Monday, September 19, 2011

ಸೋಮಾರಿ ಸಂಡೇ ಮೂರ್ತಗೊಂಡ ಬಗೆ..


    Photo: Internet


ನೀಲಿ ತುಂಬಿದ ಬಟ್ಟಲು.
ಸಂಡೇ ಎಂಬ ಸೋಮಾರಿಯ ದಿನ ಹಾಗೆ ನೀಲಿ ತುಂಬಿದ ಬಟ್ಟಲಿನಿಂದ ಪ್ರಾರಂಭವಾಗಿದೆ.
ಕ್ರಿಸ್ ಮಸ್ ಮುನ್ನಾದಿನ ಸಂತಾಕ್ಲಾಸ್ ತನ್ನ ಗೋಣಿಚೀಲದಿಂದ ಬಗೆಬಗೆಯ ಆಟಿಕೆಗಳನ್ನು 
ನಿಧಾನವಾಗಿ ತೆಗೆದಂತೆ ಪೋರನೊಬ್ಬ ತನ್ನ ಪಾಟಿ ಚೀಲದಿಂದ ಬಗೆಬಗೆಯ ಸಾಮಗ್ರಿಗಳನ್ನು
ಅತೀ ಎಚ್ಚರಿಕೆಯಿಂದ ತೆಗೆಯುತ್ತಿದ್ದಾನೆ.ಜಗದ ಊಹೆಗೆ ನಿಲುಕದ ಯಾವುದೋ ಮಹತ್ತರ 
ಕಾರ್ಯವನ್ನು ತಾನೊಬ್ಬನೇ ಸಾಧಿಸುವ ಹಮ್ಮಿನಲ್ಲಿ ಇರುವಂತೆ ತೋರುತ್ತಿದ್ದಾನೆ.
ಆದರೆ ಪೋರನ ಈ ಕಾರ್ಯಕ್ಕೆ ಮನೆಯಲ್ಲಿನ ಜನರ್ಯಾರೂ ಗಮನ ಕೊಟ್ಟಂತಿಲ್ಲ.

ಇಷ್ಟಕ್ಕೂ ಏನೇನು ತೆಗೆಯುತ್ತಿದ್ದಾನೆ ಆತ? ಮೊದಲಿಗೆ ಮಗ್ಗಿ ಪುಸ್ತಕ.ನಂತರ ಭಾಷಾಂತರ ಮಾಲೆ.
ನಿನ್ನೆ ಕೊಂಡ ಹೊಸ ನೋಟಬುಕ್ಕು.ಇದು ನೋಡಿ,ಕೆಲವೇ ದಿನಗಳ ಹಿಂದಷ್ಟೇ ಮೂರು ತೂತುಗಳನ್ನು 
ಮಾಡಿ ರಟ್ಟಿನ ಮೇಲೆ ಹೊಲಿಗೆ ಹಾಕಿಸಿಕೊಂಡು ಬೈಂಡಿಂಗ್ ಮಾಡಿಸಿಕೊಂಡಿರುವ ಸರಕಾರಿ
ಪಾಠಪುಸ್ತಕ..
ಅದೋ,ಈಗ ಬರುತ್ತಿದೆ,ಬ್ರಹ್ಮಾಂಡದ ಅದ್ಭುತಗಳನ್ನೆಲ್ಲ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಪೆಟ್ಟಿಗೆ!
ಏನೇನಿಲ್ಲ ಅದರಲ್ಲಿ?

ಕೆಂಪು,ಹಸಿರು,ನೀಲಿ ಮತ್ತು ಕಪ್ಪು ಬಣ್ಣದ ರೀಫಿಲ್ಲುಗಳು ಸೇರಿದಂಥ ಒಂದೇ ಪೆನ್ನು.ಅಕಸ್ಮಾತ್,
ಒಂದು ರೀಫಿಲ್ಲು ಮುಗಿದೇ ಹೋದರೆ ಹೊಸತನ್ನು ಹ್ಯಾಗೆ ಮತ್ತೇ ಅದರಲ್ಲಿ ಸೇರಿಸೋದು ಅಂತ 
ಪೋರನಿಗೂ ಗೊತ್ತಿಲ್ಲ.ಇದೇ ಭಯದಿಂದಾಗಿ ಆತ ಆ ಪೆನ್ನನ್ನೇ ಉಪಯೋಗಿಸುತ್ತಿಲ್ಲ.ಇದು ನೋಡಿ:
ಪ್ಲಾಜಾ ಪೆನ್ನು,ಹೀರೋ ಪೆನ್ನು,ಇಂಚುಪಟ್ಟಿ ,ತ್ರಿಜ್ಯ,ಕೋನಮಾಪಕ,ಒಂದೆರಡು ಸತ್ತು(?)ಹೋದ 
ನವಿಲುಗರಿ,ಒಣಗಿದ ಅಶ್ವತ್ಥವೃಕ್ಷದ ಎಲೆ,ಮೂಲೆ ತಿಕ್ಕಿಸಿಕೊಂಡು ಸವೆದುಹೋದ ರಬ್ಬರು,
ಹೆಚ್ ಬಿ ಪೆನ್ಸಿಲ್ಲು,ಪುಸ್ತಕದ ರಟ್ಟಿನ ಮೇಲೆ ಅಂಟಿಸಬಲ್ಲಂಥ ಖಾಲಿ ಲೇಬಲ್ಲುಗಳು,ಒಂದು ಬರೆಯಬಲ್ಲ 
ಸ್ಕೆಚ್ ಪೆನ್ನು;ಇನ್ನೊಂದು ಕೆಟ್ಟು ಹೋದ ಸ್ಕೆಚ್ ಪೆನ್ನು..
ಅದುವೇ ಕಂಪಾಸ್ ಬಾಕ್ಸ್!

