Thursday, April 14, 2011

ತ್ರೈಮಾಶಿಕ ಲೆಕ್ಕ


ಷ್ಟೊಂದು ಕೋಳಿಗಳು
ಕೂಗುತ್ತವೆ
ಒಂದೇ ಒಂದು ಸೂರ್ಯನ
ಆಗಮನ ಸಾರಲು
-
ಎಷ್ಟೊಂದು ಮರಗಳು
ಉರುಳುತ್ತವೆ
ಒಂದೇ ಒಂದು
ಕವನ ಬರೆಯಲು
-
ಎಷ್ಟೊಂದು ಕಣ್ಣುಗಳು
ಹರಿದಾಡುತ್ತವೆ
ಒಂದೇ ಒಂದು
ಮುಗ್ಧೆ ತತ್ತರಿಸಲು
-
ಎಷ್ಟೊಂದು ಕೈಗಳು
ಬೇಡುತ್ತವೆ
ಒಂದೇ ಒಂದು
ಪರೀಕ್ಷೆ ಪಾಸಾಗಲು
-
ಎಷ್ಟೊಂದು ಕಾಲುಗಳು
ನೆಲಕ್ಕೊರಗುತ್ತವೆ
ಒಂದೇ ಒಂದು
ಗಮ್ಯ ತಲುಪಲು
-
ಎಷ್ಟೊಂದು ನಾಲಿಗೆಗಳು
ಜೊಲ್ಲಿಸುತ್ತವೆ
ಒಂದೇ ಒಂದು
ಕ್ಲಿಪ್ಪಿಂಗ್ ನೋಡಲು
-
ಎಷ್ಟೊಂದು ಸೀಶೆಗಳು
ಬರಿದಾಗುತ್ತವೆ
ಒಂದೇ ಒಂದು
ನೋವ ನೀಗಿಸಲು
-
ಎಷ್ಟೊಂದು ವೀರ್ಯಾಣು
ಕದನಕ್ಕಿಳಿಯುತ್ತವೆ
ಒಂದೇ ಒಂದು
ಕಂದನ ಸೃಷ್ಟಿಸಲು
-
ಎಷ್ಟೊಂದು?
ಎಷ್ಟೊಂದು?
ಚಿಕ್ಕಂದಿನಲ್ಲಿ ಅಕ್ಕ
ಹೇಳುತ್ತಿದ್ದ
ತ್ರೈಮಾಶಿಕ ಲೆಕ್ಕದ ನೆನಪು:
ಇಷ್ಟಕ್ಕೆ ಅಷ್ಟಾದರೆ
ಅಷ್ಟಕ್ಕೆ ಎಷ್ಟು???
---

2 comments:

Sushrutha Dodderi said...

ಆಹಾ! ಇವತ್ತು ನೋಡಿದೆ ನಿಮ್ಮ ಬ್ಲಾಗು. ಎಷ್ಟ್ ಚನಾಗ್ ಬರೀತೀರಾ ನೀವು!

ರಾಘವೇಂದ್ರ ಜೋಶಿ said...

@ಧನ್ಯವಾದ ಸುಶ್ರುತ ಅವರೇ,
ನಿಮ್ಮ ಹೆಸರನ್ನು ಆಗಾಗ ಅಲ್ಲಲ್ಲಿ ನೋಡುತ್ತಲೇ ಇರುತ್ತೇನೆ.
:-)