Tuesday, June 14, 2011

ಬ್ರಿಗೇಡ್ ರೋಡಿನಲ್ಲಿ ಕಂಡವಳು


     ಇಂಟರ್ನೆಟ್ ಚಿತ್ರ 
    


ಡೆನಿಮ್ ಜೀನ್ಸು 
ಒರಟಾಗಿ ಕಟ್ಟಿದ ಕೂದಲು 
ತುರುಬದಲ್ಲೊಂದು ಹೆಚ್ ಬಿ ಪೆನ್ಸಿಲ್ಲು 
ಮುಂಗೈಗೆ ಬಂತು ಹೇರ್ ಬ್ಯಾಂಡು 
ಎಲ್ಲಾ ಅದಲು ಬದಲು ಕಂಚಿಕದಲು. 
ಆದರೂ ನಂಬಿಕೆಯಿದೆ:
ಜೀನ್ಸು ಇಷ್ಟು ಬೇಗ 
ಕಳೆದುಹೋಗುವ ಛಾನ್ಸೇ ಇಲ್ಲ. 
-
ಕಾಫಿಡೇನಲ್ಲಿ ವೀಕೆಂಡಿನ ಕಲರವ 
ಟೀಶರ್ಟ್ ಬರಹ ತಿವಿದು ಹೇಳುತ್ತಿದೆ: 
‘who cares?’
ಕಪ್ಪಿನಲ್ಲಿ ಹೃದಯ ಚಿತ್ತಾರದ ಬಿಂಬ 
ಸ್ವಾದ ಮಾತ್ರ ವಗರು ವಗರು 
ಈಗ ಬಂತು ಇದೋ ಬಂತು ಸಿಹಿ 
ಅನ್ನುವದರೊಳಗಾಗಿ ಕಾಫಿ ಮುಗಿದಿತ್ತು.
ಅಷ್ಟಾದರೂ ನಂಬಿಕೆಯಿದೆ:
ಜೀನ್ಸು ಇಷ್ಟು ಬೇಗ 
ಕಳೆದುಹೋಗುವ ಛಾನ್ಸೇ ಇಲ್ಲ. 
-
ಎದೆಯನ್ನು ಸುತ್ತುವರೆದ 
ಎಲುಬಿನ ಹಂದರ 
ಮತ್ತು 
ತಾವರೆ ಎಲೆಯ ಮೇಲಣ ಬಿಂದು-
ಎರಡರದ್ದೂ ಒಂದೇ 
ಅಚಲ ನಿರ್ಧಾರ:
ಅಂಟು,ಅಂಟದಿರು.
ಇನ್ನಾದರೂ ನಂಬಿಕೆಯಿದೆ:
ಜೀನ್ಸು ಇಷ್ಟು ಬೇಗ 
ಕಳೆದುಹೋಗುವ ಛಾನ್ಸೇ ಇಲ್ಲ. 
-
ದ್ರೌಪದಿಯಾಗುವ ತವಕವಿತ್ತು 
ಸ್ವಯಂವರದಲ್ಲಿ ಮಾತ್ರ 
ಶಬರಿಯಾಗೇ ಉಳಿದಳು 
ಇತ್ತ ಜಾನಕಿಯಾಗದೆ
ಅತ್ತ ಮೇನಕೆಯಾಗದೆ
ಬರೀ ಅಹಲ್ಯೆಯ ಕಲ್ಲಾದಳು. 
ಇಲ್ಲೀಗ ರಾಮನಿಲ್ಲ 
ಶಾಪಮುಕ್ತಿಯ ಸ್ಪರ್ಶವಿಲ್ಲ.    
ಇಷ್ಟಾದರೂ ಪ್ರತಿಸಂಜೆ 
ಆಕೆಯ ಕೋಣೆಯಿಂದ ತಂಬೂರಿ 
ಮೀಟಿದ ನಾದ ತೇಲಿಬರುತ್ತದೆ:
"ಚಿಂತೆಯಾತಕೋ ಬಯಲ ಭ್ರಾಂತಿಯಾತಕೋ.."
 -
ಎಷ್ಟಾದರೂ 
ಅಜ್ಜಿಯಿಂದ 
ಹರಿದು ಬಂದ 
ಜೀನ್ಸು-
ಹಾಗೆಲ್ಲ ಕಳೆದುಹೋಗುವ ಛಾನ್ಸೇ ಇಲ್ಲ!
--

28 comments:

satish said...