ಅದರೊಳಗಿಂದ ಪ್ಲಾಜ ಪೆನ್ನನ್ನು ಹೊರ ತೆಗೆದಿದ್ದಾನೆ ಈ ಪೋರ.ಎಚ್ಚರಿಕೆಯಿಂದ ತುಟಿಯುಬ್ಬಿಸಿಕೊಂಡು
ಅದರ ಬಿಡಿಭಾಗಗಳನ್ನು ಬಿಚ್ಚುತ್ತಿದ್ದಾನೆ.ಬಿಚ್ಚುವಾಗ ಇಂಕು ಬಿದ್ದರೆ? ಯಾವುದಕ್ಕೂ ಇರಲಿ ಅಂತ 
ಚಾಕ್ ಪೀಸನ್ನು ಹತ್ತಿರವೇ ಇಟ್ಟುಕೊಂಡಿದ್ದಾನೆ.ಇಂಕುಪೆನ್ನಿನ ಮುಚ್ಚಳ,ನಿಬ್ಬು,ನಾಲಿಗೆ ಎಲ್ಲವೂ 
ವೇಷ ಕಳಚಿಟ್ಟ ಪಾತ್ರಧಾರಿಗಳಂತೆ ಅನಾಥರಾಗಿ ಬಟ್ಟಲಿನಲ್ಲಿ ಬಿದ್ದುಬಿಟ್ಟಿವೆ.
ಬಟ್ಟಲಿನ ತುಂಬ ಈಗ ನೀಲಿ ನೀಲಿ.ಕೆಂಪು ಬಣ್ಣದ ಮುಚ್ಚಳ,ಬಂಗಾರ ವರ್ಣದ ನಿಬ್ಬು,ಕಪ್ಪನೆಯ 
ನಾಲಿಗೆ- ಎಲ್ಲವೂ ನೀಲಿಯಲ್ಲಿ ನೀಲಿಮಗೊಂಡಿವೆ.

ಪೋರನಿಗೆ ದಿಢೀರಂತ ಏನೋ ನೆನಪಾಗಿ ಅಮ್ಮನ ಕಡೆ ಓಡಿದ್ದಾನೆ.ಕ್ಷಣಮಾತ್ರದಲ್ಲಿ ಅಲ್ಲಿಂದ 
ಸೂಜಿ ಮತ್ತು ಬ್ಲೇಡುಗಳನ್ನು ಹಿಡಿದು ಮತ್ತೇ ತಾನಿದ್ದ ಜಾಗಕ್ಕೆ ಬಂದು ಕುಳಿತಿದ್ದಾನೆ.
"ಹುಶಾರೂ..." ಅಂತ ಅಡುಗೆ ಮನೆಯಿಂದ ಕೂಗಿದ ಕೂಗು ಇವನಿಗೆ ಕೇಳಿಸಿಯೇ ಇಲ್ಲ!
ಬ್ಲೇಡು ನಿಧಾನವಾಗಿ ನಿಬ್ಬಿನ ಮಧ್ಯೆ ಸೀಳತೊಡಗಿದೆ.ಸೂಜಿ ನಾಲಿಗೆಯನ್ನು ಸ್ವಚ್ಚಗೊಳಿಸುತ್ತಿದೆ.
ಆಗಾಗ ಬ್ಲೇಡನ್ನು ನಿಬ್ಬಿನ ಮಧ್ಯೆ ಇಟ್ಟು ಪೆನ್ನನ್ನು ಮೇಲೆ ಕೆಳಗೆ ಝಾಡಿಸುತ್ತಿದ್ದಾನೆ.ಈಗ ಕೊಳೆಯೆಲ್ಲ
ನೆಲಕ್ಕೆ ಬಿದ್ದೇ ಬಿದ್ದಿರುತ್ತದೆಂಬ ನಂಬಿಕೆಯಲ್ಲಿರುವಂತಿದೆ.

ಅಷ್ಟರಲ್ಲಿ ಹೊರಗಿನಿಂದ ಇನ್ಯಾರೋ ಪೋರನ ಹೆಸರನ್ನಿಡಿದು ಕೂಗು ಹಾಕಿದ್ದಾರೆ.ಗೋಲಿಯಾಟಕ್ಕೆ
ಕರೆದಿದ್ದಾರೆ.ಪೋರ ಕುಳಿತಲ್ಲಿಂದಲೇ "ಇಲ್ಲ,ಇಲ್ಲ.." ಅಂತ ಮರುಕೂಗು ಹಾಕಿ ಉಫ್ ಉಫ್ ಅಂತ 
ನಾಲಿಗೆಯನ್ನು ಊದಿ ಸ್ವಚ್ಚಗೊಳಿಸಿದ್ದಾನೆ.ಇಂಕು ಈಗ ಸರಾಗವಾಗಿ ಹರಿದೀತೆ?ಅಂತ ಮತ್ತೇ ಮತ್ತೇ 
ತನ್ನಷ್ಟಕ್ಕೆ ತಾನೇ ಕೇಳಿಕೊಂಡಿದ್ದಾನೆ.ಅಂತೂ ಇಂತೂ ವೇಷ ಕಳಚಿಟ್ಟ ಪಾತ್ರಧಾರಿಗಳು ಸ್ನಾನ 
ಮುಗಿಸಿಯೇ ಬಿಟ್ಟಿದ್ದಾರೆ;ಲಕಲಕ ಹೊಳೆದಿದ್ದಾರೆ.

