Saturday, February 11, 2017

'ಉತ್ತರಕಾಂಡ'ದ ಮೇಲೊಂದು ನೋಟ

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 11.02.2017 ಶನಿವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

4 comments:

sunaath said...

ರಾಜೋ, ‘ಉತ್ತರಕಾಂಡ’ದ ಪರಿಚಯಲೇಖನ ಉತ್ತಮವಾಗಿದೆ. ಅಂಕಣದ ಮಿತಿಯಲ್ಲಿ ಕಥಾಸಾರಾಂಶವನ್ನು, ಪಾತ್ರಗಳ ನಿಲುವನ್ನು ಹಾಗು ಕಾದಂಬರಿಯ ವಿಮರ್ಶೆಯನ್ನು ಮೂಡಿಸುವದೆಂದರೆ, ಅದು Herculean task. ಅದನ್ನು ನೀವು ಸುಲಲಿತವಾಗಿ, ಸಮಗ್ರವಾಗಿ ಮಾಡಿದ್ದೀರಿ. ನಿಮ್ಮ ಲೇಖನವನ್ನು ಓದಿದವರಿಗೆ, ಉತ್ತರಕಾಂಡದ ಒಳನೋಟ ಹಾಗು ಹೊರನೋಟಗಳು ನಿಚ್ಚಳವಾಗಿ ಕಾಣುತ್ತವೆ.ಅಭಿನಂದನೆಗಳು.

ನಿಮ್ಮ ಎಲ್ಲ ಅನಿಸಿಕೆಗಳನ್ನು ಹಾಗು ವಿಮರ್ಶೆಯನ್ನು ಅಂಕಣದಲ್ಲಿ ಕಾಣಿಸಲು ಪುಟಮಿತಿ ಹಾಗು ‘ಪತ್ರಿಕಾಮಿತಿ’ಗಳು ಬಿಡಲಾರವು! ಅವೆಲ್ಲವನ್ನು ಸವಿಸ್ತಾರವಾಗಿ ನಿಮ್ಮ ಬ್ಲಾ^ಗಿನಲ್ಲಿಯೇ ಮತ್ತೊಮ್ಮೆ ಓದುವಾಸೆ ನನಗೆ!

ಶಶಿಧರ said...

ಜೋಷಿಯವರೇ,

ಒಳ್ಳೆಯ ಪರಿಚಯಾತ್ಮಕ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಾನು ಇದುವರೆವಿಗೆ ಓದಿದ ಉತ್ತರಕಾಂಡದ ಬಗೆಗಿನ ಲೇಖನಗಳಲ್ಲೆಲ್ಲ, ಕಾದಂಬರಿಯ ಸಾರವನ್ನು, ಅನಗತ್ಯ ವಿಮರ್ಶೆಗೊಳಪಡಿಸದೆ, ಹಿಡಿದುಕೊಟ್ಟ ಲೇಖನ. ಆದರೆ ಲೇಖನದ ಕೊನೆಯ ಸಾಲು ಸ್ವಲ್ಪ ಗಲಿಬಿಲಿಗೊಳಿಸಿತು. ಮಹಾಭಾರತ ಮತ್ತು ರಾಮಾಯಣಗಳ ಪುನರ್ ಸೃಷ್ಟಿ ಆಗುತ್ತಲೇ ಇರುವಾಗ ಅದರ ಔಚಿತ್ಯ ಮತ್ತು ನೈತಿಕತೆಯ ಬಗ್ಗೆ ಹೇಳಿದ್ದು ಅರ್ಥವಾಗಲಿಲ್ಲ. ಎ.ಕೆ.ರಾಮಾನುಜಮ್ ಅವರ 'ಮುನ್ನೂರು ರಾಮಾಯಣ' ಗಳ ಹಾಗೆಯೇ ಇದೂ ಒಂದಲ್ಲವೇ?

ರಾಘವೇಂದ್ರ ಜೋಶಿ said...

ಸುನಾಥ ಸರ್,
ನೀವು ಹೇಳಿದ್ದು ಸರಿ. ಇನ್ನೂ ಬಹಳಷ್ಟು ಹೇಳುವದಿತ್ತು.
ಆದರೆ ಸ್ಥಳದ ಕೊರತೆ. ನಿಮ್ಮ ಪ್ರೀತಿಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಶಶಿಧರ ಅವರೇ,
ಬ್ಲಾಗಿಗೆ ಸ್ವಾಗತ. 'ಮುನ್ನೂರು ರಾಮಾಯಣ'ಗಳೂ ಮತ್ತು ಪ್ರಚಲಿತದಲ್ಲಿರುವ ಇತರೇ ರಾಮಾಯಣಗಳ ಲಭ್ಯತೆಗಳ ಬಗ್ಗೆ ನೀವು ಉಲ್ಲೇಖಿಸಿದ್ದು ನಿಜ. ಬಹುಶಃ ಭಾರತೀಯ ರಾಮಾಯಣದ ಮೂಲ ಉದ್ದೇಶವಿದ್ದಿದ್ದು ರಾಮನೂ ಸೇರಿದಂತೆ ಇತರೇ ಪಾತ್ರಧಾರಿಗಳೂ ಸಾಮಾನ್ಯ ಮನುಷ್ಯರಂತಿದ್ದು ತಮ್ಮೆಲ್ಲ ಸೀಮಿತಗಳ ನಡುವೆಯೂ ಹೇಗೆ ಉಚ್ಚಪದವಿಗೇರಿದರು ಅಂತ ತೋರಿಸುವದಾಗಿತ್ತು ಅಂತ ನನ್ನ ಅನಿಸಿಕೆ. ಭೈರಪ್ಪ 'ಕಾಂಡ'ದಲ್ಲಿ ಈ ಉದ್ದೇಶ ಸಫಲವಾಯಿತೇ ಅಥವಾ ಕೇವಲ ಪರಿಸರ ಮತ್ತು ಪಾತ್ರಗಳ ಮನಸ್ಥಿತಿ ಬದಲಾಯಿತೇ ಅಂತನ್ನುವ ಪ್ರಶ್ನೆ ಕಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಭೈರಪ್ಪನಂಥ ಸೃಜನಾತ್ಮಕ ಮತ್ತು ಸ್ವೋಪಜ್ಞತೆ ಹೊಂದಿರುವ ಕಲೆಗಾರರು ಹೀಗೆ ಪರಂಪರೆಗಳ ಬೆನ್ನು ಬಿದ್ದಿದ್ದು ಮತ್ತು ಆ ಮೂಲಕ ತಮ್ಮ ಸೃಜನಶೀಲತೆಯನ್ನು ಬಿಟ್ಟುಕೊಟ್ಟಿದ್ದು ನನ್ನಲ್ಲಿ ಒಂದೆರೆಡು ಪ್ರಶ್ನೆ ಮೂಡಿಸಿದವು.
ನಿಮ್ಮ ವಿಶ್ವಾಸದ ಪ್ರತಿಕ್ರಿಯೆಗೆ ಧನ್ಯವಾದಗಳು.