ಜೀನ್ಸ್ ಇಂದ ಜೀನ್ಸ್ !!! ಅಜ್ಜಿ ಜೀನ್ಸ್ ಇಂದ ಮೊಮ್ಮಗಳ ಜೀನ್ಸ್ .ಅದ್ಭುತ ಕಲ್ಪನೆ .

sunaath said...

RJ,
ಕೊನೆಯ ಸಾಲಿನವರೆಗೂ ‘ಜೀನ್ಸ್’ ತನ್ನ ಗುಟ್ಟನ್ನು ಕಾಯ್ದುಕೊಂಡು ಬಂದಿದೆ. ಅಜ್ಜಿಯ ‘ಜೀನ್ಸ್’ ಓದಿದ ಬಳಿಕ, ಮತ್ತೊಮ್ಮೆ ಕವನವನ್ನು ಸಾಗ್ರವಾಗಿ ಓದಿ,ಆರ್ಥ ಮಾಡಿಕೊಂಡು, ಖುಶಿಯನ್ನು ಅನುಭವಿಸಿದೆ. ನವೀನ, ‘ತುಂಟ’ ಕವನಕ್ಕಾಗಿ ಅಭಿನಂದನೆಗಳು.

Manjunatha Kollegala said...

Nice poem.

ಟೀಶರ್ಟ್ ಬರಹ ತಿವಿದು ಹೇಳುತ್ತಿದೆ:
‘who cares?’

ಇತ್ತ ಜಾನಕಿಯಾಗದೆ
ಅತ್ತ ಮೇನಕೆಯಾಗದೆ
ಬರೀ ಅಹಲ್ಯೆಯ ಕಲ್ಲಾದಳು.

ಈ ರೀತಿಯ ಸಾಲುಗಳು ಮುದಕೊಡುತ್ತವೆ. ಮತ್ತೆ ಆಧುನಿಕತೆಯ ಸಂಕೇತವಾದ ಜೀನ್ಸ್ ಪ್ರತಿ ಚರಣದ ಕೊನೆಯಲ್ಲೂ ಮರುಕಳಿಸುತ್ತಾ, ಆಯಾ ಚರಣಕ್ಕೆ ಸ್ಥಳೀಯ ಅರ್ಥವನ್ನು ಕಟ್ಟಿಕೊಡುತ್ತಾ ಕೊನೆಗೆ ಇದ್ದಕ್ಕಿದ್ದಂತೆ "ಎಷ್ಟಾದರೂ ಅಜ್ಜಿಯಿಂದ ಹರಿದು ಬಂದ ಜೀನ್ಸು" ಆಗಿ ಪಕ್ಕನೆ ಇಡೀ ಕವನವನ್ನು ಮತ್ತೊಮ್ಮೆ ಓದುವಂತೆ ಮಾಡುತ್ತದೆ, ಮತ್ತು ಇಡೀ ಕವನವನ್ನು ಬೇರೆಯೇ ಮಟ್ಟಕ್ಕೆ ಎತ್ತುತ್ತದೆ.

ಮತ್ತೆ ಇಂಗ್ಲಿಷಿನಲ್ಲೇ ಸಾಧ್ಯವಾಗದ ಪನ್ನನ್ನು ಇಂಗ್ಲಿಷಿನ ಪದಗಳನ್ನೇ (Jeans/Genes) ಉಪಯೋಗಿಸಿ ಕನ್ನಡದಲ್ಲಿ ಸಾಧಿಸಿರುವುದು ಬೆರಗುಗೊಳಿಸುತ್ತದೆ.

Wonderful.

ರಾಘವೇಂದ್ರ ಜೋಶಿ said...

@ಸತೀಶ್ ಅವರಿಗೆ,
ಹೌದು.ಇದು ಅಜ್ಜಿಯಿಂದ ಬಂದಂಥ ಜೀನ್ಸೇ!
:-)

@ಸುನಾಥ್ ಸರ್,
ಖುಷಿಯಾಯ್ತು ನೀವು ಹೇಳಿದ್ದು ಕೇಳಿ.
ನಿಜವಾಗಿಯೂ confuse ಆಗಲೆಂದೇ ಬಯಸಿ ಬಯಸಿ ಬರೆದಿದ್ದಿದು..
ಕೊನೆಗೆ ಹೀಗೆ ತಿರುವು ನೀಡಿದೆ.Thank You. :-)

ರಾಘವೇಂದ್ರ ಜೋಶಿ said...