ಎಲ್ಲ ಮುಗಿದಾದ ಮೇಲೆ ಕೊನೆಯದಾಗಿ ಬ್ರಹ್ಮಾಸ್ತ್ರ ಬಂದಿದೆ.ಎಲ್ಲ ಜೋಡಿಸಿಟ್ಟ ಪೋರ,ಖಾಲಿ ಪೆನ್ನನ್ನು 
ಕನ್ನಡಿಯ ಮೇಲೆ ಸುಮ್ಮನೇ ಗೀಚತೊಡಗಿದ್ದಾನೆ. ಪೋರನ ಈ ಕಾರ್ಯಕ್ಕೆ ಕನ್ನಡಿಯೂ ನಕ್ಕಂತಿದೆ;
ಸಾಥ್ ಕೊಟ್ಟಂತಿದೆ.ಪರಿಣಾಮವಾಗಿ,ಕನ್ನಡಿ ಮತ್ತು ಪೋರನ ಪ್ರೀತಿಗೆ ನಿಬ್ಬೇ ಸೋತು ಹೋಗಿದೆ!
ಮೊದಲಿಗೆ "ಕೀರ್.." ಎಂದು ಗುಡುಗಿ ಚೀವ್.. ಅನ್ನುತ್ತ ಸೋಲೊಪ್ಪಿಕೊಂಡಿದೆ..
ಅತ್ತ,ನಿಬ್ಬು ಪಾಲಿಶ್ ಆದಂತೆ ಕಂಡು ಕೆಲಸ ಮುಗಿಸಿದ ಖುಷಿ ಪೋರನ ಕಣ್ಣಲ್ಲಿ ಪ್ರತಿಫಲಿಸಿದೆ.

ಇತ್ತ,ವಿಷ ಕುಡಿಯದೇ ಬಟ್ಟಲೊಂದು ನೀಲಿನೀಲಿಯಾಗಿದೆ..

***  

46 comments:

Anonymous said...

ವಿಷ ಕುಡಿಯದೇ ಬಟ್ಟಲೊಂದು ನೀಲಿನೀಲಿಯಾಗಿದೆ..(ಅದಕ್ಕೇ) ಖುಷಿ ಪೋರನ ಕಣ್ಣಲ್ಲಿ ಪ್ರತಿಫಲಿಸಿದೆ....ಸಂಡೇ ಎಂಬ ಸೋಮಾರಿಯ ದಿನ ಹಾಗೆ...ಏ.ಕೆ.ರಾಮಾನುಜನ್ ಒಂದು ಘಳಿಗೆ ನೆನಪಾಗಿದ್ದು ಯಾಕೋ ನನಗೆ?! ನಿಮಗೆ ಎಲ್ಲಾ ಸಂಡೆಗಳಲ್ಲೂ ಇಂಥದ್ದೇ ಸೋಮಾರಿತನದ ಅನುಭವವಾಗಲಿ; ನಮಗೆ ನವಿಲುಗರಿಯ ಸ್ಪರ್ಶ ಆಗಿಂದ್ದಾಗ್ಗೆ ಆಗುತ್ತಿರಲಿ. ಕಲ್ಪನೆಗಳು ಎಂದೂ ಚಂದ, ಅದನ್ನು ನಿಮ್ಮ ಹಾಗೆ ಹಿಡಿದಿಟ್ಟರೆ ಮತ್ತೂ ಸೊಗಸು...:-)

Anonymous said...

ವಿಷ ಕುಡಿಯದೇ ಬಟ್ಟಲೊಂದು ನೀಲಿನೀಲಿಯಾಗಿದೆ..(ಅದಕ್ಕೇ) ಖುಷಿ ಪೋರನ ಕಣ್ಣಲ್ಲಿ ಪ್ರತಿಫಲಿಸಿದೆ....ಸಂಡೇ ಎಂಬ ಸೋಮಾರಿಯ ದಿನ ಹಾಗೆ...ಏ.ಕೆ.ರಾಮಾನುಜನ್ ಒಂದು ಘಳಿಗೆ ನೆನಪಾಗಿದ್ದು ಯಾಕೋ ನನಗೆ?! ನಿಮಗೆ ಎಲ್ಲಾ ಸಂಡೆಗಳಲ್ಲೂ ಇಂಥದ್ದೇ ಸೋಮಾರಿತನದ ಅನುಭವವಾಗಲಿ; ನಮಗೆ ನವಿಲುಗರಿಯ ಸ್ಪರ್ಶ ಆಗಿಂದ್ದಾಗ್ಗೆ ಆಗುತ್ತಿರಲಿ. ಕಲ್ಪನೆಗಳು ಎಂದೂ ಚಂದ, ಅದನ್ನು ನಿಮ್ಮ ಹಾಗೆ ಹಿಡಿದಿಟ್ಟರೆ ಮತ್ತೂ ಸೊಗಸು...:-)
Anjali Ramanna

Yatheesh said...

Joshiavare,

Super.....nanage naanu middle school mattu high school alli ee tharaha maaduttidda nenapu aagutta ide. Ink pennannu jaagarookateyinda balasuttidda dinagalu nenapaadavu.......

Dhanyavaadagalu,
yatheesh

satish said...

