಾರವಾಯಿತು.

ಚಿನ್ಮಯ ಭಟ್ said...

ಧನ್ಯವಾದ ಜೋಷಿ ಸರ್ :)

Sbabu Blue said...

ಸರ್ ಧನ್ಯವಾದ-ಬ್ಯೂಟಿಫುಲ್ ಲೇಖನ

ದೀಪಾ ಜೋಶಿ said...

ಹಾಯ್ಕುಗಳ ಮಾಯಾಲೋಕದಲ್ಲಿ ತೇಲಾಟ. ವಾಹ್ ಎಷ್ಟು ಸುಂದರವಾಗಿ ಹಾಯ್ಕುವಿನ ಕ್ಲಿಷ್ಟತೆಯನ್ನು ಸರಳಗೊಳಿಸಿಬಿಟ್ಟಿರಿ. ಧನ್ಯವಾದಗಳು ಗುರುಗಳೇ.