@ಮಂಜುನಾಥರೇ,
ಸಿಕ್ಕಾಪಟ್ಟೆ ಖುಷಿಪಟ್ಟೆ ನಿಮ್ಮ ಮಾತು ಕೇಳಿ.
ನಿಜ ಹೇಳುವದಾದರೆ, ಕವನಕ್ಕಿಂತ ನಿಮ್ಮ interpretation ಚೆನ್ನಾಗಿದೆ.
ಧನ್ಯವಾದಗಳು.

Shivaling Sannalli said...

Sir Thumba chennagidhe...

armanikanth said...

joshi maama,
nimma kavite ge marulaagada bhoopa yaavaniddaane swamy?dayavittu nimma padyavannu kelavu sundariyarigooo kalisi...avarigooo khushiyaagali..
ಜೀನ್ಸು ಇಷ್ಟು ಬೇಗ
ಕಳೆದುಹೋಗುವ ಛಾನ್ಸೇ ಇಲ್ಲ. aha...ahaa...majaa kanri nimma andaaju...

ರಾಘವೇಂದ್ರ ಜೋಶಿ said...

@ಶಿವಲಿಂಗ ಸನ್ನಳ್ಳಿಯವರೇ,
ಬ್ಲಾಗಿಗೆ ಭೇಟಿ ಕೊಟ್ಟು ಕವಿತೆ ಓದಿ
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.

@ಮಣಿಕಾಂತ್,
ಅಯ್ಯಯ್ಯಪ್ಪ..ಎಂಥ ಪ್ರತಿಕ್ರಿಯೆ ಇದೂ..
ನಿಮ್ಮ ಪ್ರೀತಿಗೆ ದೊಡ್ ನಮಸ್ಕಾರ ಸ್ವಾಮೀ..
ಖುಷಿಯಾಯ್ತು ಕಣ್ರೀ.. :-)

Anonymous said...

Josh..
as someone already said,you have lifted the whole poem at some other height by synchronizing JEANS and GENES.
What a wonderful turn!!!

~Suesh

Gubbachchi Sathish said...

super sir.

ರಾಘವೇಂದ್ರ ಜೋಶಿ said...

@Anonymous,
Thanks for your appreciations.
:-)

@@ಗುಬ್ಬಚ್ಚಿ ಸತೀಶರೆ,
ನಿಮಗೂ ಥ್ಯಾಂಕ್ಸ್.
ನಿಮ್ಮ ಓದಿಗೆ.ನಿಮ್ಮ ಪ್ರೋತ್ಸಾಹಕ್ಕೆ.

ಅನಂತ್ ರಾಜ್ said...

ಜೀನ್ಸು ಇಷ್ಟು ಬೇಗ ಕಳೆದುಹೋಗುವ ಛಾನ್ಸೇ ಇಲ್ಲ - ಅತ್ತ್ಯುತ್ತಮ ಕಾನ್ಸೆಪ್ಟ್ ಮೇಲೆ ಸು೦ದರ ಜಾಲ ಹೆಣೆದಿದ್ದೀರಿ.
ಅಭಿನ೦ದನೆಗಳು.

Jyoti Hebbar said...

tumba tumba tumba chennagide kavana...

ರಾಘವೇಂದ್ರ ಜೋಶಿ said...

@ಅನಂತರಾಜ್ ಸರ್,
ಬ್ಲಾಗಿಗೆ ಸ್ವಾಗತ.ಓದಿ ಕಮೆಂಟಿಸಿದ್ದಕ್ಕೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

@ವಸಂತ್ ಅವರೇ,
ನಿಮಗೂ ಸ್ವಾಗತ.ಸತ್ಯ ಮತ್ತು ಭ್ರಮೆಗಳ ನಡುವೆ
ಅತ್ಯಂತ ತೆಳುವಾದ ಗೆರೆ ಇರುತ್ತದೆ ಎಂದು ಯಾವಾಗಲೋ ಓದಿದ ನೆನಪು.
ಧನ್ಯವಾದಗಳು.

ರಾಘವೇಂದ್ರ ಜೋಶಿ said...

@ಜ್ಯೋತಿ ಅವರೇ,
ನಿಮ್ಮ ಅನಿಸಿಕೆಗೆ ಅಭಾರಿ.
ಭೇಟಿ ಕೊಟ್ಟಿದ್ದಕ್ಕೆ ಖುಷಿ.

siddu said...

Joshi you rock....I took 20 and 3 readings to digest the poem.