ಅಲ್ಲಾಲ್ಲ !!! ಎಲ್ಲರು ಅಂದ್ರೆ ನಮ್ಮ ಜಮಾನ್ದೊರು ಈ ರೀತಿ ತೆಪರ್ತನ ,ಇಲ್ಲ ಆಧುನಿಕ invention ಮಾಡಿದವರೇ ,ಆದರು ನಮ್ಮ ಮನ ಪಟಲ ದಿಂದ ಜಾರಿ ಹೋಗಿರೋದನ್ನ ನಿಮ್ಮ ಮನಸಿನಲ್ಲಿ ಹೇಗೆ ಚಿತ್ರಿಸಿ ಕೊಳ್ಳುತೀರಿ .
ಹ್ಯಾಟ್ಸ್ ಆಫ್ ನಿಮ್ಮ ನೆನಪಿನ ಶಕ್ತಿಗೆ ,ಎಲ್ಲೋ ಒಂದ್ ಕಡೆ ಹೊಟ್ಟೆ ಕಿಚ್ಚು ಶುರುವಾಗುತ್ತೆ ನಿಮ್ಮ ಈ ಬರಹ ಗಳನ್ನ ಓದಿದ ಮೇಲೆ ,ಅರೆ ನಿಮಗೆ ತೋಚ್ಚಿದ್ದು ನಮಿಗೆ ಯಾಕ್ ತೋಚಲ್ಲಅಂತ .ನನನ್ನ ಹೆಚ್ಚು ಕಡಿಮೆ ೨೨-೨೩ ವರುಷಗಳ ಹಿಂದಕ್ಕೆ ಕರ್ಕೊಂಡ್ ಹೋಗಿದಕ್ಕೆ ಧನ್ಯವಾದಗಳು .

Anonymous said...

ಪ್ರಿಯ ರಾಘವೇಂದ್ರ,
ಸೊಗಸಾದ ಬರೆಹ. ಹೊಟ್ಟೆಕಿಚ್ಚಾಗುವಷ್ಟು ಚೆನ್ನಾಗಿ ಬರೆದಿದ್ದೀರಿ.
ಇಂಟರ್ ನೆಟ್ ನ ಆತ್ಮರತಿ ಹುಚ್ಚಾಟಗಳ ನಡುವೆ ನಿಮ್ಮದು ಅಂತರಂಗ ಕಲಕುವ ವಿಶಿಷ್ಟ ಬರವಣಿಗೆ.
ಓದುವ ಖುಷಿ ಕೊಟ್ಟಿದ್ದಕ್ಕಾಗಿ ಥ್ಯಾಂಕ್ಸ್.
-ಸಂಪಾದಕೀಯ.

Ashok.V.Shetty, Kodlady said...

Superb sir........Sundara Baraha...

Dhanyavadagalu...

ರಾಘವೇಂದ್ರ ಜೋಶಿ said...

@ಅಂಜಲಿ ರಾಮಣ್ಣ,
ನಿಮ್ಮ ಪ್ರತಿಕ್ರಿಯೆ ನೋಡಿ ತುಂಬ ಖುಷಿ ಅನುಭವಿಸಿದೆ.
Since you have mentioned A K Ramanujam..
ಧನ್ಯವಾದ. :-)

ರಾಘವೇಂದ್ರ ಜೋಶಿ said...

@ಯತೀಶ್ ಅವರೇ,
ನಾನು ಇದನ್ನು ಬರೆಯುವಾಗ ನನ್ನ
ಶಾಲಾ ದಿನಗಳೇ ನನ್ನ ಕಣ್ಣ ಮುಂದಿದ್ದವು.
ಪೆನ್ನು ತೊಳಿಯೋದು-ಅದೊಂದು ಅದ್ಭುತ ಅನುಭವ.
ಅಲ್ವ? :-)

ರಾಘವೇಂದ್ರ ಜೋಶಿ said...

@ ಸತೀಶ್ ಅವರೇ,
ಹೌದು.ಇಂಥದ್ದನ್ನೆಲ್ಲ ಬರೆದರೆ ಯಾರು ಓದುತ್ತಾರೆ ಅಂತ
ಭಯ ನನಗೂ ಇತ್ತು.ಯಾಕೆಂದರೆ ಇವತ್ತು ಇದನ್ನೆಲ್ಲ ನಾವ್ಯಾರೂ
ಮಾಡೋಲ್ಲ.ಆದರೂ ಇಂಥ ಅನುಭವಗಳನ್ನು ನನ್ನಂತೆ ತುಂಬ ಜನ ಮಿಸ್ ಮಾಡಿಕೊಳ್ಳುತ್ತಿರಬಹುದೆಂಬ ಆಸೆ ಇತ್ತು.ಹಾಗಾಗಿ ಬರೆದೆ.
Thanks for your opinion.

ರಾಘವೇಂದ್ರ ಜೋಶಿ said...

@ಸಂಪಾದಕೀಯ ಬಳಗಕ್ಕೆ,
ನಿಮ್ಮ ಅಭಿಪ್ರಾಯ ನನ್ನಂಥವನಿಗೆ ತುಂಬ ಖುಷಿ ಕೊಡುತ್ತದೆ.
ಬ್ಲಾಗ್ ನಲ್ಲಿನ ಕಮೆಂಟುಗಳು ಇನ್ನಷ್ಟು ಚೆಂದಾಗಿ ಬರೆಯಲು
ಪ್ರೇರೇಪಿಸುತ್ತವೆ.ಧನ್ಯವಾದಗಳು. :-)

ರಾಘವೇಂದ್ರ ಜೋಶಿ said...

