Wednesday, January 17, 2018

ಧಾವಂತಗಳ ಮಧ್ಯೆ ಕಂಡ ಸಂಕ್ರಾಂತಿ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 17.01.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)
ಟಿಪ್ಪಣಿ: ಕಳೆದ ವಾರದ ಅಂಕಣದಲ್ಲಿ ಕೆಂಪು, ಹಸಿರು, ನೀಲಿಗಳನ್ನು ಮೂಲಬಣ್ಣಗಳೆಂದು ಹೇಳಿದ್ದೆ. ಆದರೆ ಟೀವಿಪರದೆಯಂಥ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಮಾತ್ರ ಇದು ಅನ್ವಯ. ಮಿಕ್ಕಂತೆ ನೈಸರ್ಗಿಕವಾಗಿ ಕೆಂಪು, ಹಳದಿ ಮತ್ತು ನೀಲಿಗಳು ಮೂಲಬಣ್ಣಗಳಾಗಿವೆ- ಲೇ.                                                                                                        

4 comments:

ದೀಪಾ ಜೋಶಿ said...

ಹೌದು ಧಾವಂತ ಹಾಗೂ ಅಧ್ವಾನಗಳ ಮಧ್ಯೆ ಪುಟ್ಟ ಪುಟ್ಟ ಸಂಗತಿಗಳೇ ಖುಷಿ ತರುವುದು. ದಿನನಿತ್ಯದ ಬದುಕಿನಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುವ ವಿಷಯಗಳನ್ನು ಅದ್ಭುತ ಎನ್ನುವಂತೆ ಪ್ರಸ್ತುತ ಪಡಿಸಿದ ರೀತಿಗೆ ಸಲಾಂ

sunaath said...

ಸ್ವಾರಸ್ಯಕರವಾದ ಲೇಖನ. ಬದಲಾಗುತ್ತಿರುವ ಜೀವನಶೈಲಿಯಿಂದ ಹುಟ್ಟುತ್ತಿರುವ ತಳಮಳ, ಚಡಪಡಿಕೆ ಮೊದಲಾದವುಗಳ ನಡುವೆಯೇ, ಅಲ್ಲಲ್ಲಿ ಉಳಿದಿರುವ ಸರ್ವಪ್ರೀತಿಭಾವ ಹಾಗು ಮುಗ್ಧತೆ ಇವೆಲ್ಲವೂ ನಿಮ್ಮ ಲೇಖನದಲ್ಲಿ ‘ಕರಿಯು ಕನ್ನಡಿಯಲಿ ಅಡಗಿದಂತೆ’ ಬಿಂಬಿತವಾಗಿವೆ. ಇವು ‘ನಾಗರಕ ಹತಾಶೆ’ಯನ್ನು ಹಿಮ್ಮೆಟ್ಟಿಸಿ, ಬದುಕಿನಲ್ಲಿ ಪ್ರೀತಿಯನ್ನು ಮರುಹುಟ್ಟಿಸುತ್ತವೆ. ಇದು ಸಣ್ಣ ಕಾರ್ಯವಲ್ಲ, ಅಭಿನಂದನೆಗಳು!

ಟಿಪ್ಪಣಿ: ನಾವೆಲ್ಲರೂ ‘ನಾಗರಿಕ’ ಎನ್ನುವ ಪದವನ್ನು ರೂಢಿಸಿಕೊಂಡಾಗ, ಶ್ರೀರಂಗರು ‘ನಾಗರಕ’ ಎನ್ನುವ ಪದವನ್ನು ಬಳಸಿದರು. ಇದು ವ್ಯಾಕರಣರೀತ್ಯಾ ತಪ್ಪಲ್ಲ. ನಗರಿ>>>>ನಾಗರಿಕ; ನಗರ>>>>ನಾಗರಕ. ಆದರೆ, ಶ್ರೀರಂಗರು ‘ನಾಗರಕ’ ಪದವನ್ನು ಅರ್ಧವ್ಯಂಗ್ಯದಲ್ಲಿ ಬಳಸಿದ್ದಾರೆ.

ರಾಘವೇಂದ್ರ ಜೋಶಿ said...

ದೀಪಾ ಮ್ಯಾಡಂ,
ಹೌದು, ಇವೆಲ್ಲ ದಿನನಿತ್ಯದ ಸಣ್ಣಪುಟ್ಟ ಸಂಗತಿಗಳೇ ಸರಿ. ಮಾಮೂಲಿ ಸಂಗತಿಗಳು.
ಆದರೆ ನಮ್ಮ ದಿನನಿತ್ಯದ ಧಾವಂತಗಳಿಗೆ ಹೋಲಿಸಿದರೆ ಇವೇ ಸಾಧಾರಣ ಸಂಗತಿಗಳಲ್ಲಿ ನಮಗೊಂದಿಷ್ಟು ಚೇತರಿಕೆಯ ಮುಲಾಮು ದೊರಕಬಹುದೇನೋ ಅಂತನಿಸುತ್ತದೆ.
ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ 'ಕರಿಯು ಕನ್ನಡಿಯಲ್ಲಿ ಅಡಗಿದಂತೆ' ಅಂತನ್ನುವ ಮಾತು ತುಂಬ ಖುಷಿ ಕೊಟ್ಟಿತು.
ಎಷ್ಟು ಅದ್ಭುತವಾದ ರೂಪಕವಿದು!
ಮಿಕ್ಕಂತೆ, ಶ್ರೀರಂಗರ 'ನಾಗರಕ' ಟಿಪ್ಪಣಿ ಬಗ್ಗೆ ಕುತೂಹಲ ಮೂಡಿತು. ನಾನಿದನ್ನು ಕೇಳಿರಲಿಲ್ಲ.
ಧನ್ಯವಾದಗಳು.