ದ್ರೌಪದಿಯಾಗುವ ತವಕವಿತ್ತು
ಸ್ವಯಂವರದಲ್ಲಿ ಮಾತ್ರ
ಶಬರಿಯಾಗೇ ಉಳಿದಳು
ಇತ್ತ ಜಾನಕಿಯಾಗದೆ
ಅತ್ತ ಮೇನಕೆಯಾಗದೆ
ಬರೀ ಅಹಲ್ಯೆಯ ಕಲ್ಲಾದಳು.
ಇಲ್ಲೀಗ ರಾಮನಿಲ್ಲ
ಶಾಪಮುಕ್ತಿಯ ಸ್ಪರ್ಶವಿಲ್ಲ.
ಇಷ್ಟಾದರೂ ಪ್ರತಿಸಂಜೆ
ಆಕೆಯ ಕೋಣೆಯಿಂದ ತಂಬೂರಿ
ಮೀಟಿದ ನಾದ ತೇಲಿಬರುತ್ತದೆ:
"ಚಿಂತೆಯಾತಕೋ ಬಯಲ ಭ್ರಾಂತಿಯಾತಕೋ.."
are great lines

siddu said...

I mean I took 20 mins and read 3 times !!!

ರಾಘವೇಂದ್ರ ಜೋಶಿ said...

@ಸಿದ್ದುಜೀ,
ಹ್ಹ ಹ್ಹ ಹ್ಹ.. ಸ್ವಲ್ಪವೇ ಸ್ವಲ್ಪ ಹೊಸ ತಂತ್ರ ಇರಲಿ ಅಂತ ಬರೆದೆ.
ಹ್ಯಾಗೋ ಏನೋ ಕ್ಲಿಕ್ಕಾಗಿದೆ ಅನ್ಸುತ್ತೆ.. :-)
So nice of you!

Anonymous said...

Hi Raghu,
poem in very nice to read,
adhutha kalpane.
but this is not your genes.
still youhave written brainy poem.

ರಾಘವೇಂದ್ರ ಜೋಶಿ said...

@ಅನಾನಿಮಸ್,
ಭೇಟಿ ಕೊಟ್ಟು ಅನಿಸಿಕೆ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.
ಆದರೆ ಏನಂತ ಹೇಳಬಯಸಿದ್ದೀರಿ ಅಂತ ಗೊತ್ತಾಗಲಿಲ್ಲ.
ಹಾಗಾಗಿ :-(
ಹ್ಹಹ್ಹಹ್ಹ

Raghu said...

Mast mast hudugiyinada...must must jeans..

very nice poem.

Nimmava,
Raghu.

ರಾಘವೇಂದ್ರ ಜೋಶಿ said...

@ರಾಘು ಅವರೇ,
ಹ್ಹಹ್ಹಹ್ಹ.. Thanks. Liked Your comment.
ಆದರೆ ಅದು ಮಸ್ತ್ ಮಸ್ತ್ ಹುಡುಗಿಯಿಂದ ಮಸ್ತ್ ಮಸ್ತ್ Genes ಅಂತ ಆಗಬೇಕಾಗಿತ್ತಲ್ಲವೇ?
;-)

Badarinath Palavalli said...

ಒಳ್ಳೆ ಕವನ ಸರ್,

"ಇನ್ನಾದರೂ ನಂಬಿಕೆಯಿದೆ:
ಜೀನ್ಸು ಇಷ್ಟು ಬೇಗ
ಕಳೆದುಹೋಗುವ ಛಾನ್ಸೇ ಇಲ್ಲ."

ಸಾಲುಗಳು ಇಡೀ ಕವನವನ್ನು ಅಲೌಕಿಕತೆಗೆ ಕೊಂಡೊಯ್ಯುತ್ತದೆ. ನಿಮ್ಮ ಪೂರ್ತಿ ಬ್ಲಾಗ್ ಓದಿ ಮತ್ತೆ ಕಮೆಂಟ್ಸ್ ಬರೆಯುತ್ತೇನೆ.

ನನ್ನ ಬ್ಲಾಗಿಗೂ ಬನ್ನಿರಿ :
www.badari-poems.blogspot.com
www.badari-notes.blogspot.com
www.badaripoems.wordpress.com

ರಾಘವೇಂದ್ರ ಜೋಶಿ said...

@ಬದ್ರಿನಾಥರೆ,
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
ನಿಮ್ಮ ಬ್ಲಾಗಿಗೂ ಹೋಗಿ ಕಮೆಂಟಿಸುವೆ.

Anonymous said...

sikkapaTTe sikkaapaTTe......iShta aaytu.............:-) Anjali Ramanna

Anonymous said...

@Anjali Ramanna,

Thanks for your appreciation.
:-)
-RJ

Unknown said...

ಜೋಶಿಗಳೇ, ತುಂಬಾ ಚೆನ್ನಾಗಿದೆ.