@ಅಶೋಕ ಅವರೇ,
"ಕನಸು-ಕನವರಿಕೆ"ಗೆ ಬಂದು ನಿಮ್ಮ ಅಭಿಪ್ರಾಯ
ತಿಳಿಸಿದ್ದಕ್ಕೆ ಧನ್ಯವಾದಗಳು.
ಇನ್ನಷ್ಟು ಚೆಂದ ಮಾಡಿ ಬರೆಯಲು ನಿಮ್ಮ ಪ್ರೋತ್ಸಾಹ ಅಗತ್ಯ.
ಪ್ರೀತಿ ಇರಲಿ..ಮತ್ತೇ ಸಿಗೋಣ..

shirin said...

[:))] very true..and beautyfully explained

_________________________
I have added cool emoticons to this message.
To see them go to http://x.exps.me?387c23e5a8caef19807727afff3f3739

ಜಲನಯನ said...

ರಾಘವೇಂದ್ರರೇ...ಹೌದು ಓದುವಾಗ ನನ್ನ ೧೯೭೦-೭೫ ರ ದಿನಗಳು ನೆನ್ಪಾದ್ದು ನಿಜ..ನನಗೆ ಹೀರೋ ಹೊರುವ ಸಾಮರ್ಥ್ಯ ಇರ್ಲಿಲ್ಲ ಆದ್ರೆ ನನಗೆ ನನ್ನ ಹಿರಿಯರು ಗಿಫ್ಹ್ಟ್ ಅಂತ ಕೊಟ್ಟಿದ್ದ "ಪ್ಲಾಟೋ" ಪೆನ್ನು ಮರೂನ್ ಬಣ್ಣದ್ದು ಈಗ್ಲೂ ನೆನಪು... ನಿಬ್ ಗಳು ಒಬ್ಬೊಬ್ಬ್ರಿಗೆ ಒಮ್ದೊಂದು ಲಕ್ಕಿ...ಹಹಹ ನಾಷ್ಟಾಲ್ಜಿಕ್ ನೆನಪುಗಳು...
ಧನ್ಯವಾದ ಇದನ್ನ ನೆನಪಿಸಿಕೊಳ್ಳೋಹಾಗೆ ಮಾಡಿದ್ದಕ್ಕೆ...

Anonymous said...

ನಿಜ ಇಷ್ಟ ಆಯಿತು.ಹಳೆಯ ಸಣ್ಣ ಸಣ್ಣ ಸಂಗತಿಗಳನ್ನು ಹೇಗೆ
ನೆನಪಿಸಿಕೊಂಡು ಬರೀತೀರಿ ನೀವು? ಇದೆಲ್ಲ ನಮ್ಮ ಅನುಭವ ಕೂಡ.
ನಾವು ಹೀಗೇ ನಿಬ್ ಕ್ಲೀನ್ ಮಾಡೋಕೆ ಬ್ಲೇಡ್ ಯೂಸ್ ಮಾಡಿದೀವಿ ಚಾಕ್ ಪೀಸ್ ಇಟ್ಕೊಂಡಿದೀವಿ.
ತ್ರಿಜ್ಯ,ಕೋನಮಾಪಕ,ನವಿಲುಗರಿ.. 24 hrs ಲ್ಯಾಪ್ ಟಾಪ್ ಮೊಬೈಲ್ ಜೋತೆಲಿರೋರಿಗೆ ಇದೆಲ್ಲ ನೆನಪಿದೆಯಲ್ಲ..ಖುಷಿಯಾಯ್ತು..thanx
jyothi

ರಾಘವೇಂದ್ರ ಜೋಶಿ said...

@ ಶಿರೀನ್ ಅವರೇ,
ಬ್ಲಾಗ್ ಗೆ ಬಂದು, ಓದಿ ಕಮೆಂಟಿಸಿದ್ದಕ್ಕೆ ಧನ್ಯವಾದಗಳು.

@ಜಲನಯನ,
ಹೌದು.ಹೀರೋ ಪೆನ್ನು ನನಗೂ ಗಗನ ಕುಸುಮವೇ ಆಗಿತ್ತು.
ಪ್ಲಾಜಾ ಪೆನ್ನೇ ಗತಿಯಾಗಿತ್ತು.. :-)

ರಾಘವೇಂದ್ರ ಜೋಶಿ said...

@ಜ್ಯೋತಿ ಅವರೇ,
ಲ್ಯಾಪ್ ಟಾಪ್ ಬಂದ ತಕ್ಷಣ ಅದನ್ನೆಲ್ಲ ಮರೆಯಲಾದೀತೇ?
ನೀವು ಹೇಳಿದಂತೆ ಇದೊಂಥರ ಎಲ್ಲರ ಅನುಭವ ಕೂಡ ಹೌದು.
ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. :-)

Girish Rao H said...

innashtu haleya nenapugalannu hekki thanni........naavuu.....flashbackge hogtheevi nim jothege......keep writing........

ಸಾಗರದಾಚೆಯ ಇಂಚರ said...

ತುಂಬಾ ಹತ್ತಿರವಾಗುವ ಬರಹ
ಶಬ್ದಗಳ ಬಳಕೆ, ಪೋರನ ಬಗೆಗಿನ ಕಾಳಜಿ
ಎಲ್ಲವು ತುಂಬಾ ಸುಂದರವಾಗಿ ಮೂಡಿವೆ

siddu said...

Nanna Balya nenapisikottidakke...nennina nibbu maate hudukuva tavaka huttisidakke...matte yavudadudaudakko Thanks Joshi

Ravishekar N J Globalgeleya said...

chennagide brother

ರಾಘವೇಂದ್ರ ಜೋಶಿ said...

@ ಗಿರೀಶ್ ರಾವ್ ಅವರೇ,
ಖಂಡಿತ ಪ್ರಯತ್ನಿಸುತ್ತೇನೆ.
ಅಂತರಂಗಕ್ಕೆ ಮುಟ್ಟುವ ಇಂಥ ಫ್ಲಾಶ್ ಬ್ಯಾಕ್ ಗಳು
ಬಹಳಷ್ಟು ಇರಬಹುದು.ಧನ್ಯವಾದ

ರಾಘವೇಂದ್ರ ಜೋಶಿ said...

@ಗುರು ಬಬ್ಬಿಗದ್ದೆ ಅವರೇ,(ಸಾಗರದಾಚೆಯ ಇಂಚರ)
ಥ್ಯಾಂಕ್ಸ್ ನಿಮ್ಮ ಅನಿಸಿಕೆಗೆ.
ಆ ಪೋರ ನಮ್ಮೆಲ್ಲರಲ್ಲೂ ಇದ್ದಾನೆ.
:-)

ರಾಘವೇಂದ್ರ ಜೋಶಿ said...

@ ಸಿದ್ದುಜೀ,
ಈ ನೆನಪು ನಿಮ್ಮಲ್ಲಿ ಸಂತೋಷ ಉಂಟು ಮಾಡಿದ್ದಕ್ಕೆ
ನನಗೂ ಖುಷಿಯಾಯ್ತು.ನೆನಪುಗಳ ಮೆರವಣಿಗೆ
ನಮ್ಮೆಲ್ಲರದೂ ಹೌದಲ್ಲವೇ? :-)

@ರವಿಶೇಖರ ಅವರೇ,
ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಸಂತೋಷ.
ಕಮೆಂಟಿಸಿದ್ದಕ್ಕೆ ಇನ್ನಷ್ಟು ಖುಷಿ.
ಮತ್ತೇ ಸಿಗೋಣ.. :-)

Narayan Bhat said...

ಆಪ್ತವಾಗುವ ಬರಹ..ತುಂಬಾ ಇಷ್ಟವಾಯ್ತು.

suresh kota said...

Very sweet! I like it:)

sunaath said...

ನನ್ನ ಶಾಲಾದಿನಗಳನ್ನು ಮತ್ತೆ ನೆನಪಿಸಿ, nostalgic ಸುಖ ನೀಡಿದ ಲೇಖನ. ಜಲನಯನರ ಬಳಿಗೆ ಇದ್ದಂತಹ ಪ್ಲೇಟೋ ಪೆನ್ನೇ ನನ್ನ ಬಳಿಗೂ ಇತ್ತು! A common bond!
RJ, ನಿಮಗೆ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ.

gayatri said...

Oh....Adbhutha sir.....seriously odidamele nanage gotthiridde nanna kannalli neeru.....Nane first comment barithedini ankondu nodidare agale yellaru ade santhosha ade balya na nensakodidare....Nanna childhood nenapagi thumba kushi ayithu...birtday ge thamma ninda copmass box, hero pen sikkiddu yella nenpu eega aste.....Monne super mkt nalli stationary section nalli nana vida pen, pencil nodi kushi patte...one boxnalli 50 pencils, 50 pens...nodi hegappa parents estu buy madathare antha nodida mele gothhayithu.......ega yella use and throw kala...yaru namma haage blade hidkondu pencil ketthudilla, haage kai, battalu yella masi agudilla bidi...........

ಸ೦ಧ್ಯಾ said...

ವಾಹ್! ಸ್ಕೂಲ್ ಗೆ ಕೊ೦ಡೊಯ್ಯುತ್ತಿದ್ದ ಆ ತಗಡಿನ ಪುಸ್ತಕದ ಬಾಕ್ಸ್, ಒಮ್ಮೆ ಊರಿಗೆ ಹೋಗುವಾಗ ಅದರಲ್ಲಿಟ್ಟು ಮರೆತಿದ್ದ ಪೇರಲ ಹಣ್ಣು ಬರುವಷ್ಟರಲ್ಲಿ ಗಡ್ಡ-ಮೀಸೆ ಬೆಳಸಿಕೊ೦ಡು, ಬಾಕ್ಸ್ ನ ಮುಚ್ಚ್ಳ ತೆಗೆದ ಕೂಡಲೆ ಹೆದರಿಸಿದ್ದು, ಒಮ್ಮೆ ಹೀಗೆ ಪೆನ್ ಕ್ಲೀನ್ ಮಾದಲು ಹೋಗಿ ನಿಬ್ಬು ಮುರಿದು ಅಮ್ಮನ ಕೈಲಿ ಬೈಸಿಕೊ೦ಡಿದ್ದು.... ಸವಿ ಸವಿ ನೆನಪು... ಪ್ರೈಮರಿ ಸ್ಕೂಲ್ ಹತ್ತಿರ ಗೂಡ೦ಗಡಿಯ ಟಾಫ಼ಿ ರುಚಿ ನಾಲಿಗೆ ತು೦ಬಾ... ಏನ್ ಛ೦ದ ಬರೀತೀರಿ!

ರಾಘವೇಂದ್ರ ಜೋಶಿ said...

@ನಾರಾಯಣ ಭಟ್ ಅವರೇ,
ಬರಹ ನಿಮಗೆ ಆಪ್ತವೆನಿಸಿದ್ದಕ್ಕೆ ಖುಷಿ.ಥ್ಯಾಂಕ್ಸ್.


@ ಸುರೇಶ ಕೋಟ,
ನೀವು ಯಾವಾಗೆಲ್ಲ ಕಮೆಂಟು ಮಾಡ್ತಿರೋ,
ಆವತ್ತಿನ ಬರಹ ನಿಜವಾಗಿಯೂ ಗುಡ್ ಅಂತಾನೇ ಲೆಕ್ಕ!
:-)

ರಾಘವೇಂದ್ರ ಜೋಶಿ said...

@ ಸುನಾಥ್ ಸರ್,
ಹೌದು ಸರ್,ಇವೆಲ್ಲ ನಮ್ಮ nostalgic ಸುಖಗಳೇ ಸೈ.ನನ್ನ ಬಳಿ ಇದ್ದಿದ್ದು ಪ್ಲಾಜಾ ಪೆನ್ನು.ಹಾಗಾಗಿ ಬರಹದಲ್ಲಿ ಅದೇ ಬಂತು.ಧನ್ಯವಾದಗಳು.

ರಾಘವೇಂದ್ರ ಜೋಶಿ said...

@ನಾರಾಯಣ ಭಟ್ ಅವರೇ,
ಬರಹ ನಿಮಗೆ ಆಪ್ತವೆನಿಸಿದ್ದಕ್ಕೆ ಖುಷಿ.ಥ್ಯಾಂಕ್ಸ್.
@ ಗಾಯತ್ರಿ ಅವರೇ,
so sweet of you.ನೀವು ಹೇಳಿದಂತೆ ಇವತ್ತಿನ ಕಾಲಘಟ್ಟದಲ್ಲಿ ಯಾರೂ ತಮ್ಮ ಪೆನ್ನನ್ನು ಕ್ಲೀನ್ ಮಾಡೋದಿಲ್ಲ.ನಾವೆಲ್ಲಾ ಒಂದೇ ಪೆನ್ನನ್ನು ವರ್ಷಗಟ್ಟಲೇ ಬಳಸಿದವರು.ಕ್ಯಾಮಲ್ ಇಂಕು,ಕ್ಯಾಮಲ್ ಕಂಪಾಸ್ ಬಾಕ್ಸು ನಮ್ಮನ್ನು ಬೆಳೆಸಿದ್ದು ಅಲ್ಲವೇ? ಬಹುಶಃ ಇದೇ
ಕಾರಣಕ್ಕೆ ನಾನೂ ಕೂಡ ಸ್ಟೇಷನರಿ ಸಾಮಾನು ಕೊಳ್ಳುವಾಗ
ಬಹಳ tempt ಆಗುತ್ತೇನೆ.ನಾನು ಯೂಸ್ ಮಾಡಲಿ,ಬಿಡಲಿ ಹೊಸ ಹೊಸ ಪೆನ್ನುಗಳನ್ನು ಖರೀದಿಸುತ್ತಲೇ ಇರುತ್ತೇನೆ..
:-)

ರಾಘವೇಂದ್ರ ಜೋಶಿ said...

@ ಸಂಧ್ಯಾ ಅವರೇ,
ಹೌದು.ಈ ಕಂಪಾಸ್ ಬಾಕ್ಸು ನಮ್ಮ ಪಾಲಿಗೆ ಸೇಫ್ಟಿ ಲಾಕರ್
ಆಗಿತ್ತೇನೋ.ಏನೆಲ್ಲ ಸಾಮಾನುಗಳನ್ನು ತುಂಬುತ್ತಿದ್ವಿ.
ಆದರೆ ಅದರ ಮುಚ್ಚಳದಲ್ಲಿ ಶಾಲೆಯ time table ಮಾತ್ರ
ಭದ್ರವಾಗೇ ಇರ್ತಿತ್ತು.. :-)
thanks for compliments.

Badarinath Palavalli said...

ವಾವ್ಹವ್!
ಈ ಬರಹ ನನ್ನ ಬಾಲ್ಯದ ನೆನಪುಗಳನ್ನು ಮೀಟಿತು. ಸೂಪರ್!

Mallikarjuna Barker said...

simply superub...............

ರಾಘವೇಂದ್ರ ಜೋಶಿ said...

@ ಬದರಿನಾಥರೇ,
@ಮಲ್ಲಿಕಾರ್ಜುನ,

ನಿಮ್ಮ ಓದಿಗೆ,ಪ್ರೋತ್ಸಾಹಕ್ಕೆ ಮತ್ತು ಅಭಿಪ್ರಾಯಗಳಿಗೆ ಋಣಿ.
ಧನ್ಯವಾದಗಳು. :-)

bharathi said...

ನೆನಪಿದೆಯಾ ನಿಮ್ಗೆ? ಪೆನ್ನು ತೊಳೆಯೋ ಮಹತ್ಕಾರ್ಯಕ್ಕೆ ಕೈ ಹಚ್ಚೋ ಮುನ್ನ ಎದೆಯಲ್ಲಿನ ತಳಮಳ? ಹಾಳಾದ್ದು ಅದ್ಯಾಕೋ ತೊಳೆದಾದ ಮೇಲೆ ಆ ಪೆನ್ನು ಮುಷ್ಕರ ಹೂಡಿ ಬಿಡ್ತಿತ್ತು ಕೆಲವೊಂದು ಸಲ. ಇಂಕು ಹೊರಗೇ ಬಾರದೆ ಭಲೆ ಕಾಟ ಕೊಟ್ತು ಬಿಡ್ತಿತ್ತು. ಅದಕ್ಕೆ ನಾನು ಈ ಕೆಲ್ಸಾನ ಆದಷ್ಟೂ ಪೋಸ್ಟ್ ಪೋನ್ ಮಾಡ್ತಾ ಹೋಗಿದ್ದೆ .. ಈಗ್ನೋಡಿ ಇಂಕಿಲ್ಲ ಪೆನ್ನಿಲ್ಲ ರೀಫಿಲ್ ಬದಲಿಸೋ ತಾಳ್ಮೆಯೂ ಇಲ್ಲ .. ಪೆನ್ನನ್ನೇ ಎತ್ತಿ ಎಸೆದು ಬೇರೆಯದ್ದು ಕೈಗೆತ್ತಿಕೊಳ್ತೀವಿ .. ಬದಲಾಗಿರೋ ಮೌಲ್ಯ??!!

ರಾಘವೇಂದ್ರ ಜೋಶಿ said...

@ ಭಾರತಿಯವರೇ,
ನಿಮ್ಮ ಅನುಭವವೂ ಚೆಂದ ಇದೆ.ಇವತ್ತು ನಮಗೆ
ಏನೆಲ್ಲ ಆಧುನಿಕ ಸೌಲಭ್ಯಗಳು ಲಭಿಸಿದ್ದರೂ ಕೆಲವೊಂದು
ಹಳೆಯ ಸಂಗತಿಗಳು ನಮ್ಮ ಅಂತರಂಗಕ್ಕೆ ಹತ್ತಿರವಾಗಿವೆ.
ಅವನ್ನು ಮತ್ತೇ ಪಡೆಯಲಾಗದಿದ್ದರೇನಂತೆ? ಅವು ಎಂದೆಂದಿಗೂ ಸುಂದರ..ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್.

ಈಶ್ವರ said...

Joshiyavare lekhan nimmma baraha top ! kannadadalli anivarya kaaranadinda baryalaagalilla .. thank you

ರಾಘವೇಂದ್ರ ಜೋಶಿ said...

@ಈಶ್ವರ ಭಟ್ ಅವರೇ,
ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ,ಲೇಖನ ಓದಿ ಕಮೆಂಟಿಸಿದ್ದಕ್ಕೆ ಥ್ಯಾಂಕ್ಸ್.
ಮತ್ತೇ ಸಿಗೋಣ. :-)

Manjunatha Kollegala said...

ತುಂಬಾ ದಿನಗಳಿಂದ ನನ್ನ ಬುಕ್ ಮಾರ್ಕ್ ನಲ್ಲಿದ್ದ ಇದಕ್ಕೆ ಇಂದು ಬಿಡುಗಡೆ. ಯಾರೂ ಗಮನಕೊಡದ ಇಂಥಾ ಚೇಷ್ಟೆಮಾಡುವಷ್ಟು ವಿರಾಮ ಆ ಪೋರನಿಗಲ್ಲದೆ ಇನ್ನಾರಿಗಿದ್ದೀತು. ನನ್ನ ಮಗನೂ ಇಂಥಾ ಘನಕಾರ್ಯಗಳನ್ನು ದಿನಬೆಳಗಾದರೆ ಮಾಡುತ್ತಿರುತ್ತಾನೆ; ಅದನ್ನು ನಾನೂ ತುಸು ಅಸೂಯೆಯಿಂದ ಗಮನಿಸುತ್ತಿರುತ್ತೇನೆ :) ಸೊಗಸಾದ ಬರಹ

ರಾಘವೇಂದ್ರ ಜೋಶಿ said...

@ಮಂಜುನಾಥರೇ,
ನಿಜ.ಅಂಥದೊಂದು ಅಪೂರ್ವ ಚೇಷ್ಟೆ ಮಾಡಲು
ಆ ಪೋರನಿಗಷ್ಟೇ ಸಾಧ್ಯ. ಈಗಿನ Use & throw
ಜಗತ್ತಿನಲ್ಲಿ ನಿಮ್ಮ ಮಗನೂ ಹೀಗೆ ಮಾಡುತ್ತಾನೆಂದರೆ-
ಅದು ಆತನ ಕ್ರಿಯೇಟಿವಿಟಿಯೇ ಸರಿ.. :-)
ನಿಮ್ಮ ಕಮೆಂಟಿಗೆ ಥ್ಯಾಂಕ್ಸ್.

Unknown said...
This comment has been removed by the author.
Unknown said...
This comment has been removed by the author.
Unknown said...

ನಿಮ್ಮ ನೆನಪಿನ ಶಕ್ತಿ ಚನ್ನಾಗಿದೆ ಅನ್ನುವುದು ನನ್ನ ಮೊದಲ ಪ್ರತಿಕ್ರಿಯೆ! ಎಷ್ಟೆಲ್ಲಾ ಚಿಕ್ಕ-ಚಿಕ್ಕ ವಿವರಗಳನ್ನ ಅಷ್ಟು ಅಚ್ಚುಕಟ್ಟಾಗಿ ಬರೆದಿದ್ದೀರ. ಮತ್ತು ಇ೦ತಹ ಪುಟ್ಟ ಪುಟ್ಟ ಅನುಭವಗಳು ನಿಮಗೆ ಖುಷಿ ಕೊಡುತ್ತವೆ ಅನ್ನುವುದು ಶ್ಲಾಘನೀಯ!
ಕಣ್ಣಿಗೆ ಕಟ್ಟಿದ೦ತಾಯ್ತು.
-Sumathi

Unknown said...
This comment has been removed by the author.
Unknown said...

ಜೋಶಿಗಳೇ, ಅದೇನ್ ಬರೀತೀರ್ ರೀ. ಹಂಗೆ ನಮ್ ಕಣ್ಣು ಮುಂದೆ ನಡಿತಾ ಇರೋ ಅಷ್ಟು ವಿವರವಾಗಿದೆ. Hats off